

| ತಿಮ್ಮೇಗೌಡ ಕೋಟಮಾರನಹಳ್ಳಿ ಬೆಂಗಳೂರು
ಶೈಕ್ಷಣಿಕ ವರ್ಷದ ಕೊನೆಯ ಭಾಗಕ್ಕೆ ಬಂದು ನಿಂತಿದ್ದೇವೆ. ಇಡೀ ವರ್ಷ ತರಗತಿಯಲ್ಲಿ ಮತ್ತು ಸ್ವ ಕಲಿಕೆಯಲ್ಲಿ ವಿದ್ಯಾರ್ಥಿಗಳು ಕಲಿತ ವಿಚಾರಗಳನ್ನು ಪರೀಕ್ಷೆ ಎಂಬ ಚೌಕಟ್ಟಿನಲ್ಲಿ ಅನಾವರಣಗೊಳಿಸುವ ದಿನಗಳಿವು. ವಿದ್ಯಾರ್ಥಿಗಳ ಜ್ಞಾನ ಮತ್ತು ಗ್ರಹಿಕೆಯನ್ನು ಒಂದು ನಿರ್ದಿಷ್ಟ ಪರಿಧಿಯಲ್ಲಿ ಅಳೆಯಲು ಪರೀಕ್ಷೆ ಎಂಬ ವ್ಯವಸ್ಥೆ ರೂಪಿಸಲಾಗಿದೆ. ಶಿಕ್ಷಕರ ಬೋಧನೆಯ ಫಲಪ್ರದತೆ, ವಿದ್ಯಾರ್ಥಿಯ ಕಲಿಕೆಯ ಸಾಧನೆ ಎರಡಕ್ಕೂ ಪರೀಕ್ಷೆ ಎಂಬುದು ಮೌಲ್ಯಮಾಪನ ವ್ಯವಸ್ಥೆಯಾಗಿದೆ. ಹೀಗಾಗಿ, ಪರೀಕ್ಷಾ ದಿನಾಂಕ ಘೋಷಣೆಯಾದ ಕೂಡಲೇ ಪರೀಕ್ಷಾ ಯಶಸ್ಸಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅದಕ್ಕೆ ಅನುಸರಿಸಬೇಕಾದ ಕೆಲವು ಅಂಶಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಸ್ಟಡಿ ಪ್ಲ್ಯಾನ್ ರಚಿಸಿ: ಪುಸ್ತಕ ಹಿಡಿದು ಕಲಿಕೆ ಆರಂಭಿಸುವ ಮೊದಲು ಸರಿಯಾದ ಸ್ಟಡಿಪ್ಲಾ್ಯನ್ ರಚಿಸಿಕೊಳ್ಳಬೇಕು. ವಿಷಯಗಳ ಮತ್ತು ಪಾಠಗಳ ಪಟ್ಟಿ ಮಾಡಿಕೊಳ್ಳಬೇಕು. ಪ್ರತಿ ವಿಷಯ ಮತ್ತು ಪಾಠಕ್ಕೆ ಎಷ್ಟು ದಿನಗಳು ಲಭ್ಯ ಇದೆ ಎಂಬುದನ್ನು ಲೆಕ್ಕ ಹಾಕಿಕೊಂಡು ಅದಕ್ಕೆ ತಕ್ಕಂತೆ ಸ್ಟಡಿ ಪ್ಲಾ್ಯನ್ ರೂಪಿಸಿಕೊಳ್ಳಬೇಕು. ದಿನಕ್ಕೆ ಎಷ್ಟು ಗಂಟೆ ಓದಬೇಕು? ಎಷ್ಟು ಹೊತ್ತು ವಿಶ್ರಾಂತಿ ಎಂಬಿತ್ಯಾದಿ ಅಂಶಗಳನ್ನು ಸ್ವಾನುಕೂಲಕ್ಕೆ ತಕ್ಕಂತೆ ಪರಿಗಣಿಸಬೇಕು. ಈ ರೀತಿ ಮಾಡುವುದರಿಂದ ಅನಗತ್ಯವಾಗಿ ಗೊಂದಲಕ್ಕೆ ಒಳಗಾಗುವುದನ್ನು, ತಲ್ಲಣಕ್ಕೆ ಒಳಗಾಗುವುದನ್ನು ತಪ್ಪಿಸಬಹುದು.
