

ಶ್ರೀರಾಮ, ಲಕ್ಷ ್ಮರು ಹುಟ್ಟಿದ್ದೇ ಪ್ರಾರ್ಥನೆಯ ಫಲವಾಗಿ. ಕೌಸಲ್ಯೆ, ದಶರಥ, ಸಹೋದರರಾದ ಲಕ್ಷ್ಮಣ, ಭರತ, ಶತ್ರುಘ್ನರೊಡನೆ ಮತ್ತು ಪುರಜನರೊಡನೆ ರಾಮನ ಸಂಬಂಧ ಅದೆಷ್ಟು ಅನ್ಯೋನ್ಯ ಮತ್ತು ಸೌಹಾರ್ದಯುತ. ಎದುರಿಗೆ ಬಂದ ವ್ಯಕ್ತಿ ತನಗಿಂತ ವಯಸ್ಸಿನಲ್ಲಿ ಸಣ್ಣವನಿದ್ದರೂ, ಸಾಮಾನ್ಯನಿದ್ದರೂ, ತಾನೇ ಸ್ವಯಂ ರಾಜಕುಮಾರನಾಗಿದ್ದರೂ ಮೊದಲು ಮಾತನಾಡಿಸುವುದು ರಾಮನೇ.
ಹಾಗೆ ಯಾರಾದರೂ ನಿಜಕ್ಕೂ ಬದುಕಿರುವರೇ ಎಂಬ ಜಿಜ್ಞಾಸೆ ಮನಸ್ಸಿನಲ್ಲಿ ಮೂಡಿದಾಗ ಗುರು ನಾರದ ಸ್ಪಷ್ಟ ಮಾತುಗಳಲ್ಲಿ ಹೇಳಿಬಿಟ್ಟ ; ‘ಅಯೋಧ್ಯೆಯ ರಾಜ ರಾಮಚಂದ್ರ ಹಾಗೆ ಬದುಕಿದವನು’ ಎಂಬುದನ್ನು. ರಾಮನ ವ್ಯಕ್ತಿತ್ವವನ್ನು ಕಣ್ಣಿಗೆ ಕಟ್ಟುವಂತೆ ಅವನಿಗೆ ಅರುಹಿದ. ಇದರಿಂದ ವಾಲ್ಮೀಕಿ ಎಷ್ಟು ಪ್ರಭಾವಿತನಾದನೆಂದರೆ ಇಂದು ವಾಲ್ಮೀಕಿ ರಾಮಾಯಣದಲ್ಲಿ ರಾಮನ ಸದ್ಗುಣಗಳನ್ನು ಅವನು ಸುಮಾರು ಏಳೆಂಟು ಪುಟಗಳಲ್ಲಿ ಚಿತ್ರಿಸಿರುವುದನ್ನು ನೋಡುತ್ತೇವೆ. ಎತ್ತರದ ಮೈಕಟ್ಟಿನ, ಬಲಿಷ್ಠ ತೋಳುಗಳಿಂದ ಕೂಡಿದ, ಅಜಾನುಬಾಹು, ಕಮಲಲೋಚನ ರಾಮನ ಸೌಂದರ್ಯವನ್ನು ಹೇಳತೀರದು. ಆ ಸೌಂದರ್ಯಕ್ಕೆ ಸಿಂಹ ಪರಾಕ್ರಮ, ಅಪಾರ ಪೌರುಶವಂತ ವ್ಯಕ್ತಿತ್ವವೂ ಮೇಳೈಸಿ ರಾಮ ಇಂದು ಪ್ರಿಯದರ್ಶನ ಶ್ರೀರಾಮನಷ್ಟೇ ಅಲ್ಲ ಪುರುಷೋತ್ತಮ ಶ್ರೀರಾಮ; ಮಾನುಷ ಮರ್ಯಾದೆ, ಮರ್ಯಾದಸ್ಥ ಪುರುಷನ ನಡವಳಿಕೆ ಹೇಗಿರಬೇಕು ಎಂಬುದನ್ನು ಅವನಿಂದಲೇ ಕಲಿಯಬೇಕು. ಹೀಗಾಗಿ ಅವನು ಮರ್ಯಾದಾ ಪುರುಷೋತ್ತಮನೂ ಹೌದು!
ಇಷ್ಟಾದರೂ ‘ರಾಮ’ ಎಂದೂ ತನ್ನನ್ನು ‘ಮನುಷ್ಯ’ ಎಂತಲೇ ಪರಿಚಯಿಸಲು ಇಷ್ಟಪಟ್ಟವನು. ‘ಆತ್ಮಾನಂ ಮಾನುಷಂ ಮನ್ಯೇ’ ಎಂಬುದು ವಾಲ್ಮೀಕಿ ರಾಮಾಯಣದಲ್ಲಿನ ಅವನದೇ ಮಾತು. ಬಿಲ್ವಿದ್ಯೆಯಲ್ಲಿ ಅವನನ್ನು ಮೀರಿಸಿದವರಿಲ್ಲ. ಮೊಣಕಾಲಿನವರೆಗೂ ಬರುತ್ತಿದ್ದ ಅವನ ಕೈಗಳು, ಅವನ ಎಂದಿಗೂ ಗುರಿ ತಪ್ಪದ ನಿಖರವಾದ ಹೊಡೆತಗಳೇ ‘ರಾಮಬಾಣ’ ಎಂಬ ನುಡಿಗಟ್ಟನ್ನು ನಿರ್ವಿುಸಿದೆ. ರಾಮಬಾಣ ಎಂದರೆ ಶಾಶ್ವತಪರಿಹಾರ, ವಿಫಲವಾಗದ ಪರಿಹಾರ ಎಂದು ಹೆಸರು. ಇಂಥ ರಾಮನನ್ನು ಕುರಿತ ಚರಿತ್ರೆಯೇ ರಾಮಾಯಣ. ರಾಮಾಯಣ ರಚಿತವಾದಾಗ ರಾಮ ಇನ್ನೂ ಬದುಕಿದ್ದ. ಸ್ವಯಂ ತನ್ನ ಮಕ್ಕಳ ಬಾಯಲ್ಲೇ ತನ್ನ ಚರಿತ್ರೆಯನ್ನು ಕೇಳಿ ರಾಮ ಸ್ವಭಾವಸಹಜ ಗಾಂಭೀರ್ಯದಿಂದ ಆನಂದಿಸಿದ್ದನ್ನು ನೋಡಿದರೆ ಸೋಜಿಗವೆನಿಸುತ್ತದೆ.
ಪ್ರತಿನಿತ್ಯದ ವೈಯಕ್ತಿಕ ಹಾಗೂ ಸಾರ್ವತ್ರಿಕ ನೆಲೆಯಲ್ಲಿ ಮನುಷ್ಯನಿಗೆ ರಾಮಾಯಣ ಕೊಡುವ ಮಾರ್ಗದರ್ಶನ, ಸ್ಪೂರ್ತಿಪ್ರೇರಣೆಗಳಿಗೆ, ಜೀವನಸಂಹಿತೆಗೆ ಮೌಲ್ಯ ಕಟ್ಟಲು ಸಾಧ್ಯವೇ ಇಲ್ಲ. ರಾಮ, ಲಕ್ಷ ್ಮರು ಹುಟ್ಟಿದ್ದೇ ಪ್ರಾರ್ಥನೆಯ ಫಲವಾಗಿ. ಕೌಸಲ್ಯೆ, ದಶರಥ, ಸಹೋದರರಾದ ಲಕ್ಷ್ಮಣ, ಭರತ, ಶತ್ರುಘ್ನರೊಡನೆ ಮತ್ತು ಪುರಜನರೊಡನೆ ರಾಮನ ಸಂಬಂಧ ಅದೆಷ್ಟು ಅನ್ಯೋನ್ಯ ಮತ್ತು ಸೌಹಾರ್ದಯುತ. ಎದುರಿಗೆ ಬಂದ ವ್ಯಕ್ತಿ ತನಗಿಂತ ವಯಸ್ಸಿನಲ್ಲಿ ಸಣ್ಣವನಿದ್ದರೂ, ಸಾಮಾನ್ಯನಿದ್ದರೂ, ತಾನೇ ಸ್ವಯಂ ರಾಜಕುಮಾರನಾಗಿದ್ದರೂ ಮೊದಲು ಮಾತನಾಡಿಸುವುದು ರಾಮನೇ. ರಾಮನ ಈ ಸದ್ಗುಣಗಳನ್ನೇ ಮುಂದೆ ವಿಶ್ವವಿಖ್ಯಾತ ವೈದ್ಯಶಾಸ್ತ್ರಜ್ಞ ಚರಕ ‘ಪರಿಪೂರ್ಣ ವ್ಯಕ್ತಿತ್ವದ ಲಕ್ಷಣಗಳೇನು?’ ಎಂಬುದರ ವ್ಯಾಖ್ಯೆ ನೀಡಲು ಬಳಸಿಕೊಳ್ಳುತ್ತಾನೆ.
