ಡಿಜಿಟಲ್ ಪ್ರಮಾಣ ಪತ್ರಕ್ಕೆ ಪರದಾಟ

Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

16 ವಯಸ್ಸಿಗಿಂತ ಕೆಳಗಿನ ಮಕ್ಕಳ ಆಧಾರ್ ಕಾರ್ಡ್ ಹೆಸರು ತಿದ್ದುಪಡಿಗೆ ಡಿಜಿಟಲ್ ಜನನ ಪ್ರಮಾಣ ಪತ್ರದ ಅಗತ್ಯತೆಯಿಂದಾಗಿ ಹೆಸರು ತಿದ್ದುಪಡಿ ಸಾಧ್ಯವಾಗದೆ ಜನರು ಪರದಾಡುವಂತಾಗಿದೆ.

ಜನನ ಪ್ರಮಾಣ ಪತ್ರ ಡಿಜಿಟಲ್ ಆಗಿದ್ದರೆ ಮಾತ್ರ ಆಧಾರ್ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿ ಮಾಡಲು ಸಾಧ್ಯ. ಆದರೆ 15 ವರ್ಷಗಳ ಹಿಂದೆ ಕೈ ಬರಹದ ಜನನ ಪ್ರಮಾಣ ಪತ್ರ ಮಾತ್ರ ದೊರೆಯುತ್ತಿದ್ದ ಕಾರಣ ಡಿಜಿಟಲ್ ಪ್ರಮಾಣ ಪತ್ರ ಇಲ್ಲದೆ ಹೆಸರು ತಿದ್ದುಪಡಿ ಅಸಾಧ್ಯ ಹಾಗೂ ಇದೀಗ ಅಂತಹ ಜನನ ಪ್ರಮಾಣ ಪತ್ರ ಡಿಜಿಟಲ್‌ಗೆ ನವೀಕರಿಸಲು ತಾಲೂಕು ಕಚೇರಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಪಾಲಕರಲ್ಲಿ ಆತಂಕ ಈ ಸಮಸ್ಯೆಯಿಂದಾಗಿ ಅನೇಕ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಈ ಬಾರಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಆಧಾರ್ ಕಾರ್ಡ್‌ನಲ್ಲಿ ಹೆಸರು ವ್ಯತ್ಯಾಸಗಳಿದ್ದರೆ ಅದನ್ನು ಸರಿಪಡಿಸಿಕೊಳ್ಳಲಾಗದೆ ಮುಂದಿನ ದಿನಗಳಲ್ಲಿ ಭಾರಿ ಸಮಸ್ಯೆ ಎದುರಿಸುವ ಆತಂಕಕ್ಕೆ ಒಳಗಾಗಿದ್ದಾರೆ. 15 ವರ್ಷ ಕೆಳಗಿನ ಕೈಬರಹದ ಜನನ ಪ್ರಮಾಣ ಪತ್ರ ಡಿಜಿಟಲ್ ಮಾಡಿಕೊಡುವಂತೆ ಸರ್ಕಾರ ಆದೇಶ ಹೊರಡಿಸಿದ್ದು, ಮಕ್ಕಳು ಮತ್ತು ಪಾಲಕರು ಡಿಜಿಟಲ್ ಜನನ ಪ್ರಮಾಣ ಪತ್ರ ಪಡೆಯಲು par ಹೆಣಗಾಡಬೇಕಾಗಿದೆ.

