'ಶಾಲೆಗಳಿಗೆ ಕೇಂದ್ರ ವ್ಯಯಿಸೋದು 4%, ನಾವು ಮಾಡೋದು 40%! ಪ್ರಧಾನಿ ವಿರುದ್ಧ ದೆಹಲಿ ಸಿಎಂ ವಾಗ್ದಾಳಿ

Untitled design (5)
Published on

ಹೊಸದಿಲ್ಲಿ: ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯ ಐದನೇ ಬಾರಿಗೆ ನೀಡಿದ್ದ ಸಮನ್ಸ್​ ಅನ್ನು ತಪ್ಪಿಸಿಕೊಂಡ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ಖಂಡನೆ ವ್ಯಕ್ತಪಡಿಸಿದ್ದರು. ಇದೀಗ ಈ ದಾಳಿಯನ್ನು ಮುಂದುವರೆಸಿದ ಕೇಜ್ರಿವಾಲ್​, ಶಾಲೆಗಳಿಗೆ ಕೇಂದ್ರ ವ್ಯಯಿಸೋದು 4%, ಆದ್ರೆ ನಾವು ಖರ್ಚು ಮಾಡಿರೋದು 40% ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ (ಫೆ.4) ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದ ದೆಹಲಿ ಸಿಎಂ, ಕಳೆದ ಎಂಟು ವರ್ಷಗಳಿಂದ ದೆಹಲಿ ಸರ್ಕಾರ ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಒಟ್ಟು ಬಜೆಟ್‌ನಲ್ಲಿ 40 ಪ್ರತಿಶತದಷ್ಟು ಖರ್ಚು ಮಾಡುತ್ತಿದೆ. ಆದ್ರೆ, ಕೇಂದ್ರ ಸರ್ಕಾರ ಕೇವಲ 4ರಷ್ಟು ಮಾತ್ರ ವ್ಯಯಿಸುತ್ತಿದೆ ಎಂದು ದೂರಿದರು.

ಇಂದು ರಾಷ್ಟ್ರ ರಾಜಧಾನಿಯ ರೋಹಿಣಿಯಲ್ಲಿ ಹೊಸ ಶಾಲಾ ಕಟ್ಟಡಗಳಿಗೆ ಶಂಕುಸ್ಥಾಪನೆ ಮಾಡಿದ ಸಿಎಂ ಕೇಜ್ರಿವಾಲ್, "ನಾವು ಶಾಲೆಗಳು, ಕ್ಲಿನಿಕ್‌ಗಳು ಮತ್ತು ಆಸ್ಪತ್ರೆಗಳನ್ನು ಉದ್ಘಾಟಿಸಲು ಹೋದಾಗ, ಇತರ ಪಕ್ಷಗಳ ಜನರು ನಮ್ಮ ವಿರುದ್ಧ ಘೋಷಣೆಗಳನ್ನು ಕೂಗಲು ಅಲ್ಲಿಗೆ ದೌಡಾಯಿಸುತ್ತಾರೆ. ಇಂತಹ ಕೊಳಕು ರಾಜಕೀಯ ಮಾಡಬೇಡಿ" ಎಂದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net