ಗ್ರೆಗ್​ ಚಾಪೆಲ್​ಗಿಂತಲೂ ಕಡಿಮೆ ಅವಧಿಗೆ ಈತ ಕೋಚ್​ ಆಗಿರುತ್ತಾನೆ; Border-Gavaskar ಟ್ರೋಫಿಗೂ ಮುನ್ನ Gautam Gambhir ಕುರಿತು ಮಾಜಿ ಆಟಗಾರನ ಹೇಳಿಕೆ ವೈರಲ್​

Gautam Gambhir
Published on

ನವದೆಹಲಿ: ನವೆಂಬರ್​ 22ರಿಂದ ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವೆ ಆರಂಭವಾಗಲಿರುವ ಬಾರ್ಡರ್​-ಗವಾಸ್ಕರ್​ ಟ್ರೋಫಿಗೆ (Border-Gavaskar Trophy) ಈಗಾಗಲೇ ಉಭಯ ತಂಡಗಳು ಸಿದ್ಧತೆ ನಡೆಸಿದ್ದು, ಆಸ್ಟ್ರೇಲಿಯಾ ನೆಲದಲ್ಲಿ ಸರಣಿಯನ್ನು ಗೆದ್ದು ಪುಟಿದೇಳುವ ವಿಶ್ವಾಸದಲ್ಲಿ ಟೀಮ್​ ಇಂಡಿಯಾ (Team India) ಅಭ್ಯಾಸ ನಡೆಸುತ್ತಿದೆ. ಇನ್ನೂ ಈ ಹಿಂದಿನ ಸರಣಿ ಸೋಲುಗಳ ಸೇಡನ್ನು ತೀರಿಸಿಕೊಳ್ಳಲು ಆಸ್ಟ್ರೇಲಿಯಾ (Australia) ಸಜ್ಜಾಗಿದ್ದು, ಈ ರೋಚಕ ಸರಣಿಯನ್ನು ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಸಾಮಾನ್ಯವಾಗಿ ನಾವು ನೋಡಿರುವಂತೆ ಯಾವುದಾದರು ಅಂತಾರಾಷ್ಟ್ರೀಯ ಟೂರ್ನಿ ಅಥವಾ ಸರಣಿ ಆರಂಭವಾಗುವುದಕ್ಕೂ ಮುನ್ನ ಉಭಯ ದೇಶಗಳ ಮಾಜಿ ಹಾಗೂ ಹಾಲಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಇವರುಗಳು ನೀಡುವ ವ್ಯಕ್ತಿರಿಕ್ತ ಹೇಳಕೆಗಳು ಉಭಯ ದೇಶಗಳ ಕ್ರೀಡಾಭಿಮಾನಿಗಳನ್ನು ಕೆರಳಿ ಕೆಂಡವಾಗಿಸುತ್ತದೆ. ಇದೀಗ ಮುಂಬರುವ ಬಾರ್ಡರ್​-ಗವಾಸ್ಕರ್​ ಟ್ರೋಫಿ (Border-Gavaskar Trophy) ಕುರಿತಂತೆ ನ್ಯೂಜಿಲೆಂಡ್​ ಕ್ರಿಕೆಟ್​ ತಂಡದ ಮಾಜಿ ಆಟಗಾರ ಸೈಮನ್​ ಡೌಲ್​ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಸೈಮನ್​ ಡೌಲ್​, ನನ್ನ ಪ್ರಕಾರ ಗೌತಮ್​ ಗಂಭೀರ್​ ಗ್ರೆಗ್​ ಚಾಪೆಲ್​ಗಿಂತಲೂ ಕಡಿಮೆ ಅವಧಿಗೆ ಕೋಚ್​ ಆಗಿರುತ್ತಾರೆ ಎಂದು ಭಾವಿಸುತ್ತೇನೆ. ಭಾರತಕ್ಕೆ ಈ ಕ್ಷಣದಲ್ಲಿ ಇದು ಅಗತ್ಯವಿದೆಯೇ ಎಂಬುದು ನನ್ನ ಪ್ರಶ್ನೆ. ಏಕೆಂದರೆ ದೊಡ್ಡ ಸರಣಿಯನ್ನು ಭಾರತ ತಂಡ ಆಡುತ್ತಿದ್ದು, ಆತ ಮಾಧ್ಯಮದವರೊಂದಿಗೆ ಸ್ನೇಹಪರರಾಗಿರಲು ಸಾಧ್ಯವಿಲ್ಲ. ಆದರೆಮ ಆತ ಯಾವ ಹಾದಿಯಲ್ಲಿ ಹೋಗುತ್ತಿದ್ದಾನೆ ಎಂಬುದು ನನಗೆ ತಿಳಿದಿಲ್ಲ. ಒಟ್ಟಿನಲ್ಲಿ ಈ ಸರಣಿ ಬಳಿ ಏನಾಗುತ್ತದೋ ನಮಗೆ ತಿಳಿದಿಲ್ಲ ಎಂದು ಸೈಮನ್​ ಡೌಲ್​ ಅಭಿಪ್ರಾಯಪಟ್ಟಿದ್ದಾರೆ. 

Simon Doull

ಅಭಿಮಾನಿಗಳು ಇಟ್ಟಿರುವ ನಿರೀಕ್ಷೆಯನ್ನು ಗೌತಮ್​ ಗಂಭೀರ್​ (Gautam Gambhir) ಹುಸಿಯಾಗಿಸಿದ್ದು, ಭಾರತ ದ್ವಿಪಕ್ಷೀಯ ಸರಣಿಗಳಲ್ಲಿ ಸೋಲುವ ಮೂಲಕ ಅನಪೇಕ್ಷಿತ ದಾಖಲೆಗಳಿಗೆ ಕೊರಳೊಡ್ಡುತ್ತಿದೆ. ಗಂಭೀರ್ (Gautam Gambhir) ಕೋಚ್ ಆಗಿ 3 ತಿಂಗಳ ಅವಧಿಯಲ್ಲೇ ಭಾರತ 2 ಪ್ರಮುಖ ಸರಣಿ ಸೋಲಿನ ಶಾಕ್ ಎದುರಿಸಿದೆ. ಆಗಸ್ಟ್‌ನಲ್ಲಿ ಶ್ರೀಲಂಕಾದಲ್ಲಿ 27 ವರ್ಷಗಳ ಬಳಿಕ ಏಕದಿನ ಸರಣಿ ಸೋತಿದ್ದ ಭಾರತ ಈಗ ಕಿವೀಸ್ ವಿರುದ್ಧ ಮೊದಲ ಬಾರಿ ತವರಿನಲ್ಲಿ ಟೆಸ್ಟ್ ಸರಣಿ ಬಿಟ್ಟುಕೊಟ್ಟಿದೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಗಂಭೀರ್ ವಿರುದ್ಧ ಕಿಡಿಕಾರುತ್ತಿದ್ದಾರೆ.

ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವೆ ನಡೆಯಲಿರುವ 5 ಪಂದ್ಯಗಳ ಬಾರ್ಡರ್​-ಗವಾಸ್ಕರ್ (Border-Gavaskar)​ ಟೆಸ್ಟ್​ ಸರಣಿಯೂ ನವೆಂಬರ್​ 22ಕ್ಕೆ ಆರಂಭವಾಗಲಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net