ಬೆಂಗಳೂರು ಏರ್​ಪೋರ್ಟ್ ರಸ್ತೆಯಲ್ಲಿ ಮತ್ತೊಂದು ಭೀಕರ ಅಪಘಾತ; ಡಿವೈಡರ್​ ದಾಟಿ ಪಕ್ಕದ ರಸ್ತೆಗೆ ನೆಗೆದ ಕಾರು, ಇನ್ನೊಂದು ಕಾರಿಗೆ ಡಿಕ್ಕಿ..

Car accident
Published on

ಬೆಂಗಳೂರು: ಬೆಂಗಳೂರಿನ ಏರ್​ಪೋರ್ಟ್ ರಸ್ತೆಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಕಾರುಗಳೆರಡು ಮುಖಾಮುಖಿ ಡಿಕ್ಕಿಯಾಗಿವೆ. ಅದರಲ್ಲೂ ಒಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಅದನ್ನು ದಾಟಿ ಪಕ್ಕದ ರಸ್ತೆಗೆ ನೆಗೆದು ಎದುರಿನಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ.

ಬೆಂಗಳೂರಿನಿಂದ ಯಲಹಂಕ ಮಾರ್ಗವಾಗಿ ವಿಮಾನನಿಲ್ದಾಣ ಕಡೆಗೆ ತೆರಳುತ್ತಿದ್ದ ಲ್ಯಾನ್ಸರ್ ಕಾರು ಹಾಗೂ ಏರ್​ಪೋರ್ಡ್ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಪೋಕ್ಸ್ ವ್ಯಾಗನ್ ಕಾರುಗಳು ಮುಖಾಮುಖಿ ಡಿಕ್ಕಿಯಾಗಿವೆ.

ಲ್ಯಾನ್ಸರ್​ ಕಾರು ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿನ ವೇಗದ ತೀವ್ರತೆಗೆ ಅದು ಡಿವೈಡರ್​ ದಾಟಿ ಪಕ್ಕದ ರಸ್ತೆಗೆ ನೆಗೆದು ಪೋಕ್ಸ್ ವ್ಯಾಗನ್ ಕಾರಿಗೆ ಡಿಕ್ಕಿ ಹೊಡೆದಿದೆ. ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಸಂಭವಿಸಿದೆ. ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net