More

    ಬ್ರಹ್ಮಚರ್ಯಪಾಲಕನಾಗಿದ್ದೆ… ಮನೆಕಟ್ಟಿ ಮುಗಿಯವವರೆಗೆ ವಾಚ್‌ಮನ್ನೂ ಆದೆ!

    ಮನೆ ಕಟ್ಟುವವರ ಬಹುತೇಕ ಮಂದಿಯ ಕಷ್ಟ ದೇವರಿಗೇ ಪ್ರೀತಿ. ಒಬ್ಬೊಬ್ಬರದ್ದು ಒಂದೊಂದು ತೆರನಾದ ಎಕ್ಸ್‌ಪೀರಿಯನ್ಸ್‌…. ಅದಕ್ಕೇ ತಾನೆ ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎನ್ನುವುದು… ಹೀಗೆ ಮನೆ ಕಟ್ಟಿರುವವರ ಅನುಭವಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ ಕರೆಗೆ ಬಂದಿದ್ದ ಪತ್ರಗಳ ಪೈಕಿ ಆಯ್ದ ಕೆಲವು ಪತ್ರಗಳನ್ನು ಇಲ್ಲಿ ದಿನವೂ ಪ್ರಕಟಿಸಲಾಗುತ್ತಿದೆ….

    | ಬಸವರಾಜ ಮಲ್ಲಪ್ಪ ಕಡೇತೋಟದ, ಹುಬ್ಬಳ್ಳಿ

    ಒಂದಿಷ್ಟು ಕಾಸು ಕೈಯಲ್ಲಿದ್ದುದರಿಂದ ಮನೆ ಕಟ್ಟಿಸುವ ಹುರುಪು ಹುಟ್ಟಿತು. ಎರೆಮಿಶ್ರಿತ ಮಣ್ಣಾದ್ದರಿಂದ ಪಾಯ ಹಾಕಲು ಲಗಟ್ಟಲೆ ಸುರಿದಾಯ್ತು. ಇಂಜಿನಿಯರ್​ನ ನೀಲಿ ನಕಾಶೆಯಂತೆ ನೆಲದ ಮೇಲೆ ಏನಾದರೂ ಒಂದು ಆಕೃತಿ ಯಾವಾಗ ಕಾಣುತ್ತದೋ ಎಂಬ ಕುತೂಹಲ ಇತ್ತು.

    ಬ್ರಹ್ಮಚರ್ಯಪಾಲಕನಾಗಿದ್ದೆ... ಮನೆಕಟ್ಟಿ ಮುಗಿಯವವರೆಗೆ ವಾಚ್‌ಮನ್ನೂ ಆದೆ!ಅಂತೂ ಕಟ್ಟಡ ನೆಲ ಬಿಟ್ಟು ಮೇಲೇರಿದಾಗ “ಅಬ್ಬಾ! ಅಂತೂ ಇಷ್ಟು ದುಡ್ಡು ಸುರಿದ ಮೇಲೆ ಮನೆ ಮುಗಿಯುವ ಹಂತಕ್ಕೆ ಬಂತಲ್ಲ’ ಎಂದು ಖುಷಿ. ಆದರೆ ಅಷ್ಟೊತ್ತಿಗಾಗಲೇ ಜೇಬು ಖಾಲಿ! ಸಾಲಕ್ಕಾಗಿ ಬ್ಯಾಂಕಿನೆಡೆ ಮುಖ ಮಾಡಿದೆವು. ಸ್ಲ್ಯಾಬ್‌ ಹಾಕುತ್ತಿದ್ದಂತೆಯೇ ಮನೆ ಕಟ್ಟುವುದು ಮುಗಿಯೋಕೇ ಬಂತೇನೋ ಎನ್ನುವ ಸಂಭ್ರಮ. ಈ ಬಗ್ಗೆ ಇಂಜಿನಿಯರ್​ನ ಕೇಳಿದಾಗ ಆತ “ಇಷ್ಟು ಬೇಗನಾ? ಈಗ ಆಗಿರುವುದಷ್ಟು ನಗ್ನ ದೇಹವಿದ್ದಂತೆ, ಇದಕ್ಕೆ ಬಟ್ಟೆ ತೊಡಿಸಿ ಸಿಂಗರಿಸಬೇಕು, ಇನ್ಮೇಲೆ ಶುರುವಾಗೋದು ಮನೆ ಕಟ್ಟುವ ಕಾರ್ಯ’ ಎನ್ನಬೇಕೆ?

    ಬ್ಯಾಂಕಿನವರು ನೀಡಿದ ಸಾಲದ ದುಡ್ಡೂ ಮುಗಿಯುತ್ತ ಬಂತು. ಆದರೆ ಮನೆಯ ಕೆಲಸ ಮುಗಿಯಲೇ ಇಲ್ಲ. ವಾಚ್​ಮನ್​ಗೆ ಕೊಡಲೂ ದುಡ್ಡಿಲ್ಲದಂತಾಗಿ ಅವನನ್ನು ಬಿಡಿಸಿಬಿಟ್ಟೆ. ಕೆಲಸ ಅಂತಿಮ ಹಂತದಲ್ಲಿದ್ದಾಗ ಒಂದು ದಿನ ಹೊಸ ಕೆಲಸಗಾರನೊಬ್ಬ ಮನೆ ಮುಂದೆ ನಿಂತಿದ್ದ ನನ್ನನ್ನು ನೋಡಿ ಏಕವಚನದಲ್ಲಿ ಸಂಬೋಧಿಸಿದ. ನಾನು ಕಕ್ಕಾಬಿಕ್ಕಿಯಾದೆ. “ನಾನು ವಾಚ್​ಮನ್​ ಅಲ್ಲಾರೀ.. ಓನರ್​’ ಎಂದು ಹೇಳಿಕೊಳ್ಳಬೇಕಾಯಿತು. ಕನ್ನಡಿಯಲ್ಲಿ ನನ್ನ ಅವತಾರ ನೋಡಿಕೊಂಡಾಗ ಅವನು ಹೇಳಿದ್ದರಲ್ಲಿ ಅತಿಶಯ ಏನೂ ಇಲ್ಲ ಎನ್ನಿಸಿಬಿಟ್ಟಿತು. ಅಂತೂ ಬ್ರಹ್ಮಚರ್ಯ ಪರಿಪಾಲಕನಾದ ನಾನು ತಾಯಿಯ ಆಸೆ ಈಡೇರಿಸಲು ಮನೆ ಕಟ್ಟಿಸಿಯೇಬಿಟ್ಟೆ. ಮನೆಗೆ ಸುಮ್ಮನೆ ಎಂದು ಹೆಸರಿಟ್ಟೆ.

    ನಮಗೆ ಸಿಕ್ಕನೊಬ್ಬ ಕಾಂಟ್ರ್ಯಾಕ್ಟರ್‌… ಎಲ್ಲದಕ್ಕೂ ಹೂಂ ಗುಟ್ಟಿದ: ದುಡ್ಡು ತಗೊಂಡು ತೀರ್ಥಯಾತ್ರೆಗೆ ಎಸ್ಕೇಪ್‌ ಆದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts