More

    ನೋವು ನಿವಾರಕ ಮಾತ್ರೆ ಸೇವಿಸುತ್ತಾ ಹಾಸಿಗೆಯಲ್ಲಿದ್ದೆ: ಕಣ್ಣೀರಿಟ್ಟ ರಿಯಾನ್ ಪರಾಗ್!

    ಜೈಪುರ: ದೇಸಿ ಟೂರ್ನಿಗಳ ಬಳಿಕ ತಮ್ಮ ಸ್ಪೋಟಕ ಆಟವನ್ನು ಐಪಿಎಲ್‌ನಲ್ಲೂ ಮುಂದುವರಿಸಿದ ಯುವ ಬ್ಯಾಟರ್ ರಿಯಾನ್ ಪರಾಗ್ 17ನೇ ಆವೃತ್ತಿ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್​ಗೆ ಗೆಲುವು ತಂದುಕೊಟ್ಟಿದ್ದಾರೆ. ಈ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್‌ಗೆ ಮತ್ತೆ ಶಾಕ್​: ಆದಾಯ ತೆರಿಗೆ ಇಲಾಖೆಯಿಂದ 1,700 ಕೋಟಿ ರೂ. ಮೊತ್ತದ ನೋಟಿಸ್!

    ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ರಾಜಸ್ಥಾನಕ್ಕೆ 12 ರನ್ ಗೆಲುವು ಲಭಿಸಿತು. ರಾಜಸ್ಥಾನಕ್ಕೆ ಸತತ 2ನೇ ಗೆಲುವಿಗೆ ಕಾರಣರಾದ ರಿಯಾನ್​ ಪರಾಗ್​ ಅವರು ಈ ಬ್ಯಾಟಿಂಗ್​ ಪ್ರದರ್ಶನಕ್ಕೂ ಮುನ್ನ ಅನುಭವಿಸಿದ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಮಹತ್ವದ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

    ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ರಿಯಾನ್​, ನಾನು ನನ್ನ ಭಾವನೆಗಳನ್ನು ನಿಯಂತ್ರಿಸುತ್ತಿದ್ದೇನೆ. ನನ್ನ ಅಮ್ಮ ಇಲ್ಲಿದ್ದಾರೆ.ಕಳೆದ 3-4 ವರ್ಷಗಳಿಂದ ನಾನು ಸಾಕಷ್ಟು ಹೋರಾಟ ಮಾಡಿದ್ದೇನೆ. ನನ್ನ ಹೋರಾಟವನ್ನು ಅವರು ನೋಡಿದ್ದಾರೆ ಎಂದು ತಮ್ಮ ಹೋರಾಟದ ದಿನಗಳನ್ನು ನೆನೆಸಿಕೊಂಡಿದ್ದಾರೆ. ತಾನು ನಡೆದು ಬಂದ ಹಾದಿಯನ್ನು ನೆನೆಸಿಕೊಂಡು ಭಾವುಕರಾಗಿದ್ದಾರೆ.

    ನೋವು ನಿವಾರಕ ಮಾತ್ರೆ ಸೇವಿಸುತ್ತಾ ಹಾಸಿಗೆಯಲ್ಲಿದ್ದೆ: ಕಣ್ಣೀರಿಟ್ಟ ರಿಯಾನ್ ಪರಾಗ್!

