ವೆಬ್​ ಧಾರಾವಾಹಿಗಳಂತೆ ಕಂತುಕಂತಿನಲ್ಲಿ ಬ್ಲೂ ಫಿಲಂ ಪ್ರಸಾರ ಮಾಡುತ್ತಿರುವ ಆ್ಯಪ್​ಗಳು !

Arrest
Published on

ಮುಂಬೈ: ಜನಪ್ರಿಯ ಒಟಿಟಿ ಪ್ಲಾಟ್​ಫಾರಂಗಳ ಮಾದರಿಯಲ್ಲಿ ಬ್ಲೂ ಫಿಲಂಗಳನ್ನು ಪ್ರಸಾರ ಮಾಡುವ ಆ್ಯಪ್​ಗಳನ್ನು ನಡೆಸುತ್ತಿರುವುದನ್ನು ಮುಂಬೈ ಪೊಲೀಸರು ಪತ್ತೆ ಹಚ್ಚಿದ್ದಾರೆ. ಲೌಕ್​ಡೌನ್​ ವೇಳೆಯಲ್ಲಿ ಹೆಚ್ಚಾಗಿ ಬೆಳೆದ ಇಂಥ ಆ್ಯಪ್​ಗಳಲ್ಲಿ ಧಾರಾವಾಹಿಗಳ ಎಪಿಸೋಡ್​ಗಳಂತೆ 30 ನಿಮಿಷಗಳ ಫೋರ್ನೋಗ್ರಾಫಿಕ್ ವೀಡಿಯೋಗಳು ಕಂತುಕಂತಿನಲ್ಲಿ ಪ್ರಸಾರವಾಗುತ್ತಿವೆ. ಈವರೆಗೆ ಈ ರೀತಿಯಾಗಿ ಪೋರ್ನೋಗ್ರಾಫಿಕ್ ಅಥವಾ ಸೆಮಿ-ಪೋರ್ನೋಗ್ರಾಫಿಕ್ ಕಂಟೆಂಟ್ಅನ್ನು ಪ್ರಸಾರ ಮಾಡುತ್ತಿರುವ 12 ಆ್ಯಪ್​ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.

ಈ ಪತ್ತೆ ಕಾರ್ಯಾಚರಣೆ ಆರಂಭವಾದದ್ದು, ಇತ್ತೀಚೆಗೆ ಮುಂಬೈ ಬಳಿಯ ಮಾಧ್​ನಲ್ಲಿರುವ ಗ್ರೀನ್ ಪಾರ್ಕ್​ ಬಂಗಲೆಯೊಂದರಲ್ಲಿ ಬ್ಲೂಫಿಲಂ ಚಿತ್ರೀಕರಿಸಲಾಗುತ್ತಿದೆ ಎಂಬ ಸುಳಿವು ಸಿಕ್ಕಾಗ. ಮುಂಬೈ ಪೊಲೀಸರು ದಿಢೀರ್ ದಾಳಿ ನಡೆಸಿ, ಚಿತ್ರೀಕರಣದಲ್ಲಿ ತೊಡಗಿದ್ದ ಐದು ಜನರನ್ನು ಬಂಧಿಸಿದರು. ಮುಖ್ಯ ಆರೋಪಿ ಯಾಸ್ಮೀನ್ ಖಾನ್ ಅಲಿಯಾಸ್ ರೋವಾ(40) ಎಂಬುವಳು ಈ ಅಶ್ಲೀಲ ಫಿಲಂಅನ್ನು ತನ್ನ ಮೊಬೈಲ್​ನಲ್ಲೇ ಶೂಟ್ ಮಾಡುತ್ತಿದ್ದಳು. ಜೊತೆಗೆ ಲೈಟ್​ಮ್ಯಾನ್, ಗ್ರಾಫಿಕ್ ಡಿಸೈನರ್ ಮತ್ತು ಅರೆನಗ್ನವಾದ ನಟ-ನಟಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ತನಿಖೆ ಮುಂದುವರಿಸಿದಾಗ, ಚಿತ್ರೀಕರಣವಾಗುತ್ತಿದ್ದ ಫಿಲಂಅನ್ನು ಖಾನ್ ನಡೆಸುತ್ತಿರುವ ಬ್ಲೂ ಫಿಲಂ ಪ್ರಸಾರದ ಆ್ಯಪ್​ಗಾಗಿ ನಿರ್ಮಿಸಲಾಗುತ್ತಿತ್ತು ಎಂಬುದು ತಿಳಿದುಬಂದಿದೆ. ವೆಬ್​ ಧಾರಾವಾಹಿಗಳಂತೆ ಬ್ಲೂ ಫಿಲಂ ವೀಕ್ಷಣೆಯ ಅವಕಾಶ ನೀಡುವ ಈ ಆ್ಯಪ್​ಗೆ ತಿಂಗಳಿಗೆ 199 ರೂ.ಗಳ ಸಬ್ಸ್​ಸ್ಕ್ರಿಪ್ಷನ್ ದರವಿದ್ದು, ಒಂದು ಲಕ್ಷ ಮೀರಿದ ಚಂದಾದಾರರಿದ್ದಾರೆ. ಅಂದಾಜಿನ ಪ್ರಕಾರ ತಿಂಗಳಿಗೆ ಕನಿಷ್ಠ 2 ಕೋಟಿ ಆದಾಯ ಹೊಂದಿದ ವ್ಯವಹಾರವಾಗಿ ಬೆಳೆದಿದೆ ಎನ್ನಲಾಗಿದೆ.

