

ಹೆಬ್ರಿ: ಹೆಬ್ರಿಯ ಎಸ್.ಆರ್ ಪಬ್ಲಿಕ್ ಸ್ಕೂಲ್‌ನ 4ನೇ ತರಗತಿ ವಿದ್ಯಾರ್ಥಿನಿ ಆಪ್ತಿ ಆಚಾರ್ಯ ಜಿಮ್ನಾಸ್ಟಿಕ್‌ನ ಒಂದು ಭಾಗವಾದ ಹೈಡ್ರೋಲನ್ನು ಗರಿಷ್ಠ 4 ನಿಮಿಷ 40 ಸೆಕೆಂಡ್‌ನಲ್ಲಿ ಸತತ 65 ರೌಂಡ್ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸಾಧನೆ ಮಾಡಿದ್ದಾಳೆ. ಈಕೆ ಮುನಿಯಾಲಿನ ಲತಾ, ಶಿವಾನಂದ ಆಚಾರ್ಯ ಅವರ ಮಗಳು. ವಿದ್ಯಾರ್ಥಿನಿಯನ್ನು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ನಾಗರಾಜ್ ಶೆಟ್ಟಿ, ಕಾರ್ಯದರ್ಶಿ ಸಪ್ನಾ ಎನ್.ಶೆಟ್ಟಿ par ಅಭಿನಂದಿಸಿದ್ದಾರೆ.