    ಕ್ಯಾಮರಾ ಮುಂದೆ ಭಾವುಕರಾದ ರಿಯಾನ್: ಕಳೆದ ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದೆ ಇದರಿಂದ ನಿರಂತರವಾಗಿ ನೋವು ನಿವಾರಕ ಮಾತ್ರೆ ಸೇವಿಸುತ್ತಾ ಹಾಸಿಗೆಯಲ್ಲಿದ್ದೆ. ಆದರೆ ಇಂದು ನನ್ನ ತಂಡಕ್ಕೆ ನೀಡಿದ ಕೊಡುಗೆ ನನಗೆ ಅತೀವ ಸಂತೋಷ ತಂದಿದೆ ಎಂದು ಪರಾಗ್ ಹೇಳಿದ್ದಾರೆ.
    ಅಸ್ಸಾಂ ಮೂಲದ 22 ವರ್ಷದ ಕ್ರಿಕೆಟಿಗನಾಗಿರುವ ಪರಾಗ್​ ಸೈಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದರು. ಆಡಿದ 10 ಇನ್ನಿಂಗ್ಸ್‌ಗಳಲ್ಲಿ 510 ರನ್‌ ಸಿಡಿಸಿದ್ದರು. 56 ಐಪಿಎಲ್​ ಪಂದ್ಯವಾಡಿ 727 ರನ್​ ಬಾರಿಸಿದ್ದಾರೆ. 4 ವಿಕೆಟ್​ ಕೂಡ ಪಡೆದಿದ್ದಾರೆ.

    ನನ್ನ ಆಟದ ಬಗ್ಗೆ ನನ್ನಲ್ಲಿ ಸಂಪೂರ್ಣ ವಿಶ್ವಾಸವಿದೆ. ಈ ಆವೃತ್ತಿಯಲ್ಲಿ ನಿರೀಕ್ಷೆಗೆ ಮೀರಿ ಆಡಬೇಕಿದೆ. ನಾನು ದೇಶಿಯ ಕ್ರಿಕೆಟ್​ನಲ್ಲಿ ಆಡಿದ್ದರಿಂದ ವಿಶ್ವಾಸ ಹೆಚ್ಚಿದೆ. ಇನ್ನು 20 ಓವರ್​ಗಳ ಪಂದ್ಯಗಳಲ್ಲಿ ಅಗ್ರ ನಾಲ್ವರು ಉತ್ತಮ ಕ್ರಿಕೆಟ್​ ಆಡಬೇಕಿದೆ. ಮೊದಲ ಪಂದ್ಯದಲ್ಲಿ ತಂಡದ ನಾಯಕ ಸಂಜು ಭಯ್ಯಾ ಅದನ್ನು ಮಾಡಿದರು ಎಂದು ಹೇಳಿದರು.

    ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದ ಪರಾಗ್​ ಕೇವಲ 45 ಎಸೆತಗಳಿಂದ 84 ರನ್​ ಬಾರಿಸಿದ್ದರು. ಅವರ ಈ ಸೊಗಸಾದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 6 ಆಕರ್ಷಕ ಸಿಕ್ಸರ್​ ಮತ್ತು 7 ಬೌಂಡರಿ ದಾಖಲಾಯಿತು. ಅದರಲ್ಲೂ ಅನ್ರಿಚ್​ ನೋರ್ಜೆ ಅವರಿಗೆ ಸರಿಯಾಗಿ ದಂಡಿಸಿದರು.
    ಪರಾಗ್​ಗೆ ಉತ್ತಮ ಭವಿಷ್ಯವಿದೆ ಎಂದ ಸಂಜು ಸ್ಯಾಮ್ಸನ್​: ಕಳೆದ ಕೆಲವು ವರ್ಷಗಳಲ್ಲಿ ರಿಯಾನ್ ಪರಾಗ್ ದೊಡ್ಡ ಹೆಸರಾಗಿದ್ದಾರೆ. ನಾನು ಎಲ್ಲಿಗೆ ಹೋದರೂ ಜನರು ಅವರ ಬಗ್ಗೆ ನನ್ನನ್ನು ಕೇಳುತ್ತಾರೆ. ಅವರು ಭಾರತೀಯ ಕ್ರಿಕೆಟ್‌ಗೆ ನೀಡಬಹುದಾದ ವಿಶೇಷತೆ ಇದೆ ಎಂದು ಸ್ಯಾಮ್ಸನ್ ಹೇಳಿದ್ದಾರೆ.

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಾಸ್ಯನಟ ವಿವೇಕ್ ಮಗಳು!: ಮದುವೆಗೆ ಹರಸಲು ಬಂದವರಿಗೆ ವಿಶೇಷ ಉಡುಗೊರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts