ಗಾಂಜಾ ಸೇವಿಸಿದ ಇಬ್ಬರು ಪೊಲೀಸ್ ವಶ

new Ganja New
Published on

ಪಡುಬಿದ್ರಿ: ಎರಡು ಪ್ರತ್ಯೇಕ ಗಾಂಜಾ ಸೇವನೆ ಪ್ರಕರಣದಲ್ಲಿ ಸುಚಿತ್(22) ಮತ್ತು ನಮಿತ್(23) ಎಂಬುವರನ್ನು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಡಾ ಗ್ರಾಮದ ಉಚ್ಚಿಲ ಬಸ್ ನಿಲ್ದಾಣದಲ್ಲಿ ನಶೆಯಲ್ಲಿ ತೂರಾಡುತ್ತಿದ್ದ ಸುಚಿತ್‌ನನ್ನು ಹಾಗೂ ಬಡಾ ಗ್ರಾಮದ ಉಚ್ಚಿಲ ಬೀಚ್‌ನಲ್ಲಿ ನಮಿತ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಅವರು ಗಾಂಜಾ ಸೇವನೆ ಮಾಡಿರುವುದು ಸಾಬೀತಾಗಿದೆ ಎಂದು ಪ್ರಕರಣ ದಾಖಲಿಸಿರುವ ಪಡುಬಿದ್ರಿ ಠಾಣೆ ಪೊಲೀಸರು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net