ನಿಯತವಾಗಿ ಅಲ್ಪ ವಿರಾಮ ಇರಲಿ: ಮನುಷ್ಯ ಮಿದುಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದರೆ ಅದಕ್ಕೆ ನಿಯತವಾದ ಅಲ್ಪ ವಿರಾಮ ಬೇಕೇ ಬೇಕು. ಸಂಶೋಧಕರು ನಡೆಸಿದ ಹಲವು ಅಧ್ಯಯನಗಳಲ್ಲಿ ಇದು ದೃಢಪಟ್ಟಿದೆ. ಅಲ್ಪ ವಿರಾಮಗಳನ್ನು ತೆಗೆದುಕೊಳ್ಳುವುದರಿಂದ ಹೆಚ್ಚು ಗಂಟೆ ಕಾಲ ದೀರ್ಘ ವಿರಾಮ ಇಲ್ಲದೇ ಕಲಿಕೆ ಮುಂದುವರಿಸುವುದು ಸಾಧ್ಯವಾಗುತ್ತದೆ. ನಿದ್ದೆ ತೂಗಿಕೊಂಡು ಕಲಿಕೆ ಮುಂದುವರಿಸಿದರೆ ಅದನ್ನು ಗ್ರಹಿಸುವಲ್ಲಿ ಮಿದುಳಿಗೆ ಸಾಧ್ಯವಾಗದೇ ಹೋಗಬಹುದು. ಅಲ್ಪ ವಿರಾಮದ ವೇಳೆ ಸಣ್ಣ ನಡಿಗೆ, ಕಣ್ಣು ಮುಚ್ಚಿ ಕುಳಿತುಕೊಳ್ಳುವುದು, ಕಂಗಳನ್ನು ದೂರ ಪ್ರಕೃತಿ ಕಡೆಗೋ ಎಣ್ಣೆ ದೀಪದ ಕಡೆಗೋ ನೆಟ್ಟು ಮನಸ್ಸಿಗೂ, ಮಿದುಳಿಗೂ ವಿರಾಮ ಕೊಡುವುದು ಅವಶ್ಯ.
ಆರೋಗ್ಯಕರ ಆಹಾರ ಕ್ರಮ: ಉತ್ತಮ ಆರೋಗ್ಯಕ್ಕಾಗಿ ಸರಿಯಾದ ಆಹಾರ ಶೈಲಿಯನ್ನು ಹೊಂದುವುದು ಅವಶ್ಯ. ಅನಾರೋಗ್ಯಕರ ಜಂಕ್ ಫುಡ್ ಬಿಟ್ಟು, ಸಾತ್ತಿ್ವಕ ಮತ್ತು ಪೌಷ್ಟಿಕ ಆಹಾರ ಸೇವಿಸಬೇಕು. ಅಗತ್ಯಕ್ಕೆ ತಕ್ಕಷ್ಟು ನೀರು ಕುಡಿಯಬೇಕು.
ಸಮರ್ಪಕವಾಗಿ ನಿದ್ದೆ ಮಾಡಿ: ಶರೀರ ಮತ್ತು ಮನಸ್ಸು ಆರೋಗ್ಯದಿಂದ ಇರಬೇಕು ಎಂದಾದರೆ ಅವುಗಳಿಗೆ ಸಮರ್ಪಕವಾಗಿ ವಿಶ್ರಾಂತಿ ಕೊಡಬೇಕು. ಕನಿಷ್ಠ 8 ಗಂಟೆಗಳ ನಿದ್ದೆ ಬೇಕು ಎಂದು ಅಧ್ಯಯನ ವರದಿಗಳು ಹೇಳಿವೆ. ಇದನ್ನು ಪಾಲಿಸಬೇಕಾದ್ದು ಕಡ್ಡಾಯ.
ಗುಂಪು ಅಧ್ಯಯನ ಯಾವಾಗ: ಸಾಂರ್ದಭಿಕವಾಗಿ ಗುಂಪು ಅಧ್ಯಯನ ಅಥವಾ ಗ್ರೂಪ್ ಸ್ಟಡಿ ಮಾಡಬಹುದು. ಸಹಪಾಠಿಗಳೊಂದಿಗೆ ನಿತ್ಯ ಗ್ರೂಪ್ ಸ್ಟಡಿ ಮಾಡುವುದು ಪರೀಕ್ಷೆ ಸಮೀಪದಲ್ಲಿದ್ದಾಗ ಅನೇಕರಿಗೆ ಕಷ್ಟವಾದೀತು. ಆದರೆ, ಸಾಂರ್ದಭಿಕವಾಗಿ ಗುಂಪು ಅಧ್ಯಯನದಲ್ಲಿ ತೊಡಗುವುದರಿಂದ ಪರೀಕ್ಷೆಗೆ ಅನುಕೂಲವಾಗಲಿದೆ.
