

ಮನೆ ಕಟ್ಟುವವರ ಬಹುತೇಕ ಮಂದಿಯ ಕಷ್ಟ ದೇವರಿಗೇ ಪ್ರೀತಿ. ಒಬ್ಬೊಬ್ಬರದ್ದು ಒಂದೊಂದು ತೆರನಾದ ಎಕ್ಸ್‌ಪೀರಿಯನ್ಸ್…. ಅದಕ್ಕೇ ತಾನೆ ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎನ್ನುವುದು… ಹೀಗೆ ಮನೆ ಕಟ್ಟಿರುವವರ ಅನುಭವಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ ಕರೆಗೆ ಬಂದಿದ್ದ ಪತ್ರಗಳ ಪೈಕಿ ಆಯ್ದ ಕೆಲವು ಪತ್ರಗಳನ್ನು ಇಲ್ಲಿ ದಿನವೂ ಪ್ರಕಟಿಸಲಾಗುತ್ತಿದೆ….
|ಸುಜಾತಾ ಎಂ.ಎಸ್, ಶಿವಮೊಗ್ಗ
2016ರಲ್ಲಿ ಮನೆ ಕಟ್ಟಲು ಆರಂಭಿಸಿದ್ದೆ. ಆಗ ಮರಳಿಗೆ ಸರ್ಕಾರ ಬಹಳಷ್ಟು ನಿರ್ಬಂಧ ವಿಧಿಸಿತ್ತು. ಪಾಸ್ ಮೂಲಕ ತಿಂಗಳಿಗೆ ಒಂದು ಲೋಡ್ನಂತೆ ಸರತಿಯಲ್ಲಿ ಪೂರೈಸುತ್ತಿದ್ದರು. ಅದನ್ನು ನಂಬಿಕೊಂಡರೆ ಪ್ರತಿದಿನ ಕೆಲಸ ಮಾಡಿಸಲು ಮರಳೇ ಇರುತ್ತಿರಲಿಲ್ಲ.
ಕಡೆಗೆ ಬೇರೆ ಖಾಸಗಿಯಾಗಿ ಖರೀದಿ ಮಾಡತೊಡಗಿದೆವು. ಕೆಲಸ ಮುಗಿದರೆ ಸಾಕೆಂದು ಒಂದು ಲಾರಿಗೆ 30&40 ಸಾವಿರ ರೂ.ವರೆಗೆ ಮರಳಿಗೆ ಹಣ ಪಾವತಿ ಮಾಡಿದ್ದಿದೆ.
ಹೊಸ ಬಡಾವಣೆಯಾದ್ದರಿಂದ ಅಕ್ಕಪಕ್ಕ ಅಷ್ಟಾಗಿ ಇನ್ನೂ ಮನೆಗಳಿರಲಿಲ್ಲ. ಬೆಳಗಾವಿ ಕಡೆಯಿಂದ ಬಂದಿದ್ದ ಅಲೆಮಾರಿ ಕುರುಬರು ನಮ್ಮ ಸೈಟಿನ ಪಕ್ಕದಲ್ಲಿಯೇ ಟೆಂಟ್ ಹಾಕಿಕೊಂಡಿದ್ದರು. ರಾತ್ರಿ ಅವರಿಗೆ ಸ್ವಲ್ಪ ನೋಡ್ತಾ ಇರಿ ಎಂದು ಹೇಳಲು ಹೋದೆ.
ನಮ್ಮ ಖಾತೆಯಲ್ಲಿ ಹಣ ಇದೆ, ಬ್ಯಾಂಕಿನವರು ಕೊಡುತ್ತಿಲ್ಲ. "ಮನೆ ಕಟ್ಟೋದಿಕ್ಕೆಲ್ಲಾ ದುಡ್ಡು ಕೊಡಕಾಗಲ್ಲ' ಎಂದು ಮ್ಯಾನೇಜರ್ ನೇರವಾಗಿಯೇ ಹೇಳಿದರು. ಅಲ್ಲಿಂದ ಮುಂದಕ್ಕೆ ಕೆಲಸದವರಿಗೆ ಪೇಮೆಂಟ್ ಮಾಡಲು ಹಣವಿಲ್ಲ. ಕಡೆಗೆ ಉಳಿದ ದಾರಿಯೆಂದರೆ ಗಾರೆ ಮೇಸಿ, ಕಾರ್ಪೆಂಟರ್ ಇಬ್ಬರನ್ನೂ ಬ್ಯಾಂಕಿಗೆ ಕರೆದೊಯ್ದು ಎಸ್ಬಿ ಅಕೌಂಟ್ ಮಾಡಿಸಿ ಎಟಿಎಂ ಕಾರ್ಡ್ ಕೊಡಿಸಿ ನೆಟ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾವಣೆ ಮಾಡಿದೆವು. ಅಂತೂ ನಮ್ಮ ಕನಸಿನ ಮನೆ ನಿರ್ಮಾಣ ಆಗುವುದರೊಳಗೆ ಏನೇನೋ ಟನೆಗಳು ಸಂಭವಿಸಿಬಿಟ್ಟವು.