ಪೂರ್ವಾಭಿಭಾಷಿ, ಸುಮುಖಃ, ಯಷ್ಟಾ, ಹೋತಾ, ದಾತಾ, ಅತಿಥೀನಾಂಪೂಜಕಃ, ಕಾಲೇ ಹಿತಮಿತ ಮಧುರಾರ್ಥವಾದಿ, ನಿಶ್ಚಿಂತಃ, ನಿರ್ಭೀಕಃ, ಹ್ಲೀಮಾನ್, ಧೀಮಾನ್, ದಕ್ಷಃ, ಕ್ಷಮಾವಾನ್, ಧಾರ್ವಿುಕಃ, ಆಸ್ತಿಕಃ, ಮಂಗಲಾಚಾರಶೀಲಃ, ಇವೇ ಆ ಲಕ್ಷಣಗಳು. ಸೀತೆಯ ಸ್ವಯಂವರಕ್ಕೆಂದು ಮಹರ್ಷಿ ವಿಶ್ವಾಮಿತ್ರ ರಾಮ, ಲಕ್ಷ ್ಮರನ್ನು ಮಿಥಿಲೆಗೆ ಕರೆದುಕೊಂಡು ಬಂದಾಗ ಅವನ ರೂಪ, ಲಾವಣ್ಯಗಳಿಗೆ ಮನಸೋತ ಪುರಜನರು, ‘ಜನಕ ಬಿಲ್ಲಿಗೆ ಹದೆಯೇರಿಸುವ ಪರೀಕ್ಷೆಯನ್ನಾದರೂ ಏಕೆ ಇಟ್ಟನೋ? ಇಂಥ ಲಾವಣ್ಯವಂತನೇ ನಮ್ಮ ಸೀತೆಗೆ ಯೋಗ್ಯ. ನೇರವಾಗಿಯೇ ಇವನನ್ನೇ ಅವಳು ಮದುವೆಯಾಗಬಹುದಿತ್ತು’ ಎಂದು ಪೇಚಾಡಿಕೊಂಡಿದ್ದು ಸ್ವಲ್ಪವಲ್ಲ. ಕಣ್ಣಿಗೆ ಕಟ್ಟುವಂತೆ ತುಳಸಿದಾಸ ಇದನ್ನು ವರ್ಣಿಸುತ್ತಾನೆ ತನ್ನ ‘ರಾಮಚರಿತಮಾನಸ’ದಲ್ಲಿ ; ಅಷ್ಟೇ ರಮಣೀಯವಾಗಿ ಬ್ರಹ್ಮಲೀನ ಪೂಜ್ಯ ಸ್ವಾಮಿ ಪುರುಷೋತ್ತಮಾನಂದಜಿ ತಮ್ಮ ‘ಪ್ರಿಯದರ್ಶನ ಶ್ರೀರಾಮ’ ಉಪನ್ಯಾಸದಲ್ಲಿ.
ರಾಮನ ಗುಣ, ಶೌರ್ಯ, ಗಾಂಭೀರ್ಯ, ಇವುಗಳು ಅವನ ಸ್ನೇಹಿತರಿಗೆ, ಜನಪದಕ್ಕೆ ಮೆಚ್ಚುಗೆಯಾಗುವುದು ಒತ್ತಟ್ಟಿಗಿರಲಿ; ಅಲ್ಲಿಯವರೆಗೆ ಕ್ಷತ್ರಿಯರ ನೆರಳನ್ನೂ ದ್ವೇಷಿಸುತ್ತಿದ್ದ, ಕ್ಷತ್ರಿಯ ವರ್ಣವನ್ನೇ ನಿಮೂಲಮಾಡಬೇಕೆಂಬ ಪ್ರತಿಜ್ಞೆ ತೊಟ್ಟು, ಇಪ್ಪತ್ತೊಂದು ಸಲ ಭೂಪ್ರದಕ್ಷಣೆಯನ್ನು ಮಾಡಿದ್ದ ಪರಶುರಾಮನಿಗೂ ಅದೆಷ್ಟು ಮನಮುಟ್ಟಿತೆಂದರೆ ಕ್ಷತ್ರಿಯನ್ನೊಬ್ಬ ಇಷ್ಟು ಆದರ್ಶಗಳುಳ್ಳವನೂ ಮರ್ಯಾದಾಪುರುಷೋತ್ತಮನೂ ಆಗಿದ್ದೇ ಆದರೆ ಅವನ ಕೈಯಲ್ಲಿ ಭೂಮಿ ಸುಕ್ಷೇಮವೆಂದೇ ಭಾವಿಸಿ, ತನ್ನ ಜವಾಬ್ದಾರಿ ಇನ್ನು ಮುಂದೆ ರಾಮ ನಿಭಾಯಿಸಬಲ್ಲ ಎಂಬ ದೃಢನಂಬಿಕೆಯೊಂದಿಗೆ ಪರಶುರಾಮ ತಪಗೈಯಲು ಮಹೇಂದ್ರಗಿರಿಗೆ ಹೊರಟೇಬಿಟ್ಟ. ಮಹೇಂದ್ರಗಿರಿಯ ತಪಸ್ವಿಯೊಬ್ಬರನ್ನು ಮೊನ್ನೆ ಅಯೋಧ್ಯೆಯಲ್ಲಿ ಭೇಟಿಮಾಡಿ ಅವರೊಡನೆ ಸಂಭಾಷಿಸುವ ಅವಕಾಶ ನನಗೆ ಸಿಕ್ಕಿದ್ದು ಧರ್ಮ ಕರ್ಮ ಸಂಯೋಗವೇ ಸರಿ.
ಕುರ್ಚಿಗಾಗಿ ಯಾವ ಪಾಪವನ್ನೂ ಮಾಡಲು ಹೇಸದ, ಯಾವ ಸತ್ಯವನ್ನೂ ಮರೆಮಾಚಲು ಹೇಸದ, ಸುಳ್ಳುಗಳ ರಾಶಿಯನ್ನೇ ನಿರ್ವಿುಸುವ, ಅದರಲ್ಲಿ ಹೆಮ್ಮೆಯನ್ನೂ ಕಾಣುವ, ದೇಶ, ಧರ್ಮ ಎಲ್ಲಕ್ಕೂ ಯಾವ ರೀತಿಯಲ್ಲೂ ಅಪಮಾನವೆಸಗಲು ಹೇಸದ, ಶತ್ರುರಾಷ್ಟ್ರದೊಡನೆ ಶಾಮೀಲು ಆಗುವುದಕ್ಕೂ ಹಿಂಜರಿಯದ ಸದ್ಯದ ರಾಜ ತಂದೆಯೇ ಆಗಿದ್ದರೂ ಅವನನ್ನು ಸೆರೆಮನೆಗೆ ದೂಡಿಯೋ, ಅವನನ್ನು ಕೊಂದೋ ಅಧಿಕಾರ ಹಿಡಿಯುವ ಇತಿಹಾಸದಲ್ಲಿ ಕಂಗೊಳಿಪ ಭೂಪರ ನಡುವೆ ಬದುಕುತ್ತಿದ್ದೇವೆ ನಾವಿಂದು. ‘ನಾನು ಹೇಳುತ್ತೇನೆ ಕಾಡಿಗೆ ಹೋಗಬೇಡ’ ಎಂದು; ‘ಮಾತೃವಾಕ್ಯ ಪರಿಪಾಲನೆ ಮಾಡು’ ಎಂದು ಆಗ್ರಹಗೈದ ಕೌಸಲ್ಯೆಗೆ ಪರಿಪರಿಯಾಗಿ ಹೇಳಿ ಮನವೊಪ್ಪಿಸಿ ಕಾಡಿಗೆ ಹೊರಟವನು ರಾಮ. ಅಧಿಕಾರ ನಮ್ಮನ್ನು ಅರಸಿ ಬರಬೇಕೇ ಹೊರತು ನಾವು ಅದರ ಹಿಂದೆ ಬೀಳುವುದಲ್ಲ ಎಂಬ ಮಹಾನ್ ತತ್ವ ಅವನದ್ದು.
ಘಟಠಿಜಜ್ಞಿಜ ್ಚ್ಞ ಟ್ಟಛಿಡಛ್ಞಿಠಿ ಢಟ್ಠ fಟಞ ಜಛಿಠಿಠಿಜ್ಞಿಜ ಡಿಜಚಠಿ ಢಟ್ಠ ಛಛಿಠಛ್ಟಿಡಛಿ ಎಂಬ ವಿವೇಕಾನಂದ ಪ್ರಣೀತ ಜೀವನಸೂತ್ರದ ಅದ್ಭುತ ನಿದರ್ಶನವಿದೆಯಿಲ್ಲಿ.
ನದಿಯನ್ನು ದಾಟಲು ಸಹಾಯ ಮಾಡಿದವನು ನಿಶಾದರಾಜ ಗುಹ. ಅವನ ಸಹಾಯಕ್ಕಾಗಿ ಸೀತೆಯ ಆಭರಣವೊಂದನ್ನು ಕೊಡಲಿಚ್ಛಿಸಿದ ರಾಮ. ಏಕೆಂದರೆ ಅವನು ಈಗ ತಾಪಸಿ. ಚಿಕ್ಕಾಸೂ ಇಲ್ಲದವ. ಆದರೆ ಗುಹ ಇದಕ್ಕೆ ಸಮ್ಮತಿಸಲಿಲ್ಲ. ರಾಮನಂಥ ಮಹಾನುಭಾವನಿಗೆ ಪುಟ್ಟ ಸೇವೆಗೈಯ್ಯಲು ಸಿಕ್ಕ ಸುವರ್ಣಾವಕಾಶವಿದು. ಇದಕ್ಕಾಗಿ ತಾನು ವಿಧಿಗೆ ಆಜನ್ಮ ಕೃತಜ್ಞ ಎಂಬ ಮಾತನ್ನಾಡಿದಾಗ ಅವನ ಈ ಉದಾತ್ತತೆಯನ್ನು ಮೆಚ್ಚಿದ ರಾಮ ಅವನನ್ನು ಬಾಚಿ ತಬ್ಬಿಕೊಂಡು ಪಕ್ಕದಲ್ಲೇ ಇದ್ದ ಲಕ್ಷ್ಮಣನಿಗೆ ಹೇಳುತ್ತಾನೆ, ‘ಲಕ್ಷ್ಮಣ ಇಂದಿನಿಂದ ನಾವು ಐದುಜನ ಅಣ್ಣ-ತಮ್ಮಂದಿರು’ ಎಂದು. ಇದೇ ರಾಮನ ಸಾಮಾಜಿಕ ನ್ಯಾಯ. ಇದೇ ಆರ್ಯಭಾರತ. ವ್ಯಕ್ತಿಯೊಬ್ಬನ ಸಾಮಾಜಿಕ ಸ್ಥಾನಮಾನಗಳನ್ನು, ಋಷಿ ವರ್ಣಗಳನ್ನು ನಿಗದಿಪಡಿಸಲು ಆಧರಿಸುತ್ತಿದ್ದ ಮಾನದಂಡ.
ತಂದೆ ಯಾರು ಎಂದು ಗೊತ್ತಿಲ್ಲದಿದ್ದ ಹುಡುಗನಿಗೆ ಅವನ ವಿದ್ಯೆ, ತಪಸ್ಸುಗಳನ್ನು ಆಧರಿಸಿ ‘ಋಷಿಸ್ಥಾನ’ ಕೊಟ್ಟ ಆರ್ಯಾವರ್ತ ಹುಟ್ಟಿನಿಂದ ವ್ಯಕ್ತಿಯ ವರ್ಣ, ಸ್ಥಾನಗಳನ್ನು ನಿರ್ಧರಿಸುತ್ತದೆ ಎನ್ನುವ ಬುದ್ಧಿಹೀನ ಅಧ್ಯಯನಹೀನರಿಗೆ ಇದಕ್ಕಿಂತ ದೊಡ್ಡ ಪಾಠ ಬೇಕೆ? ಮನುಸ್ಮ ೃಯೇ ಹಿಂದೂ ತತ್ವಗಳ ಸರ್ವಾಧಾರವಲ್ಲ ಎಂಬ ಸತ್ಯವನ್ನು ಇವರು ಅರಿಯಲು ಇನ್ನೂ ಅದೆಷ್ಟು ಕಾಲ ಬೇಕೋ! ರಾಮಾಯಣವೆಂಬ ಜೀವನ ಸಂಹಿತೆಯಲ್ಲಿ ಅದೆಷ್ಟು ಇಂಥ ವ್ಯಕ್ತಿರತ್ನಗಳ ಪರಿಚಯವಿದೆಯೋ? ಯೋಚಿಸಿ ನೋಡಿ. ರಾವಣನ ಪರಾಕ್ರಮದ ಮುಂದೆ ತಾನೇನು ಅಲ್ಲ ಎಂದು ಗೊತ್ತಿದ್ದ ಜಟಾಯು ಅವನ ಅನ್ಯಾಯವನ್ನು ಕಂಡು ಅಸಹಾಯಕವಾಗಿ ಸುಮ್ಮನೆ ಕೂಡಲಿಲ್ಲ, ಈ ಕಾಲದ ಅನೇಕ ವಿದ್ಯಾವಂತರಂತೆ! ತನ್ನ ಶಕ್ತಿಯಿದ್ದಷ್ಟು ಹೋರಾಡಿದ; ತನ್ನ ರೆಕ್ಕೆಗಳೇ ಕತ್ತರಿಸಿಹೋಗಿದ್ದರೂ, ಯಾವ ಕ್ಷಣದಲ್ಲೂ ಪ್ರಾಣವಾಯು ಹಾರಿ ಹೋಗುವ ಸ್ಥಿತಿಯಲ್ಲಿದ್ದರೂ, ರಾಮ ಬರುವವರೆಗೂ ಕಾದಿದ್ದು ಅವನಿಗೆ ಸುದ್ದಿ ಮುಟ್ಟಿಸಿಯೇ, ಅವನ ಭುಜದ ಮೇಲೆರಗಿಯೇ, ಪ್ರಾಣಬಿಟ್ಟ. ಅವನ ಸಹೃದಯತೆಗೆ ಮನಕರಗಿ ಕಣ್ಣೀರಿಟ್ಟ ರಾಮ ಅವನ ಅಂತ್ಯಕ್ರಿಯೆಗಳನ್ನು ತಾನೇ ಮಾಡಿದ, ದಶರಥನಿಗೂ ಆ ಸೌಭಾಗ್ಯ ಒದಗಿರಲಿಲ್ಲ. ಜೀವಿಯೊಂದರ ತತ್ವಬದ್ಧತೆ, ಮೌಲ್ಯಗಳಿಗಾಗಿ ತನ್ನ ಪ್ರಾಣವನ್ನೇ ಬಲಿಗೈದ ಧೀರನೊಬ್ಬನಿಗೆ ರಾಮನ ದೃಷ್ಟಿಯಲ್ಲಿ ಯಾವ ಸ್ಥಾನವಿದೆ ಎಂಬುದನ್ನು ಇದು ತೋರಿಸಿಕೊಡುತ್ತದೆ.
