

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ತಮ್ಮ ಪಕ್ಷದ ಸಹೋದ್ಯೋಗಿ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ 'ಪ್ರಶ್ನೆಗಾಗಿ ನಗದು' ಪ್ರಕರಣದಲ್ಲಿ ಉಚ್ಚಾಟಿಸಿರುವುದನ್ನು ಖಂಡಿಸಿದ್ದಾರೆ. ಅಷ್ಟೇ ಅಲ್ಲ, ಟಿಎಂಸಿ ಪಕ್ಷವು ಅವರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಂಸತ್ ಸ್ಥಾನದಿಂದ ಉಚ್ಚಾಟನೆಗೊಂಡ ಬೆನ್ನಲ್ಲೇ ನೈತಿಕ ಸಮಿತಿ ವಿರುದ್ಧ ಗುಡುಗಿದ ಮಹುವಾ
ಪಶ್ಚಿಮ ಬಂಗಾಳದ ಕುರ್ಸಿಯಾಂಗ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮೊಯಿತ್ರಾ ಅವರನ್ನು ಉಚ್ಚಾಟಿಸಲು ಶಿಫಾರಸು ಮಾಡಿದ ನೈತಿಕ ಸಮಿತಿಯ ವರದಿಯ ಬಗ್ಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದರು.
ಬಿಜೆಪಿ "ಸೇಡಿನ ರಾಜಕೀಯ" ಮಾಡುತ್ತಿದೆ. ಮೊಯಿತ್ರಾಗೆ ಮಾತನಾಡಲು ಅವಕಾಶ ನೀಡದೆ ಪ್ರಜಾಪ್ರಭುತ್ವವನ್ನು ಕಗ್ಗೋಲೆ ಮಾಡಲಾಗಿದೆ. ಇದನ್ನು ನಾನು ಖಂಡಿಸುತ್ತೇನೆ. ಪಕ್ಷವು ಆಕೆಗೆ ಸಂಪೂರ್ಣ ಬೆಂಬಲ ನೀಡಿದೆ. ನಾವು ನ್ಯಾಯವನ್ನು ಬಯಸುತ್ತೇವೆ ಎಂದು ಟಿಎಂಸಿ ಮುಖ್ಯಸ್ಥೆ ಹೇಳಿದರು.
ಈ ಬೆಳವಣಿಗೆಯನ್ನು ಸಂಸತ್ತಿಗೆ "ದುಃಖದ ದಿನ" ಎಂದು ಬಣ್ಣಿಸಿದ ಬ್ಯಾನರ್ಜಿ, ಮೊಯಿತ್ರಾ ಅವರನ್ನು ಉಚ್ಚಾಟಿಸುವ ಲೋಕಸಭೆಯ ನಿರ್ಧಾರವು ಸಾಂವಿಧಾನಿಕ ಹಕ್ಕುಗಳಿಗೆ "ದ್ರೋಹ" ಎಂದು ಹೇಳಿದರು.
"ಪಶ್ಚಿಮ ಬಂಗಾಳದಲ್ಲಿ ನಮಗೆ ಮೂರನೇ ಎರಡರಷ್ಟು ಬಹುಮತವಿದೆ. ನಾವು ಸಹ ಇಲ್ಲಿ ಯಾರನ್ನಾದರೂ ಹೊರಹಾಕಬಹುದು. ಆದರೆ ನಾವು ಅದನ್ನು ಮಾಡಬಹುದೇ? ಲೋಕಸಭಾ ಚುನಾವಣೆಗೆ ಕೇವಲ ಎರಡರಿಂದ ರು ತಿಂಗಳುಗಳು ಮಾತ್ರ ಉಳಿದಿದ್ದು, ಕೇಂದ್ರವು "ಪ್ರಜಾಪ್ರಭುತ್ವದ ಮೇಲೆ ಬೈಪಾಸ್ ಸರ್ಜರಿ ಮಾಡಿದೆ" ಎಂದು ಬ್ಯಾನರ್ಜಿ ಆರೋಪಿಸಿದರು.
“ನಮ್ಮ ಪಕ್ಷವು ಮಹುವಾ ಪ್ರಕರಣವನ್ನು ಬೆಂಬಲಿಸುತ್ತದೆ, ಅವರು ಮಹಿಳೆ ಮತ್ತು ಯುವ ಪೀಳಿಗೆಗೆ ಸೇರಿದವರು, ಮಹುವಾ ಮುಂದಿನ ಯುದ್ಧದಲ್ಲಿ ಗೆಲ್ಲುತ್ತಾರೆ. ಜನರು ತಕ್ಕ ಉತ್ತರದೊಂದಿಗೆ ಅವರಿಗೆ ನ್ಯಾಯ ನೀಡುತ್ತಾರೆ. ಬಿಜೆಪಿಯವರು ಮುಂದಿನ ಚುನಾವಣೆಯಲ್ಲಿ ಸೋಲಿಸುತ್ತಾರೆ. ಇದು ನನ್ನ ಸಂಪೂರ್ಣ ನಂಬಿಕೆ ಎಂದು ಅವರು ಹೇಳಿದರು.
"ಮಹುವಾ ಅಭ್ಯರ್ಥಿಯಾಗದಿರಲು ನನಗೆ ಯಾವುದೇ ಕಾರಣವಿಲ್ಲ. ಅವರು ಈಗಾಗಲೇ ಪಕ್ಷದ ಹುದ್ದೆ ಹೊಂದಿದ್ದಾರೆ ಎಂದು ಅವರು ಹೇಳಿದರು.