

ಪ್ರವೀಣ್ರಾಜ್ ಕೊೖಲ, ಕಡಬ
ವಾಣಿಜ್ಯ ಬೆಳೆ ಅಡಕೆ ಧಾರಣೆ ಏರುತ್ತಲೇ ಇದ್ದರೂ, ಅಡಕೆಗೆ ಔಷಧ ಬಿಡುವ, ಕೊಯ್ಯುವ ನುರಿತ ಕಾರ್ವಿುಕರ ಸಮಸ್ಯೆ ನೀಗಿಲ್ಲ. ದ.ಕ.ಜಿಲ್ಲೆಯ ಕಡಬ ತಾಲೂಕು ಚಾರ್ವಾಕ ಗ್ರಾಮದ ಖಂಡಿಗ (ಕಾಪಿನಕಾಡು) ಎಂಬಲ್ಲಿನ ಯುವ ಕೃಷಿಕ ಭಾಸ್ಕರ, ಮರ ಹತ್ತಲು ನೆರವಾಗುವ ‘ಟ್ರೀ ಸೈಕಲ್’ ಉಪಕರಣವನ್ನು ಆವಿಷ್ಕರಿಸುವ ಮೂಲಕ ರೈತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಉಪಕರಣವನ್ನು ನಿರ್ವಿುಸಲಾಗಿದೆ. ಭಾಸ್ಕರ್ ಮೂರು ವರ್ಷಗಳ ಹಿಂದೆ ಈ ಪಕರಣ ತಯಾರಿಯಲ್ಲಿ ತೊಡಗಿದ್ದಾರೆ. ಮೂರು ವರ್ಷಗಳ ಕಾಲ ಹಲವು ಮಾರ್ಪಾಡು ಮತ್ತು ಲೋಪದೋಷಗಳನ್ನು ಸರಿಪಡಿಸಿ ಈ ಉಪಕರಣವನ್ನು ಎಲ್ಲ ರೀತಿಯ ಪ್ರಯೋಗಕ್ಕೆ ಒಳಪಡಿಸಿ ಯಶಸ್ವಿಯಾಗಿದ್ದಾರೆ. ತಮ್ಮ ತೋಟವಷ್ಟೇ ಅಲ್ಲ, ಇತರ ತೋಟಗಳಲ್ಲೂ ಔಷಧ ಬಿಡುವ ಮತ್ತು ಅಡಕೆ ಕೊಯ್ಯುವ ಕೆಲಸಕ್ಕೆ ಭಾಸ್ಕರ್ ಇದೇ ಉಪಕರಣ ಬಳಸುತ್ತಿದ್ದಾರೆ.
ಕಾರ್ಯವಿಧಾನ: ಅಡಕೆ ಮರಕ್ಕೆ ಚೈನ್ ಮೂಲಕ ಲಾಕ್ ಮಾಡಿ, ಕೈ ಹಾಗೂ ಕಾಲಿನ ಮೂಲಕ ಈ ಉಪಕರಣವನ್ನು ಉಪಯೋಗಿಸಿ ಮರವನ್ನು ಸಲೀಸಾಗಿ ಹತ್ತಲಾಗುತ್ತದೆ. ಮಾನವ ಶ್ರಮವೇ ಇಲ್ಲಿ ಮುಖ್ಯ. ಇದರ ಉಪಯೋಗವನ್ನು ಅರಿತ ಹಲವು ಕೃಷಿಕರಿಗೆ ಭಾಸ್ಕರ್ ಉಪಕರಣವನ್ನು ನೀಡಿದ್ದಾರೆ. ಉಪಕರಣ ಪಡೆಯಲು ಬರುವ ಕೃಷಿಕನಿಗೆ ತಮ್ಮ ತೋಟದಲ್ಲೇ ತರಬೇತಿ ನೀಡಿದ ಬಳಿಕವೇ ಉಪಕರಣವನ್ನು ಮಾರಾಟ ಮಾಡುತ್ತಾರೆ. ಅಡಕೆ ಮರಗಳಿಗೆ ಸಲೀಸಾಗಿ ಹತ್ತಲು ಉಪಕಾರಿಯಾಗುವ ಈ ಉಪಕರಣದಿಂದ ಅಡಕೆಗೆ ಔಷಧ ಬಿಡುವ, ಅಡಕೆ ಕೊಯ್ಯಬಹುದು. ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದವರೂ ಈ ಉಪಕರಣವನ್ನು ಬಳಸಬಹುದಾಗಿದೆ.
ಸದ್ಯಕ್ಕೆ ಅಡಕೆ ಮರ ಏರುವ ವ್ಯವಸ್ಥೆ ಉಪಕರಣದಲ್ಲಿ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ತೆಂಗಿನ ಮರ ಏರುವಂತೆಯೂ ಅಭಿವೃದ್ಧಿಪಡಿಸಲಾಗುವುದು.
| ಭಾಸ್ಕರ್ ಖಂಡಿಗ, ಉಪಕರಣ ತಯಾರಿಸಿದ ಯುವಕ