

ಬರಡು ಭೂಮಿಗೆ ಎಲ್ಲ ಬೆಳೆ ಸೂಕ್ತವಾಗಲ್ಲ. ಹೀಗಾಗಿ ಸಿದ್ದಪ್ಪ ಆರಿಸಿಕೊಂಡ ಬೆಳೆ ಕರಿಬೇವು, ಚಿಕ್ಕು, ಸೀಬೆ ಮತ್ತು ಗುಡ್ಡಕ್ಕೆ ಹೇಳಿ ಮಾಡಿಸಿರೋ ಅರಣ್ಯ ಬೆಳೆಗಳನ್ನು. ಇಂದು ಅದೇ ಬೆಳೆ ವರ್ಷಕ್ಕೆ 4-5 ಲಕ್ಷ ರೂ. ಆದಾಯ ತರುತ್ತಿದೆ. ವರ್ಷಕ್ಕೆ 3 ಕಟಾವು ಬರುವ ಕರಿಬೇವು 1 ಕಟಾವಿನಲ್ಲಿ 20 ಕ್ವಿಂಟಾಲ್ ಇಳುವರಿ ನೀಡುತ್ತೆ. ಅಂದ್ರೆ, ವರ್ಷಕ್ಕೆ 60 ಕ್ವಿಂಟಾಲ್ ಇಳುವರಿ ಸಿಕ್ಕಂತಾಯಿತು. ಮಳೆಗಾಲದಲ್ಲಿ ಕೆಜಿಗೆ 20 ರೂ. ಸಿಗುತ್ತೆ ಅನ್ನೋದು ಬಿಟ್ರೆ ಮಿಕ್ಕೆರಡು ಕಟಾವಿನಲ್ಲಿ ಕೆಜಿಗೆ 50 ರೂ. ಸಿಕ್ಕೇ ಸಿಗುತ್ತೆ. 1 ಕೆಜಿಗೆ 50 ರೂ. ಸರಾಸರಿ ಲೆಕ್ಕಾಚಾರದಲ್ಲಿ ಕ್ವಿಂಟಾಲ್ಗೆ 5 ಸಾವಿರ ರೂ. ಆಗುತ್ತೆ. 60 ಕ್ವಿಂಟಾಲ್ಗೆ 3 ಲಕ್ಷ ರೂ. ಸಂಪಾದನೆಯಾಗುತ್ತದೆ. ಅದರಲ್ಲಿ ಮಳೆಗಾಲದ ದರವನ್ನ 1 ಕಟಾವಿಗೆ ಕಡಿಮೆ ಮಾಡಿದ್ರೆ 2,40,000 ರೂ. ಆದಾಯ ಸಿಗುತ್ತೆ. ಇದರಲ್ಲಿ 1 ಲಕ್ಷ ರೂ. ಖರ್ಚು ಕಳೆದರೂ 1.40 ಲಕ್ಷ ರೂ. ಲಾಭ ಒಂದೇ ಬೆಳೆಯಲ್ಲಿ ಸಿಕ್ಕೇ ಸಿಗುತ್ತೆ. ಇದೇ ರೀತಿ ಚಿಕ್ಕು, ಲಿಂಬೆ, ಪೇರಳೆ 3 ಬೆಳೆ ಜತೆಯಲ್ಲೇ ಇದ್ದು, 3 ಕೂಡ ಇನ್ನೊಂದು 3.5 ಲಕ್ಷ ರೂ. ಆದಾಯ ತಂದುಕೊಡುತ್ತೆ. ಒಟ್ಟು ಬರಡು ಭೂಮಿಯಲ್ಲಿ 5 ಲಕ್ಷ ರೂ. ಆದಾಯ ಇದೀಗ ಇವರ ಕೈಸೇರುತ್ತಿದೆ. ಅದು ಕೂಡ ಯಾವ ಕಾರ್ವಿುಕರ ವೆಚ್ಚ ಇರದೆ ಗಂಡ-ಹೆಂಡತಿಯರಿಬ್ಬರ ಪ್ರಯತ್ನದಲ್ಲೇ. ಇಂದು ಸಿಗುತ್ತಿರುವ 5 ಲಕ್ಷ ರೂ. ಆದಾಯ ಮುಂದಿನ ದಿನಗಳಲ್ಲಿ 10 ಲಕ್ಷ ರೂ.