More

    ಕಾಂಗ್ರೆಸ್‌ಗೆ ಮತ್ತೆ ಶಾಕ್​: ಆದಾಯ ತೆರಿಗೆ ಇಲಾಖೆಯಿಂದ 1,700 ಕೋಟಿ ರೂ. ಮೊತ್ತದ ನೋಟಿಸ್!

    ನವದೆಹಲಿ: ಲೋಕಸಭೆ ಚುನಾವಣೆಗೆ ಮುನ್ನ ಹಣದ ಕೊರತೆಯಿರುವ ಕಾಂಗ್ರೆಸ್​ ಪಕ್ಷಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್​ ಪಕ್ಷಕ್ಕೆ 1700 ಕೋಟಿ ರೂ. ಡಿಮ್ಯಾಂಡ್​ ನೋಟಿಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಾಸ್ಯನಟ ವಿವೇಕ್ ಮಗಳು!: ಮದುವೆಗೆ ಹರಸಲು ಬಂದವರಿಗೆ ವಿಶೇಷ ಉಡುಗೊರೆ!

    2018-19ನೇ ಸಾಲಿಗೆ ಸಂಬಂಧಿಸಿದಂತೆ ಐ-ಟಿ ರಿಟರ್ನ್ಸ್ ಸಲ್ಲಿಸದ ಕಾರಣಕ್ಕೆ 201 ಕೋಟಿ ರೂ. ದಂಡ ಪಾವತಿಸಬೇಕು ಎಂದು ನೋಟಿಸ್ ನೀಡಿದ್ದ ಆದಾಯ ತೆರಿಗೆ ಇಲಾಖೆಯು, ಕಾಂಗ್ರೆಸ್ ಪಕ್ಷದ ಒಂಬತ್ತು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿತ್ತು. ಈ ಮೇಲಿನ ವರ್ಷಗಳ ತೆರಿಗೆ ಮರುಮೌಲ್ಯಮಾಪನ ಸಂಬಂಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅರಂಭಿಸಿದ್ದ ಪ್ರಿಕ್ರಿಯೆಯ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್ ಮನವಿಯನ್ನು ಗುರುವಾರ ವಜಾಗೊಳಿಸಿದೆ.

    ನ್ಯಾಯಮೂರ್ತಿ ಯಶವಂತ್ ವರ್ಮಾ ಮತ್ತು ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರ ವಿಭಾಗೀಯ ಪೀಠವು ತನ್ನ ಹಿಂದಿನ ತೀರ್ಪಿನಂತೆಯೇ ಕಾಂಗ್ರೆಸ್ ಸಲ್ಲಿಸಿದ ನಾಲ್ಕು ಅರ್ಜಿಗಳನ್ನು ಗುರುವಾರ ವಜಾಗೊಳಿಸಿದೆ. ಈ ಮೂಲಕ ಮೂರು ವರ್ಷಗಳ ಮರುಮೌಲ್ಯಮಾಪನ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್​ ಪಕ್ಷದ ಒಂದೇ ರೀತಿಯ ಅರ್ಜಿಗಳನ್ನು ವಜಾಗೊಳಿಸಲಾಗಿದೆ.

    ಇತ್ತೀಚೆಗೆ, ದೆಹಲಿ ಹೈಕೋರ್ಟ್ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ಆದೇಶವನ್ನು ಎತ್ತಿಹಿಡಿದಿದೆ. ಕಾಂಗ್ರೆಸ್ ವಿರುದ್ಧ ಬಾಕಿ ಇರುವ 105 ಕೋಟಿ ರೂ.ಗಿಂತ ಹೆಚ್ಚಿನ ತೆರಿಗೆ ವಸೂಲಾತಿಗಾಗಿ ಆದಾಯ ತೆರಿಗೆ ನೋಟಿಸ್‌ಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ನ್ಯಾಯಾಲಯವು ITAT ಆದೇಶವನ್ನು ಎತ್ತಿಹಿಡಿಯುವಾಗ, ಅರ್ಜಿದಾರರ ಕಾಂಗ್ರೆಸ್ ಪಕ್ಷಕ್ಕೆ ದೂರಿನ ಜೊತೆಗೆ ಮೇಲ್ಮನವಿ ನ್ಯಾಯಾಧಿಕರಣವನ್ನು ಹೊಸದಾಗಿ ಸ್ಥಳಾಂತರಿಸಲು ಸ್ವಾತಂತ್ರ್ಯವನ್ನು ನೀಡಿದೆ.

    ಆದಾಯ ತೆರಿಗೆ ಇಲಾಖೆಯ ಕ್ರಮದಿಂದಾಗಿ ಪಕ್ಷದ ಎಲ್ಲ ರಾಜಕೀಯ ಚಟುವಟಿಕೆಗಳ ಮೇಲೆ ಪರಿಣಾಮ ಉಂಟಾಗಿದೆ. ಏಪ್ರಿಲ್ 19 ರಿಂದ ಪ್ರಾರಂಭವಾಗುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಆರ್ಥಿಕವಾಗಿ ಪಕ್ಷದ ಕತ್ತು ಹಿಸುಕಿದೆ ಮತ್ತು ತೆರಿಗೆ ಅಧಿಕಾರಿಗಳನ್ನು ಪಕ್ಷದ ವಿರುದ್ಧ ಬಳಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಾಸ್ಯನಟ ವಿವೇಕ್ ಮಗಳು!: ಮದುವೆಗೆ ಹರಸಲು ಬಂದವರಿಗೆ ವಿಶೇಷ ಉಡುಗೊರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts