AR Rahman-Saira Divorce; ವಿಚ್ಛೇದನ ಅವರಿಬ್ಬರ ವೈಯಕ್ತಿಕ ನಿರ್ಧಾರ.. ಅಪ್ಪ-ಅಮ್ಮಗೆ ಏನ್ ಬೇಕೋ ಅದನ್ನೇ ಮಾಡಿದ್ದಾರೆಂದ್ರು ಮಕ್ಕಳು

AR Rahman Family
Published on

ಚೆನ್ನೈ: ಚಿತ್ರರಂಗದಲ್ಲಿ ಇದೀಗ ಮತ್ತೊಮ್ಮೆ ಡಿವೋರ್ಸ್ ಸರಣಿ ಮುಂದುವರೆದಿದ್ದು, ಕಾಲಿವುಡ್​ನಲ್ಲೇ ಹೆಚ್ಚು ಎಂದರೆ ತಪ್ಪಾಗಲಾರದು. ಕೆಲ ದಿನಗಳ ಹಿಂದೆ ವಿಚ್ಛೇದನ ಘೋಷಿಸಿದ್ದ ಜಯಂ ರವಿ ಬಳಿಕ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ (AR Rahman)​  ಅವರ ಪತ್ನಿ ಸಾಯಿರಾ (Saira) ಅವರು ಡಿವೋರ್ಸ್​ (Divorce) ಘೋಷಣೆ ಮಾಡಿದ್ದು, ಈ ವಿಚಾರ ಚಿತ್ರರಂಗದಲ್ಲೇ ದೊಡ್ಡ ಸಂಚಲವನ್ನೇ ಸೃಷ್ಟಿಸಿದೆ.

ಸಾಯಿರಾ ಪರ ವಕೀಲರಾದ ವಂದನಾ ಶಾ, ದಂಪತಿಯ ಡಿವೋರ್ಸ್​ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಮದುವೆಯಾಗಿ 29 ವರ್ಷಗಳ ನಂತರ ಸಾಯಿರಾ ಅವರು ಎ.ಆರ್. ರೆಹಮಾನ್‌ನಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇಬ್ಬರ ಸಂಬಂಧದಲ್ಲಿ ಗಮನಾರ್ಹ ಭಾವನಾತ್ಮಕ ಒತ್ತಡದ ಕಾರಣದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇಬ್ಬರ ನಡುವಿನ ಆಳವಾದ ಪ್ರೀತಿಯ ಹೊರತಾಗಿಯೂ, ದಂಪತಿಗೆ ಎದುರಾಗಿರುವ ತೊಂದರೆಗಳು ಅವರ ನಡುವೆ ಅಂತರವನ್ನು ಸೃಷ್ಟಿಸಿವೆ ಎಂದು ವಂದನಾ ಶಾ ತಿಳಿಸಿದ್ದಾರೆ.

1995ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿಯು ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡು ಮಗನಿದ್ಧಾನೆ. ಅವರ ಹಿರಿಯ ಮಗಳಿಗೆ ಈಗಾಗಲೇ ಮದುವೆಯಾಗಿದ್ದು, ಈ ಸಮಯದಲ್ಲಿ ರೆಹಮಾನ್​ ದಂಪತೊ ವಿಚ್ಛೇದನ ಪಡೆಯುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಇದೀಗ ತಮ್ಮ ಪೋಷಕರು ವಿಚ್ಛೇದನ ಪಡೆಯುತ್ತಿರುವ ಬಗ್ಗೆ ರೆಹಮಾನ್​- ಸಾಯಿರಾ (AR Rahman-Saira) ದಂಪತಿ ಮಕ್ಕಳಾದ ಖತೀಜಾ, ರಹೀಮಾ ಮತ್ತು ಅಮೀನ್ ತಮ್ಮ ಪೋಷಕರ ವಿಚ್ಛೇದನದ ಕುರಿತು ಮಾತನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್​ ಮಾಡಿದ್ದಾರೆ. 

ದಂಪತಿಯ ಹಿರಿಯ ಪುತ್ರಿಯಾದ ಖತೀಜಾ, ಈ ವಿಷಯವನ್ನು ಅತ್ಯಂತ ಗೌಪ್ಯತೆ ಮತ್ತು ಗೌರವದಿಂದ ಪರಿಗಣಿಸಬಹುದಾದರೆ ನಾನು ಅದನ್ನು ಬಹಳವಾಗಿ ಪ್ರಶಂಸಿಸುತ್ತೇನೆ. ನಿಮ್ಮ ಪರಿಗಣನೆಗೆ ಧನ್ಯವಾದಗಳು ಎಂದು ಪೋಸ್ಟ್​ ಮಾಡಿದ್ದಾರೆ. 

Rehman Elder Daughter

ದಂಪತಿಯ ಎರಡನೇ ಪುತ್ರಿ ರಹೀಮಾ, ಅವರಿಬ್ಬರು ವಿಚ್ಛೇದನ ಪಡೆಯುತ್ತಿರುವುದು ವೈಯಕ್ತಿಕ ನಿರ್ಧಾರವಾಗಿದ್ದು, ರೆಹಮಾನ್ ಮತ್ತು ಸೈರಾ ಇಬ್ಬರೂ ವಯಸ್ಕರಾಗಿರುವುದರಿಂದ ತಮಗಾಗಿ ಉತ್ತಮ ಆಯ್ಕೆಗಳನ್ನು ಮಾಡಲು ಸಮರ್ಥರಾಗಿದ್ದಾರೆ ಎಂದು ಪೋಸ್ಟ್​ ಮಾಡಿದ್ದಾರೆ. 

ಸಂಗೀತ ನಿರ್ದೇಶಕ ಮತ್ತು ಗಾಯಕನಾಗಿ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ದಂಪತಿಯ ಕಿರಿಯ ಪುತ್ರ ಅಮೀನ್, ತನ್ನ ತಾಯಿ ಮತ್ತು ತಂದೆಯ ಬೇರ್ಪಡುವಿಕೆಯ ಸುದ್ದಿ ಅವರಿಗೆ ಬಹಳ ದುಃಖ ತಂದಿದೆ. ಈ ಸಂದರ್ಭದಲ್ಲಿ, ತನಗೆ ಮತ್ತು ತನ್ನ ಕುಟುಂಬಕ್ಕೆ ಅಗತ್ಯವಿರುವ ಖಾಸಗಿ ಸಮಯವನ್ನು ನೀಡುವಂತೆ ವಿನಮ್ರವಾಗಿ ವಿನಂತಿಸಿದ್ದಾರೆ. ಈ ಪರಿಸ್ಥಿತಿಯಿಂದ ಹೊರಬರಲು ತಮಗೆ ಸಮಯ ಬೇಕು ಎಂದು ಪೋಸ್ಟ್​ ಮಾಡಿದ್ದಾರೆ.

rehman son

ರೆಹಮಾನ್ (AR Rahman) ಕೂಡ ಡಿವೋರ್ಸ್​ ಅನ್ನು ಖಚಿತಪಡಿಸಿದ್ದಾರೆ. ನಾವು 30 ವರ್ಷ ವೈವಾಹಿಕ ಜೀವನ ಪೂರೈಸಲು ಆಶಿಸಿದ್ದೆವು. ಆದರೆ, ಎಲ್ಲವೂ ಕಾಣದ ಅಂತ್ಯವನ್ನು ಹೊಂದಿದೆ ಎಂದು ತೋರುತ್ತದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಈ ಬೇರ್ಪಡಿಕೆಯಲ್ಲಿ ನಾವು ಅರ್ಥವನ್ನು ಹುಡುಕಿದರೂ ಮುರಿದ ತುಣುಕುಗಳು ಮತ್ತೆ ತಮ್ಮ ಸ್ಥಾನವನ್ನು ಕಂಡುಕೊಳ್ಳುವುದಿಲ್ಲ. ಈ ದುರ್ಬಲವಾದ ಅಧ್ಯಾಯದ ಮೂಲಕ ನಾವು ನಡೆಯುತ್ತಿರುವಾಗ ನಿಮ್ಮ ದಯೆ ಮತ್ತು ನಮ್ಮ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದಗಳು ಎಂದು ರೆಹಮಾನ್​ (AR Rahman) ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net