

ಮುಂಬೈ: ಶಾಸಕರು, ಸಂಸದರು ಮತ್ತು ಗಣ್ಯ ವ್ಯಕ್ತಿಗಳನ್ನೇ ಗುರಿ ಮಾಡಿಕೊಂಡು ಸೆಕ್ಸ್ ರಾಕೆಟ್ ನಡೆಸುತ್ತಿದ್ದ ತಂಡವೊಂದನ್ನು ಗ್ಯಾಂಗ್ ಒಂದನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್ ವಾಟ್ಸ್ಆ್ಯಪ್ ಮೂಲಕವೇ ಪೋರ್ನ್ ವಿಡಿಯೋ ತೋರಿಸಿ, ದುಡ್ಡು ಕೀಳುತ್ತಿತ್ತು ಎಂದು ಹೇಳಲಾಗಿದೆ.
ಮಹಾರಾಷ್ಟ್ರದ ಮುಂಬೈ ಪೊಲೀಸರು ಈ ಗ್ಯಾಂಗ್ನ್ನು ಬಂಧಿಸಿದ್ದಾರೆ. ಯುವಕರೇ ತುಂಬಿರುವ ಈ ಗ್ಯಾಂಗ್ ಹೆಣ್ಣು ಮಕ್ಕಳ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆಯನ್ನು ತೆರೆಯುತ್ತಿತ್ತು. ಅದರಲ್ಲಿ ಗಣ್ಯರಿಗೆ ರಿಕ್ವೆಸ್ಟ್ ಕಳುಹಿಸಿ ಅವರ ಸ್ನೇಹ ಬೆಳೆಸಿಕೊಳ್ಳುತ್ತಿತ್ತು. ಅದಾದ ನಂತರ ಅವರ ಕಾಂಟ್ಯಾಕ್ಟ್ ನಂಬರನ್ನೂ ಪಡೆದುಕೊಳ್ಳುತ್ತಿತ್ತು. ವೀಕೆಂಡ್ಗಳಲ್ಲಿ ಅವರ ನಂಬರ್ಗೆ ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮಾಡಿ, ಒಂದಿಷ್ಟು ಪೋರ್ನ್ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು. ಆ ವಿಡಿಯೋಗಳನ್ನು ಗಣ್ಯರು ಕಣ್ಣು ಬಾಯಿ ಬಿಟ್ಟಿಕೊಂಡು ನೋಡಿ, ಜೊಲ್ಲು ಸುರಿಸುವ ವಿಡಿಯೋವನ್ನು ರೆಕಾರ್ಡ್ ಮಾಡಿಕೊಳ್ಳಲಾಗುತ್ತಿತ್ತು. ಅದಾದ ನಂತರ ಪೋರ್ನ್ ವಿಡಿಯೋಗೆ ಅವರ ವಿಡಿಯೋವನ್ನು ಸೇರಿಸಿ, ಎಡಿಟ್ ಮಾಡಿ ಅವರಿಗೆ ಕಳುಹಿಸಲಾಗುತ್ತಿತ್ತು. ಒಂದು ವೇಳೆ ನೀವು ನಾವು ಕೇಳಿದಷ್ಟು ಹಣ ಕೊಡದಿದ್ದಾರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಬಿಡುತ್ತೇವೆ ಎಂದು ಬ್ಲ್ಯಾಕ್ಮೇಲ್ ಮಾಡಲಾಗುತ್ತಿತ್ತು. ಮೊದಮೊದಲು ಕಡಿಮೆ ಹಣ ಬೇಡಿಕೆ ಇಡಲಾಗುತ್ತಿತ್ತು. ಒಮ್ಮೆ ಅವರ ಪ್ಲ್ಯಾನ್ ವರ್ಕ್ಔಟ್ ಆದ ನಂತರ ಹೆಚ್ಚಿನ ಹಣವನ್ನು ಬೇಡಿಕೆ ಇಡಲಾಗುತ್ತಿತ್ತು.
ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಮೂಲದ ಮೂವರು ವ್ಯಕ್ತಿಗಳು ಗ್ಯಾಂಗ್ನಲ್ಲಿ ಕೆಲಸ ಮಾಡಿದ್ದು, ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್ ಫೇಸ್ಬುಕ್ನಲ್ಲಿ 171 ಫೇಕ್ ಖಾತೆ ಮತ್ತು ಟೆಲಿಗ್ರಾಂನಲ್ಲಿ 4 ಚಾನೆಲ್ ಹೊಂದಿತ್ತು. ಬ್ಲ್ಯಾಕ್ಮೇಲ್ ಮಾಡಲು 54 ಮೊಬೈಲ್ಗಳನ್ನು ಬಳಸಿಕೊಳ್ಳಲಾಗಿದೆ. ಗ್ಯಾಂಗ್ಗೆ 58 ಬ್ಯಾಂಕ್ ಖಾತೆಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. (ಏಜೆನ್ಸೀಸ್)