ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೊರಟ ಕುಟುಂಬ ಪತ್ತೆ

Police logo
Published on

ಮೈಸೂರು: ಸಾಲಗಾರರ ಕಾಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ವಾಯ್ಸ ಮೆಸೇಜ್ ಕಳುಹಿಸಿ ನಾಪತ್ತೆಯಾಗಿದ್ದ ಕುಟುಂಬದವರು ಪತ್ತೆಯಾಗಿದ್ದು, ಇದರೊಂದಿಗೆ ಪ್ರಕರಣ ಸುಖಾಂತ್ಯಗೊಂಡಿದೆ.

ಕೆ.ಜಿ.ಕೊಪ್ಪಲಿನ ಮಹೇಶ್(35), ಪತ್ನಿ ಭವಾನಿ(28), ಪುತ್ರಿ ಪ್ರೇಕ್ಷಾ(3), ಮಹೇಶ್ ತಂದೆ ಮಹದೇವಪ್ಪ (65) ಹಾಗೂ ತಾಯಿ ಸುಮಿತ್ರ(55) ನಾಪತ್ತೆಯಾಗಿದ್ದರು. ಮಹೇಶ್ ಅವರು ಸಾಲಗಾರರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಸ್ನೇಹಿತರೊಬ್ಬರಿಗೆ ವಾಯ್ಸ ಮೆಸೇಜ್ ಕಳುಹಿಸಿ ಜ.20 ರಿಂದ ನಾಪತ್ತೆಯಾಗಿದ್ದರು. ಕಾಣೆಯಾದವರನ್ನು ಹುಡುಕಿಕೊಡುವಂತೆ ಭವಾನಿ ಸಹೋದರ ಜಗದೀಶ್ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಸಂಬಂಧಿಕರನ್ನು ಸಂಪರ್ಕಿಸಿರುವ ಮಹೇಶ್ ಅವರು ಸುರಕ್ಷಿತವಾಗಿ ಇದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net