ನೀನೊಬ್ನೇ ಚೆನ್ನಾಗಿರೋದಲ್ಲ... ಫ್ರೆಂಡ್ಸ್ ಕೂಡ ಚೆನ್ನಾಗಿರಬೇಕು: ಮೌನೇಶ್

Mounesh
Published on

ಒಮ್ಮೆ ನನ್ನ ಗೆಳೆಯ ಮನೆಗೆ ಬಂದಿದ್ದ. ಅವನು ಯಾವುದೋ ಕೆಲಸಕ್ಕೆ ಹಣ ಕೇಳಿದ. ನನ್ನ ಹತ್ರ ಇದ್ದರೂ ಕೊಡಲಿಲ್ಲ. ಆಗ ನನ್ನ ತಾಯಿ ಹೇಳಿದ್ದು, ‘ನೀನು ಮಾತ್ರ ಚೆನ್ನಾಗಿರೋದಲ್ಲ, ನಿನ್ನ ಜತೆಯಲ್ಲಿರುವ ಫ್ರೆಂಡ್ಸ್ ಕೂಡ ಚೆನ್ನಾಗಿರಬೇಕು. ನಿನ್ನ ಜತೆಗೆ ನಿನ್ನ ಸ್ನೇಹಿತರೂ ಬೆಳೆಯುವಂತೆ ಮಾಡುವುದೇ ನಿಜವಾದ ಸ್ನೇಹ’ ಅಂತ ತಿಳಿಹೇಳಿದರು. ಅವರ ಆ ನಿಸ್ವಾರ್ಥ ಭಾವನೆಯೇ ಮುಂದೆ ನನ್ನ ಜೀವನದಲ್ಲಿ ನನಗೆ ದಾರಿದೀಪವಾಯಿತು. ಅಮ್ಮನೇ ನನ್ನ ಜೀವನದ ರಿಯಲ್ ಹೀರೋ.

| ಮೌನೇಶ್ ಪೋತ್ನಾಳ ಮಾನ್ವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net