ಪ್ರಧಾನಿ ಮೋದಿಯ ಫೋಟೋ ಇಟ್ಟರೆ ನಿನ್ನನ್ನೇ ಮನೆಯಿಂದ ಹೊರಹಾಕುವೆ ಎಂದ ಮಾಲೀಕ!

Modi
Published on

ಮಧ್ಯಪ್ರದೇಶ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಫೋಟೋ ಮನೆಯಲ್ಲಿಟ್ಟುಕೊಂಡರೆ ನಿನ್ನನ್ನೇ ಮನೆಯಿಂದ ಹೊರಹಾಕುವೆ ಎಂದು ಮಾಲೀಕನೊಬ್ಬ ಬೆದರಿಕೆಯೊಡ್ಡಿದ್ದು, ನೊಂದ ನಿವಾಸಿ ಪೊಲೀಸರ ಮೊರೆ ಹೋಗಿದ್ದಾನೆ.

ಮಧ್ಯಪ್ರದೇಶದ ಇಂದೋರ್​ನ ಪಿರ್​ಗಲಿ ಎಂಬಲ್ಲಿನ ನಿವಾಸಿ ಯೂಸುಫ್ ಪ್ರಧಾನಿ ನರೇಂದ್ರ ಮೋದಿಯವರ ತತ್ವಾದರ್ಶಗಳನ್ನು ಮೆಚ್ಚಿ ಅವರ ಫೋಟೋವೊಂದನ್ನು ಮನೆಯಲ್ಲಿ ಇರಿಸಿಕೊಂಡಿದ್ದ. ಆದರೆ ಅದನ್ನು ನೋಡಿದ ಮನೆ ಮಾಲೀಕ ಕೆಂಡಾಮಂಡಲವಾಗಿದ್ದು, ಫೋಟೋ ತೆಗೆದು ಹಾಕದಿದ್ದರೆ ನಿನ್ನನ್ನೇ ಮನೆಯಿಂದ ಹೊರ ಹಾಕುವುದಾಗಿ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ.

ಮಂಗಳವಾರ ಅಲ್ಲಿನ ಪೊಲೀಸ್ ಕಮಿಷನರ್​ ಕಚೇರಿಯಲ್ಲಿ ನಡೆದ ಸಾರ್ವಜನಿಕ ಅಹವಾಲು ಆಲಿಸುವ ಕಾರ್ಯಕ್ರಮಕ್ಕೆ ತೆರಳಿದ ಯೂಸುಫ್ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ. ನಾನು ಪ್ರಧಾನಿ ಮೋದಿಯವರ ಮೇಲಿನ ಅಭಿಮಾನದಿಂದ ನನ್ನ ಬಾಡಿಗೆ ಮನೆಯಲ್ಲಿ ಅವರ ಫೋಟೋ ಇಟ್ಟುಕೊಂಡಿದ್ದು, ಅದಕ್ಕೆ ಮನೆ ಮಾಲೀಕ ಯಾಕೂಬ್ ಮನ್ಸೂರಿ ಮತ್ತು ಆತನ ಪುತ್ರ ಸುಲ್ತಾನ್ ಮನ್ಸೂರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ನೋವು ತೋಡಿಕೊಂಡಿದ್ದಾನೆ. ಈ ಬಗ್ಗೆ ಸ್ಪಂದಿಸಿರುವ ಹೆಚ್ಚುವರಿ ಡಿಸಿಪಿ ಮನಿಷಾ ಪಾಟಕ್ ಸೋನಿ ಅವರು ಸಂಬಂಧಿತ ಪೊಲೀಸ್ ಠಾಣೆಗೆ ಸೂಚನೆ ನೀಡಿ ತನಿಖೆ ನಡೆಸಲು ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net