ಈ ಫಿಲಂನಲ್ಲಿ ನಟಿಸುತ್ತಿದ್ದ ಮಹಿಳೆಯು, ಖಾನ್ ತನಗೆ ವೆಬ್ ಸೀರಿಸ್​ನಲ್ಲಿ ಪಾತ್ರ ನೀಡುವುದಾಗಿ ಹೇಳಿದ್ದಳು. ಚಿತ್ರೀಕರಣದ ವೇಳೆ ಸ್ಕ್ರಿಪ್ಟ್ ಬದಲಾಗಿದೆ ಎಂದು ಹೇಳಿ ಈ ಪಾತ್ರ ಮಾಡಲು ಬಲವಂತ ಮಾಡಲಾಯಿತು ಎಂದು ಆರೋಪಿಸಿದ್ದಾಳೆ. ಇದಕ್ಕೆ ಪೂರಕವಾಗಿ ಜಾರ್ಖಂಡ್​ನ 29 ವರ್ಷ ವಯಸ್ಸಿನ ಮಹಿಳೆ ಮತ್ತು ಇನ್ನಿಬ್ಬರು ತಮ್ಮನ್ನು ಬೆದರಿಸಿ, ಬ್ಲೂ ಫಿಲಂನಲ್ಲಿ ನಟಿಸಲು ಬಲವಂತ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 (ಎ) ಕೆಳಗೆ ಕೇಸು ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧವಾಗಿ ಇದೀಗ ನಟಿ ಗೆಹನಾ ವಸಿಷ್ಠ್ ಸೇರಿದಂತೆ ಮತ್ತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಬಾಡಿಗೆಗೆ ತೆಗೆದುಕೊಂಡ ಬಂಗಲೆ, ಒಂದು ದಿನದ ಶೂಟಿಂಗ್, ಏಳು ಜನರ ಕ್ರೂ, ಮೊಬೈಲ್ ಕ್ಯಾಮೆರಾ, ಹಾಲೋಜನ್ ಲೈಟುಗಳು, ಎರಡು ಪುಟದ ಸ್ಕ್ರಿಪ್ಟ್​ - ಹೀಗೆ ಒಂದು ಲಕ್ಷ ರೂಪಾಯಿಯ ಒಳಗೆ ಖರ್ಚು ಮಾಡಿ ಈ ಬ್ಲೂ ಫಿಲಂಗಳನ್ನು ನಿರ್ಮಿಸಲಾಗುತ್ತಿದೆ. ಬಹುತೇಕವಾಗಿ ಬಾಲಿವುಡ್​​ನಲ್ಲಿ ನಟಿಸುವ ಆಸೆಯಿಂದ ಬರುವ ಯುವಕ-ಯುವತಿಯರನ್ನು ವೆಬ್​ ಸೀರಿಸ್​ ತೆಗೆಯುತ್ತಿರುವ ಸೋಗಿನಲ್ಲಿ ಈ ಕೆಲಸಕ್ಕೆ ಹಚ್ಚುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net