ಸ್ನಾನ-ಸಾಬೂನಿನ ಗುಟ್ಟು: ದಿನಕ್ಕೆರಡು ಬಾರಿ ಜಳಕ...

Bath
Published on

ಸ್ನಾನವೆಂದರೆ ಒಂದು ರೀತಿ ಆಹ್ಲಾದ. ತಜ್ಞರು ಹೇಳುವಂತೆ ದಿನಕ್ಕೆ ಎರಡು ಬಾರಿಯಾದರೂ ಸ್ನಾನ ಮಾಡಬೇಕು. ಸ್ನಾನ ಸರಿಯಾಗಿ ಮಾಡದಿದ್ದರೆ ತ್ವಚೆ ಕಳೆಗುಂದುವುದು ಗ್ಯಾರಂಟಿ. ಹೇಗೆ ಅಂತೀರಾ?

| ಅಶ್ವಿನಿ ಎಚ್.ಆರ್.

ಸಾಬೂನು ಲೇಪಿಸಿದ ತಕ್ಷಣಕ್ಕೆ ಮೈ ಮೇಲೆ ನೀರು ಹಾಕುವುದರಿಂದ ಕೊಳೆ ಸರಿಯಾಗಿ ಹೋಗುವುದಿಲ್ಲ. ಜಿಡ್ಡುಗಟ್ಟುತ್ತದೆ. ಆಗ ಚರ್ಮದ ಬಣ್ಣ ಕಪ್ಪಾದಂತೆ ಕಾಣುತ್ತದೆ. ವಾಸನೆ ಬರುತ್ತದೆ. ಆದ್ದರಿಂದ ಸಾಬೂನು ಲೇಪಿಸಿ ಕನಿಷ್ಠ ಕೆಲಕಾಲದ ತರುವಾಯ ಬ್ರಷ್ ಮಾಡಿ. ಆಗ ದಡ್ಡುಗಟ್ಟಿದ ಜಿಡ್ಡು ತಂತಾನೇ ಮೇಲೆ ಬಂದು ಚರ್ಮ ಶುದ್ಧಗೊಳ್ಳುತ್ತದೆ.

  • ಸ್ನಾನ ಮಾಡುವಾಗ ವಾರಕ್ಕೆ ಒಂದು ಬಾರಿಯಾದರೂ ಸಾಬೂನಿನ ಬದಲಾಗಿ ಹೆಸರುಕಾಳು ಹಿಟ್ಟು ಅಥವಾ ಕಡ್ಲೆಹಿಟ್ಟು ಜತೆಗೆ ಎಳ್ಳಿನಪುಡಿ ಬೆರೆಸಿ ಸ್ನಾನಕ್ಕೆ ಬಳಸಿ. ಇದನ್ನು ತಲೆಸ್ನಾನಕ್ಕೂ ಬಳಸಬಹುದು.
  • ವಾರಕ್ಕೊಮ್ಮೆ ಮೈಗೆ ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡುವುದು ಒಳ್ಳೆಯದು. ಒಂದು ಚಮಚ ಬಾದಾಮಿ ಎಣ್ಣೆ, ಒಂದು ಚಮಚ ಲೋಳೆಸರದ ತಿರುಳು, ಅರ್ಧ ಚಮಚ ಬೆಣ್ಣೆ, ಅರ್ಧ ಚಮಚ ಗುಲಾಬಿ ಜಲವನ್ನು ಸೇರಿಸಿ ಒಂದು ಚಿಕ್ಕ ಗಾಜಿನ ಬಟ್ಟಲಿನಲ್ಲಿ ತುಂಬಿಸಿಟ್ಟುಕೊಳ್ಳಿ. ಪ್ರತಿದಿನ ರಾತ್ರಿ ಮುಖ ಮತ್ತು ಕೈ ಕಾಲುಗಳಿಗೆ ಹಚ್ಚಿಕೊಂಡರೆ ಮೃದು ಹಾಗೂ ಕಾಂತಿಯುತವಾಗುತ್ತದೆ.
  • ದಿನಕ್ಕೆ 3-4 ಲೀಟರ್ ಕುಡಿಯಿರಿ. ತುಟಿಗೆ ಆಗಾಗ ಬೆಣ್ಣೆ ಅಥವಾ ತುಪ್ಪ ಲೇಪಿಸಿಕೊಂಡು ಮೃದುವಾಗಿ ಮಸಾಜ್ ಮಾಡಿಕೊಳ್ಳಿ.
  • ಸ್ನಾನಕ್ಕೆ ಹೆಚ್ಚು ಬಿಸಿನೀರು ಬಳಕೆ ಬೇಡ. ಸಾಮಾನ್ಯವಾಗಿ ಚಳಿ ಹೆಚ್ಚಾಗಿರುವುದರಿಂದ ತಕ್ಷಣ ಬಿಸಿ ನೀರು ಹಾಕಿಕೊಂಡರೆ ಚರ್ಮ ಬಿರಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಿಸಿನೀರಿನ ಬಳಕೆ ಬೇಡ. ಹೆಚ್ಚು ಕ್ಷಾರಯುಕ್ತ ಸಾಬೂನಿನ ಬಳಕೆ ಕೂಡ ಬೇಡ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net