ವರೆಗೆ ಹೆಚ್ಚಾಗುತ್ತದೆ. ಅದೇ 10 ಲಕ್ಷ ರೂ. ಮುಂದಿನ 10 ವರ್ಷದಲ್ಲಿ 1 ಕೋಟಿ ರೂ. ಆಗಲಿದೆ. ಕೆಲಸಕ್ಕೆ ಬಾರದಂತಿದ್ದ ಭೂಮಿ ಕೋಟಿ ರೂ. ಸಂಪಾದಿಸುತ್ತೆ ಅಂದಮೇಲೆ ಕಲ್ಲು ಮಣ್ಣಿನ ಭೂಮಿಲಿ ಕೃಷಿ ಅಸಾಧ್ಯ ಅನ್ನೋದೇನಿದೆ ಅಲ್ವಾ? ಇನ್ನು ಇವರ ಶ್ರೀಗಂಧ, ಮಹಾಗನಿ ಮುಂದಿನ 12- 15 ವರ್ಷದಲ್ಲಿ ಕಟಾವಿಗೆ ಬಂದು ಏಕಕಾಲದಲ್ಲೇ ಕೋಟಿ ರೂ. ಆದಾಯ ಹೊತ್ತು ತರಲಿದೆ. ಸಣ್ಣ ಲೆಕ್ಕಾಚಾರ ಮಾಡಿ 100 ಶ್ರೀಗಂಧ 100 ಮಹಾಗನಿ ಇದೆ ಅಂದಿಟ್ಟುಕೊಳ್ಳೋಣ. 1 ಶ್ರೀಗಂಧಕ್ಕೆ ಕನಿಷ್ಠ 1 ಲಕ್ಷ ರೂ. ಅಂದರೂ 100ಕ್ಕೆ 1 ಕೋಟಿ ರೂ. ಆಯ್ತು. ಜತೆಗೆ 100 ಮಹಾಗನಿಯಲ್ಲಿ 1ಮರಕ್ಕೆ ಸರಾಸರಿ 10 ಸಾವಿರ ರೂ. ಹಿಡಿದರೂ 100 ಮರಕ್ಕೆ 10 ಲಕ್ಷ ರೂ. ಸಿಗಲಿದೆ. ಇವರ ಬಳಿ ಇದರ ದುಪ್ಪಟ್ಟು ಆದಾಯ ತರುವ ಮರವಿದೆ. ಆದರೂ ಸಣ್ಣ ಲೆಕ್ಕಾಚಾರದಲ್ಲಿ 1.10 ಕೋಟಿ ರೂ. ಆದಾಯ ಬಂತಲ್ವ..? ಅದೇ ಪಾಳು ಬಿಟ್ಟಿದ್ರೆ..?
ಕಷ್ಟದ ಪರಿಸ್ಥಿತಿಗೆ ವರವಾಗುವ ಸರ್ಕಾರದ ಸೌಲಭ್ಯ: ರೈತಾಪಿ ವರ್ಗಕ್ಕೆ ಸರ್ಕಾರ ಸಾಕಷ್ಟು ಯೋಜನೆಗಳ ಕೊಡುಗೆ ನೀಡಿದೆ. ರೈತರು ಅದರ ಸದುಪಯೋಗ ಮಾಡಿಕೊಳ್ಳಬೇಕಷ್ಟೆ. ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಕೊರೆಸಿಕೊಳ್ಳಬಹುದು. ನರೇಗಾ ಯೋಜನೆಯಡಿ ಉದ್ಯೋಗ ಖಾತ್ರಿ ಮೂಲಕ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಬಹುದು. ಅರಣ್ಯ ಸಸಿಗಳನ್ನ ಉಚಿತವಾಗಿ ನೀಡುತ್ತಿದೆ. ಗ್ರೀನ್ ಹೌಸ್ ಮತ್ತು ಡ್ರಿಪ್ ಇರಿಗೇಷನ್ಗೆ ಸಬ್ಸಿಡಿ ನೀಡುತ್ತಿದೆ. ಇವುಗಳನ್ನೆಲ್ಲ ಸ್ಥಳೀಯ ಅಧಿಕಾರಿಗಳೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ಬಳಸಿಕೊಂಡರೆ ರೈತ ಅತ್ತ್ಯುತ್ತಮ ಕೃಷಿಕನಾಗಿ ಬದಲಾಗಬಹುದು. ಸಿದ್ದಪ್ಪರ ಯಶೋಗಾಥೆಗೆ ಇದೇ ಮೇರು ಕಾರಣ.