ರಾಮ ಸೇತುವೆ ಕಟ್ಟುವುದರಲ್ಲಿ ಅಳಿಲಿನ ಪಾತ್ರ ಇಂದು ಜನಜನಿತ. ಆದರೆ ರಾಮಾಯಣ ಕಾಲದಲ್ಲಿನ ಆರ್ಯಾವರ್ತದ ನ್ಯಾಯಪ್ರಜ್ಞೆ, ನೀತಿಪ್ರಜ್ಞೆ ಯಾವ ಮಟ್ಟದ್ದು ಎಂಬುದನ್ನು ನಾವು ಒಂದು ಕ್ಷಣ ಅವಲೋಕಿಸಬೇಕಾದ್ದೇ ಮುಖ್ಯ. ಪುಟ್ಟ ಶರೀರದ ಅಳಿಲು ಒದ್ದೆಯಾದ ತನ್ನ ಶರೀರದಿಂದ ಅದೆಷ್ಟು ಮರಳನ್ನು ಹೊರಬಲ್ಲದು! ಆದರೆ ಮಹತ್ಕಾರ್ಯವೊಂದರಲ್ಲಿ, ಜಗತ್ಕಲ್ಯಾಣದಲ್ಲಿ ಎಷ್ಟೇ ಕಿರಿದಾದರೂ ಪ್ರತಿಯೊಬ್ಬರೂ ಪಾತ್ರವಹಿಸಬೇಕೆಂಬ ಅದರ ಪ್ರಜ್ಞೆ ಸಾರ್ವಕಾಲಿಕ ಮಾನ್ಯತೆಯುಳ್ಳದ್ದು. ಈ ಮಹಾನ್ ಘಟನೆಗಳು ಅಂದಿನ ಕಾಲದ ಚಾರಿತ್ರ್ಯ ಶ್ರೀಮಂತಿಕೆಯನ್ನು ಕುರಿತು ಹೇಳುತ್ತದೆ. ಮೇಲೆ ಉದಾಹರಿಸಿದ ಯಾವ ಪಾತ್ರವೂ ಬಾಯಲ್ಲಿ ಉಪದೇಶಗಳನ್ನು ಕೊಡಲಿಲ್ಲ. ಆಚರಣೆಯಲ್ಲಿ ಅದನ್ನು ತೋರಿ ಜಾಗತಿಕ ಮಾನ್ಯತೆಯನ್ನು ಗಳಿಸಿಕೊಂಡವು. ಉದಾತ್ತದೃಷ್ಟಿ, ಉದಾತ್ತಜೀವನ, ಪಶುಪಕ್ಷಿಗಳಿಗೂ ಅರ್ಥವಾಗುವಷ್ಟು ಸರ್ವೆಸಾಮಾನ್ಯವಾಗಿತ್ತು ಅಂದು. ಅದನ್ನು ಸಾಧಿಸಿದ್ದು ಹೇಗೆ ಅವರು? ಹಾಗೆ ಬದುಕಿದವರನ್ನೇ ಅಂದಿನ ಸಮಾಜದ ಗಣ್ಯರಾಗಿಸುವುದರ ಮೂಲಕ.
ಯಾವುದೇ ಕಾಲದಲ್ಲಿ ಸಾಮಾಜಿಕ ಮೌಲ್ಯಗಳು ನಿರ್ವಣವಾಗುವುದೇ ಅಂದಿನ ಗಣ್ಯರ ಬದುಕನ್ನು ಆಧರಿಸಿ. ಅಂದಿನ ್ಚ್ಝಚ್ಟಿಜಿಠಿಢಗಳು ಯಾರು ಎಂಬುದನ್ನು ಅನುಸರಿಸಿ. ಮಹರ್ಷಿ, ಬ್ರರ್ಹ¾, ರಾಜರ್ಷಿಗಳು ಆದರ್ಶವಾಗಿದ್ದ ಕಾಲವದು. ಇಂದಿನಂತೆ ಬಾಹ್ಯಾಡಂಬರ, ಮೋಸ, ನರಿಬುದ್ಧಿ , ಗುರಿ ಮುಖ್ಯದಾರಿ ಅಲ್ಲ ಎಂಬ ಆತ್ಮಹತ್ಯಾಕಾರಕ ಪ್ರವೃತ್ತಿಗಳಿಗೆ ಬಿಡಿಗಾಸಿನಷ್ಟೂ ಗೌರವವಿಲ್ಲದಿದ್ದ ಕಾಲವದು. ಮಾತು ಕೃತಿಗಳಲ್ಲಿ ವಿರುದ್ಧವಾಗಿ ಬದುಕುವ, ನಟನೆ ಮಾಡುವ ಶಕುನಿ ಸಂಸ್ಕೃತಿಗೆ ಮಾನ್ಯತೆ ಕೊಡದ ಜನರವರು.
ಮೇಲೆ ಪ್ರಸ್ತಾಪಿಸಿದ ಎಲ್ಲ ಉದಾತ್ತ ಚರಿತರಿಗೂ ರಾಜನಂತೆ ಮೆರೆದವನೇ ರಾಮ. ಒಬ್ಬ ವ್ಯಕ್ತಿಯ ಮರ್ಯಾದೆ ಪೌರುಷಗಳನ್ನು ಅಳಿಯಬೇಕಾದರೆ ಮಾನದಂಡವೇ ಅವನ ತತ್ವಾನುಷ್ಠಾನ ಸಾಮರ್ಥ್ಯ, ತತ್ವಬದ್ಧತೆ ; ತತ್ವಕ್ಕಾಗಿ ಯಾವ ತ್ಯಾಗಕ್ಕೂ ಸದಾ ಸಿದ್ಧನಿರುವ ಧೀರತೆ. ಅದೇ ರಾಮತತ್ವ, ರಾಮಸಂಸ್ಕೃತಿ. ಇದು ಸರ್ವಜನ ಸಮ್ಮಾನಿತವಾದಾಗ ಅದೇ ರಾಮರಾಜ್ಯ. ಅದೇ ಗಾಂಧೀಜಿಯವರು ಕಂಡ ಕನಸು. ಈ ರಾಮತತ್ವವನ್ನೇ ಭಾರತ ತನ್ನ ಸಾರ್ವಕಾಲಿಕ ಸಂಸ್ಕೃತಿಯನ್ನಾಗಿಸಿಕೊಳ್ಳಲು ಇಚ್ಛಿಸುವುದು. ತನ್ನ ಸದ್ಯದ ರಾಷ್ಟ್ರೀಯ ಉಸಿರಾಗಿಸಿಕೊಳ್ಳಲೆಳಸುತ್ತಿರುವುದು. ಈ ಕಾರಣದಿಂದಲೇ ‘ಅಯೋಧ್ಯಾ ರಾಮಮಂದಿರ’ಕ್ಕೆ ‘ನ ಭೂತೋ’ ಎನ್ನುವ ಮಟ್ಟದ ಉತ್ಸಾಹ, ಸಂಭ್ರಮ, ಸ್ವಾಗತ. ದಶ ದಿಕ್ಕುಗಳಲ್ಲೂ ಅನುರಣಿಸುವ ಜಯಘೊಷ!
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)