ಅರಿವಿನ ಕೊರತೆ

ಕೈಬರಹದ ಜನನ ಪ್ರಮಾಣ ಪತ್ರ ಸ್ಕಾೃನ್ ಮಾಡಿದರೆ ಆಧಾರ್ ತಂತ್ರಾಂಶ ಸ್ವೀಕರಿಸದಿರುವುದರಿಂದ ಹೆಸರು ತಿದ್ದುಪಡಿಗೆ ಡಿಜಿಟಲ್ ಜನನ ಪ್ರಮಾಣಪತ್ರ ಪಡೆಯುವುದು ಅನಿವಾರ್ಯ. ಹೀಗಾಗಿ ಹೆಸರು ತಿದ್ದುಪಡಿ ಇದ್ದ ಪಕ್ಷದಲ್ಲಿ 15 ವರ್ಷಗಳ ಹಿಂದಿನ ಜನನ ಪ್ರಮಾಣ ಪತ್ರ ಡಿಜಿಟಲ್ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದ್ದು, ಜನರು ಸಹಜವಾಗಿ ಗೊಂದಲಕ್ಕೀಡಾಗಿದ್ದಾರೆ. ಹಲವರಿಗೆ ಡಿಜಿಟಲ್ ಜನನ ಪ್ರಮಾಣ ಪತ್ರ ಪಡೆಯುವುದು ಹೇಗೆ ಎಂಬು ಅರಿವು ಇಲ್ಲ. ಹೀಗಾಗಿ ಗ್ರಾಪಂ, ಗ್ರಾಮ ಆಡಳಿತ ಅಧಿಕಾರಿ ಹಾಗೂ ತಾಲೂಕು ಕಚೇರಿ ಅಲೆದಾಡುವಂತಾಗಿದೆ.

ಆಧಾರ್ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿ ಸಂದರ್ಭ ಕೈಬರಹರದ ಜನನ ಪ್ರಮಾಣ ಪತ್ರ ಆಧಾರ್ ತಂತ್ರಾಂಶ ಸ್ವೀಕರಿಸದಿರುವ ತಾಂತ್ರಿಕ ಸಮಸ್ಯೆಯಿಂದ ಡಿಜಿಟಲ್ ಜನನ ಪ್ರಮಾಣ ಪತ್ರ ನೀಡಬೇಕಾಗಿದೆ. 15 ವರ್ಷಗಳ ಹಿಂದಿನ ಜನನ ಪ್ರಮಾಣ ಪತ್ರ ಡಿಜಿಟಲ್ ಮಾಡಿ ಇಟ್ಟು ಕೊಳ್ಳಬೇಕಿದೆ. ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಿದರೆ ಶೀಘ್ರದಲ್ಲೇ ಡಿಜಿಟಲ್ ಜನನ ಪ್ರಮಾಣ ಪತ್ರ ನೀಡಲಾಗುತ್ತಿದೆ. ಶಿವರಾಯ, ಗ್ರಾಮ ಆಡಳಿತ ಅಧಿಕಾರಿ ಗಂಗೊಳ್ಳಿ

ಆಧಾರ್ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿ ಮಾಡಲು ಕೈಬರಹದ ಜನನ ಪ್ರಮಾಣ ಪತ್ರ ತಿರಸ್ಕರಿಸಲಾಗುತ್ತಿದೆ. ಡಿಜಿಟಲ್ ಜನನ ಪ್ರಮಾಣ ಪತ್ರ ಇದ್ದರೆ ಮಾತ್ರ ತಿದ್ದುಪಡಿ ಸಾಧ್ಯ ಎಂದು ಆಧಾರ್ ಕೇಂದ್ರದಲ್ಲಿ ಸಿಬ್ಬಂದಿ ಹೇಳುತ್ತಿದ್ದಾರೆ. ಇದರಿಂದ ಬಹಳಷ್ಟು ತೊಂದರೆಯಾಗುತ್ತಿದ್ದು, ಡಿಜಿಟಲ್ ಜನನ ಪ್ರಮಾಣ ಪತ್ರ ಪಡೆಯಲು ಮತ್ತೆ ಅಲೆದಾಡಬೇಕಾಗಿದೆ. ಚಂದ್ರ ಖಾರ್ವಿ ಗಂಗೊಳ್ಳಿ ನಿವಾಸಿ https://www.vijayavani.net/everyones-cooperation-for-school-success https://www.vijayavani.net/the-dedication-of-the-stone-built-chara-melbettu-garadi

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net