ಜ್ಞಾನದ ಬಳಕೆಯಿಂದ ಸಮಸ್ಯೆಗೆ ಪರಿಹಾರ : ಪಡುಕರೆ ಕಾಲೇಜಿನಲ್ಲಿ ವಾರ್ಷಿಕೋತ್ಸವದಲ್ಲಿ ಆನಂದ್ ಸಿ.ಕುಂದರ್ ಅಭಿಮತ

college

ವಿಜಯವಾಣಿ ಸುದ್ದಿಜಾಲ ಕೋಟ

ವಿದ್ಯಾರ್ಥಿಗಳು ತಾವು ಕಲಿತ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಪರಿಸರವನ್ನು ಪ್ರೀತಿಸಿ, ಹಸಿರೇ ಉಸಿರು ಎಂಬ ತತ್ವ ಅಳವಡಿಸಿಕೊಳ್ಳಬೇಕು ಎಂದು ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಪ್ರವರ್ತಕ ಆನಂದ್ ಸಿ.ಕುಂದರ್ ಕರೆ ನೀಡಿದರು.

ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಉಪನ್ಯಾಸ ನೀಡಿದ ಲೇಖಕಿ ಡಾ.ಪಾರ್ವತಿ ಐತಾಳ್, ಪಠ್ಯಪುಸ್ತಕದಲ್ಲಿ ಪಡೆದ ಜ್ಞಾನದ ಕುರಿತು ಚಿಂತನೆ ಮಾಡುವುದು ಶಿಕ್ಷಣದ ಪ್ರಮುಖ ಉದ್ದೇಶವಾಗಿರಬೇಕು. ಅಂಕಗಳಿಗೆ ಮಹತ್ವ ಕೊಡುತ್ತಿರುವ ಈ ಸಮಾಜದಲ್ಲಿ ಜ್ಞಾನ, ಮೌಲ್ಯಗಳಿಗೆ ಪ್ರಾಮುಖ್ಯ ನೀಡುವ ಶಿಕ್ಷಣದ ಅವಶ್ಯಕತೆಯಿದೆ ಎಂದರು.

ಪ್ರಾಂಶುಪಾಲೆ ಡಾ.ಸುನೀತಾ ವಿ. ವಾರ್ಷಿಕ ವರದಿ ಮಂಡಿಸಿದರು. 2022-23ರಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 44 ವಿದ್ಯಾರ್ಥಿಗಳಿಗೆ ಮತ್ತು ಪ್ರಸ್ತುತ ತರಗತಿಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಹಾಗೂ ವಿಷಯವಾರು 100ರಲ್ಲಿ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೀತಾನಂದ ಫೌಂಡೇಶನ್ ವತಿಯಿಂದ ನಗದು ಬಹುಮಾನ ನೀಡಲಾಯಿತು. ಹಾಗೂ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಫಾತಿಮಾ, ಸಿಂಚನಾ, ದೀಕ್ಷಿತಾ, ಮೇಘನಾ ಮತ್ತು ಸುದೀಪ್, ಕಾಲೇಜಿನ ಬೋಧಕ-ಬೋಧಕೇತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶಂಕರ ನಾಯ್ಕ ಬಿ. ಸ್ವಾಗತಿಸಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಮನೋಜ್ ಕುಮಾರ್ ಎಂ. ವಂದಿಸಿ, ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಜಣ್ಣ ಎಂ. ನಿರೂಪಿಸಿದರು.

Share This Article

ಮನೆಯಲ್ಲೇ ಗಟ್ಟಿ ಮೊಸರು ಮಾಡುವ ವಿಧಾನ ನಿಮಗೆ ತಿಳಿದಿದೆಯೇ; ಇಲ್ಲಿದೆ ಸಿಂಪಲ್ ಟ್ರಿ​ಕ್ಸ್​​​​​ | Health Tips

ಚಳಿಗಾಲವಿರಲಿ, ಬೇಸಿಗೆಯಿರಲಿ ಮೊಸರನ್ನು ಇಷ್ಟಪಡುವವರು ಹವಾಮಾನ ಬದಲಾದಾಗಲೂ ಅದನ್ನು ತಿನ್ನುವುದನ್ನು ನಿಲ್ಲಿಸುವುದಿಲ್ಲ. ಚಳಿ ಹೆಚ್ಚಾದಾಗಲೂ ಅನೇಕರು…

ಊಟದ ಸಮಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ; ಮಾಹಿತಿ ತಿಳಿದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ತಪ್ಪಿಸಿ | Health Tips

ಮಧುಮೇಹವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. WHO ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.…

ಈ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಕುಕ್ಕರ್‌ನಲ್ಲಿ ಬೇಯಿಸಬೇಡಿ, ವಿಷಕಾರಿಯಾಗಬಹುದು ಎಚ್ಚರ! Pressure Cooker

Pressure Cooker : ಪ್ರೆಶರ್​ ಕುಕ್ಕರ್ ಇಂದು ಪ್ರತಿ ಮನೆಗಳಲ್ಲೂ ಅಗತ್ಯವಿರುವ ಅಡುಗೆ ಸಲಕರಣೆಗಳಲ್ಲಿ ಒಂದಾಗಿದೆ.…