ಟಿಪ್ಪಣಿ ಮಾಡಿಕೊಳ್ಳಿ: ವಿಷಯಗಳನ್ನು ಪಾಠಗಳನ್ನು ಪೂರ್ಣವಾಗಿ ಓದುವುದು ಅವಶ್ಯ. ಹೀಗೆ ಮಾಡುವಾಗ ಪಠ್ಯವನ್ನು ಮನನ ಮಾಡಿಕೊಂಡು ಟಿಪ್ಪಣಿ ಮಾಡಬೇಕು. ಇದು ಸ್ಮರಣೆಗೆ ಅನುಕೂಲ ಮಾಡಿಕೊಡುತ್ತದೆ.
ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳು: ಪರೀಕ್ಷೆ ಸಮೀಪದಲ್ಲಿರುವಾಗ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಬೇಕು. ಅದರಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಬಹುತೇಕ ಸಂದರ್ಭಗಳಲ್ಲಿ ಈ ರೀತಿ ಮಾಡುವುದರಿಂದ ಉತ್ತೀರ್ಣರಾಗುವುದಕ್ಕೆ ಅಗತ್ಯ ಅಂಕಗಳಿಕೆಗೆ ನೆರವಾಗುತ್ತದೆ. ಪರೀಕ್ಷೆ ಬರೆಯುವುದಕ್ಕೆ ಅಗತ್ಯ ತಂತ್ರಗಳನ್ನು ರೂಪಿಸಲೂ ಇದು ಸಹಕಾರಿ.
ಮರುಮನನ ಮಾಡಬೇಕು: ಟಿಪ್ಪಣಿ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳಿಗೆ ಬರೆದ ಉತ್ತರಗಳನ್ನು ಮರುಮನನ ಮಾಡಿಕೊಳ್ಳಬೇಕು. ಇದನ್ನು ಪರೀಕ್ಷೆಗೆ ಹಿಂದಿನ ದಿನ ಅಥವಾ ವಾರಕ್ಕೆ ಮುನ್ನ ಮಾಡಿಕೊಳ್ಳಬಹುದು.
ಪರೀಕ್ಷಾ ದಿನಕ್ಕೆ ಪ್ಲ್ಯಾನ್ ಇರಲಿ: ಪರೀಕ್ಷೆಯ ದಿನ ಯಾವ ರೀತಿ ಇರಬೇಕು ಎಂಬುದಕ್ಕೆ ಒಂದು ದಿನಚರಿ ಪ್ಲಾ್ಯನ್ ಮಾಡಿಕೊಳ್ಳಬೇಕು. ಹಿಂದಿನ ರಾತ್ರಿ ಸರಿಯಾಗಿ ನಿದ್ದೆ ಮಾಡಬೇಕು. ಉತ್ತಮ ಆಹಾರ ಸೇವಿಸಬೇಕು. ಜಂಕ್, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನಬಾರದು. ಕನಿಷ್ಠ 15 ನಿಮಿಷ ಮುಂಚಿತವಾಗಿ ಪರೀಕ್ಷಾ ಕೊಠಡಿ ಸಮೀಪ ತಲುಪಬೇಕು. ಪ್ರಶ್ನೆ ಪತ್ರಿಕೆ ಸಿಕ್ಕ ಕೂಡಲೇ ಅದನ್ನು ಒಮ್ಮೆ ಅವಲೋಕಿಸಿ, ಉತ್ತರ ಬರೆಯಲು ಪ್ಲಾ್ಯನ್ ರೂಪಿಸಿಕೊಂಡು ಅನುಷ್ಠಾನಗೊಳಿಸಬೇಕು.
ಪಾಲಕರ ಜವಾಬ್ದಾರಿ ಹೆಚ್ಚಿನದ್ದು: ಪ್ರತಿಯೊಬ್ಬ ಪಾಲಕರ ಮಹಾನ್ ಆಸೆ ತಮ್ಮ ಮಕ್ಕಳು ಉನ್ನತ ಸ್ಥಾನಮಾನಕ್ಕೇರಬೇಕು ಎಂಬುದು ಸಹಜ. ಆದರೆ ಅಂಕ ಗಳಿಕೆಯ ಅತಿಯಾದ ಒತ್ತಡವನ್ನು ಮಕ್ಕಳ ಮೇಲೆ ಹೇರಬಾರದು.
ಶಿಕ್ಷಕರ ಹೊಣೆಗಾರಿಕೆ: ಕರೊನಾ ಸಮಯದಲ್ಲಿ ಆನ್ಲೈನ್ ಶಿಕ್ಷಣದಿಂದ ಕಲಿಕೆಯು ಕುಂಠಿತವಾಗಿದ್ದು, ಪರೀಕ್ಷಾ ಪೂರಕ ಪೂರ್ವ ತಯಾರಿ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಪ್ರಧಾನವಾಗಿ ಬೇಕಾಗುತ್ತದೆ. ಕಠಿಣ ವಿಷಯಗಳಿಗೆ ಸೂಕ್ತವಾದ ಉತ್ತರ ಕಂಡುಹಿಡಿದು ಪರೀಕ್ಷೆಯ ಗೊಂದಲದ ಬಗ್ಗೆ, ಮಾದರಿ ಪ್ರಶ್ನೆ ಪತ್ರಿಕೆ, ಪರೀಕ್ಷೆಯ ಅಂಕಗಳಿಕೆ, ವಿದ್ಯಾರ್ಥಿಗಳಿಗೆ ಮತ್ತು ಕಡಿಮೆ ಅಂಕದ ವಿದ್ಯಾರ್ಥಿಗಳಿಗೆ ತುಲನೆ ಮಾಡಿ ಗೊಂದಲ ಬಗೆಹರಿಸಬೇಕಾಗುತ್ತದೆ. ವಿದ್ಯಾರ್ಥಿಗಳ ಸಂದೇಹಗಳನ್ನು ನಿವಾರಿಸಲು ಸಹಾಯವಾಣಿ ಅಥವಾ ನೇರ ಸಂಪರ್ಕದ ಮೂಲಕ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಕಲಿಕಾ ಸ್ಥಳವನ್ನು ಸರಿಯಾಗಿ ಇಟ್ಟುಕೊಳ್ಳಿ: ಕಲಿಕೆಯ ಮೇಲೆ ಗಮನಕೇಂದ್ರೀಕರಿಸಬೇಕಾದರೆ ಕಲಿಕಾ ಸ್ಥಳವನ್ನು ಸರಿಯಾಗಿ ಜೋಡಿಸಿ ಇಟ್ಟುಕೊಳ್ಳಬೇಕು. ಯಾವ ಸ್ಥಳದಲ್ಲಿ ನಮಗೆ ಅನುಕೂಲಕರ ಮತ್ತು ಪ್ರಶಾಂತ ಭಾವ ಮೂಡುವುದೋ ಅಂತಹ ಸ್ಥಳವನ್ನು ಗುರುತಿಸಿ ಕಲಿಕಾ ಸ್ಥಳವನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಮೊಬೈಲ್, ಟಿವಿ ಮತ್ತು ಗಮನ ಬೇರೆಡೆ ಸೆಳೆಯುವ ಯಾವುದೇ ವಿಚಾರಗಳು ಇರಬಾರದು. ಉತ್ತಮ ಬೆಳಕು, ತಾಜಾ ಗಾಳಿ ಮತ್ತು ಪ್ರಶಾಂತ ವಾತಾವರಣವನ್ನು ಖಾತರಿಪಡಿಸಿಕೊಳ್ಳಬೇಕು. ಕಲಿಕಾ ನಡವಳಿಕೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದು, ಅದಕ್ಕೆ ತಕ್ಕಂತೆ ಅನುಕೂಲವನ್ನು ಮಾಡಿಕೊಳ್ಳಬೇಕು. ತಮ್ಮದೇ ಆದ ವಿಧಾನಗಳನ್ನು ಅನುಸರಿಸಬೇಕು.
ಪರೀಕ್ಷಾ ದಿನಕ್ಕೆ ಪ್ಲ್ಯಾನ್ ಇರಲಿ: ಪರೀಕ್ಷೆಯ ದಿನ ಯಾವ ರೀತಿ ಇರಬೇಕು ಎಂಬುದಕ್ಕೆ ಒಂದು ದಿನಚರಿ ಪ್ಲಾ್ಯನ್ ಮಾಡಿಕೊಳ್ಳಬೇಕು. ಹಿಂದಿನ ರಾತ್ರಿ ಸರಿಯಾಗಿ ನಿದ್ದೆ ಮಾಡಬೇಕು. ಉತ್ತಮ ಆಹಾರ ಸೇವಿಸಬೇಕು. ಜಂಕ್, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನಬಾರದು. ಕನಿಷ್ಠ 15 ನಿಮಿಷ ಮುಂಚಿತವಾಗಿ ಪರೀಕ್ಷಾ ಕೊಠಡಿ ಸಮೀಪ ತಲುಪಬೇಕು. ಪ್ರಶ್ನೆ ಪತ್ರಿಕೆ ಸಿಕ್ಕ ಕೂಡಲೇ ಅದನ್ನು ಒಮ್ಮೆ ಅವ ಲೋಕಿಸಿ, ಉತ್ತರ ಬರೆಯಲು ಪ್ಲಾ್ಯನ್ ರೂಪಿಸಿಕೊಂಡು ಅನುಷ್ಠಾನಗೊಳಿಸಬೇಕು.