ಜಗತ್ತಿನ ಹಲವು ರಾಷ್ಟ್ರಗಳಲ್ಲಿದೆ ಬಂಜರು ಭೂಮಿ: ಬಾಂಗ್ಲಾದೇಶ ಜಗತ್ತಿನ ಹೆಚ್ಚು ಬಂಜರು ಭೂಮಿ ಹೊಂದಿರುವ ಪ್ರದೇಶ ಅಂತ ಕರೆಯಿಸಿಕೊಂಡರೆ, ಯೂಕ್ರೇನ್ ಸೇರಿ ಭಾರತ ಕೂಡ ಟಾಪ್ 10 ಲಿಸ್ಟ್ನಲ್ಲಿದೆ. ನಾರ್ವೆ, ಗ್ರೀನ್ಲ್ಯಾಂಡ್, ಸಿಂಗಾಪುರ ಕಡಿಮೆ ಕೃಷಿ ರಾಷ್ಟ್ರ ಅಂತ ಕರೆಯಿಸಿಕೊಂಡಿವೆ ಅನ್ನೋದು ಬಿಟ್ಟರೆ ಮಿಕ್ಕೆಲ್ಲ ರಾಷ್ಟ್ರ ಬರಡು ಭೂಮಿ ಜತೆಗೆ ಕೃಷಿಯೋಗ್ಯ ಭೂಮಿಯನ್ನು ಹೊಂದಿವೆ.
ಫ್ರೀಡಂ ಆಪ್ನಲ್ಲಿ ಬರಡು ಭೂಮಿ ಕೃಷಿ ಕೋರ್ಸ್: ಪಾಳು ಬಿದ್ದ ಭೂಮಿಯನ್ನು ರೈತರು ಸದುಪ ಯೋಗ ಮಾಡಿಕೊಳ್ಳಬೇಕು ಅನ್ನೋ ದೃಷ್ಟಿಯಿಂದ ಇಂಡಿಯನ್ ಮನಿ ಡಾಟ್ ಕಾಂ ನ ಫ್ರೀಡಂ ಆಪ್ ಬರಡು ಭೂಮಿ ಕೃಷಿ ಕೋರ್ಸ್ ಅನಾವರಣ ಮಾಡಿದೆ. ಕೂಲಿ ಕಾಯಕ ಬಿಟ್ಟು ಕೃಷಿಕನಾಗಿ ಬರಡು ಭೂಮಿ ಯಲ್ಲೇ ಬಂಗಾರದ ಕೃಷಿಕನಾದ ಗದಗ ಜಿಲ್ಲೆಯ ರೈತ ಸಿದ್ದಪ್ಪ ಈ ಕೋರ್ಸ್ನ ಮಾರ್ಗದರ್ಶಕರು.
ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡಬಯಸುವವರಿಗೆ ಇಂಡಿಯನ್ ಮನಿ ಡಾಟ್ ಕಾಂನಲ್ಲಿ ಸುವರ್ಣ ಅವಕಾಶವಿದೆ. ಉದ್ಯೋಗ ಆಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್ ಕಾಲ್ ಕೊಡಿ- ನಂ.- 02262116777
ಆನ್ಲೈನ್ ಮೇಕಪ್ ಆರ್ಟಿಸ್ಟ್ ಕೋರ್ಸ್ಗೆ ಈಗಲೇ ಸೇರಿ!: ಕನ್ನಡ ನಟಿ ಮತ್ತು ಸೆಲೆಬ್ರೆಟಿ ಮೇಕಪ್ ಆರ್ಟಿಸ್ಟ್ ವೈಭವಿ ಜಗದೀಶ್ ಅವರು ಇಂಡಿಯನ್ ಮನಿ ಡಾಟ್ ಕಾಂನ ಫ್ರೀಡಂ ಆಪ್ ಸಹಯೋಗದಲ್ಲಿ ನಡೆಸುತ್ತಿರುವ ಆನ್ಲೈನ್ ಮೇಕಪ್ ಆರ್ಟಿಸ್ಟ್ ಕೋರ್ಸ್ಗೆ ಈಗಲೇ ಸೇರಿಕೊಳ್ಳಿ. ನೀವು ಮೇಕಪ್ ಕಲೆ ಕಲಿತು ದುಡಿಮೆಯ ದಾರಿ ಕಂಡುಕೊಳ್ಳಿ. ಹೆಚ್ಚಿನ ಮಾಹಿತಿಗೆ ಸಂರ್ಪಸಿ - 9632742525