'ನನ್ನ ಜೀವನದ ಕೊನೆಯ ಆಸೆ ಏನು ಗೊತ್ತಾ?' ಎನ್ನುತ್ತಲೇ ಮಹತ್ವದ ವಿಚಾರವೊಂದನ್ನು ಹೇಳಿದ್ರು ಮಾಜಿ ಪ್ರಧಾನಿ..

1274953
Published on

ಚಿಕ್ಕಮಗಳೂರು: ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರು ಸಾಮಾನ್ಯವಾಗಿ ಪ್ರತಿ ಚುನಾವಣೆ ಸಂದರ್ಭದಲ್ಲಿ ಒಂದು ಮಾತನ್ನು ಹೇಳುತ್ತಿರುತ್ತಾರೆ. 'ಇದು ನನ್ನ ಕೊನೆಯ ಚುನಾವಣೆ..' ಎಂಬ ಅವರ ಈ ಮಾತನ್ನು ರಾಜ್ಯದ ಜನರು ಬಹಳಷ್ಟು ಸಲ ಕೇಳಿಸಿಕೊಂಡಿದ್ದಾರೆ. ಅವರೇ ಇದೀಗ ಮತ್ತೊಂದು ಮಾತನ್ನು ಹೇಳುವ ಮೂಲಕ ತಮ್ಮ ಜೀವನದ ಕೊನೆಯ ಆಸೆಯೊಂದನ್ನು ಹೇಳಿಕೊಂಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಇಂದು ಮಾತನಾಡಿದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಅವರು ತಮ್ಮ ಜೀವನದ ಕೊನೆಯ ಆಸೆಯ ಕುರಿತು ಮಾತನಾಡಿದರು. ನಾನು ಸೂಕ್ಷ್ಮವಾಗಿ ಎಲ್ಲವನ್ನೂ ನೋಡುತ್ತಿದ್ದೇನೆ. ಒಬ್ಬ ರಾಜಕೀಯ ಮುಖಂಡನಾಗಿ ಎಲ್ಲಿ ತಪ್ಪುತ್ತಿದ್ದೇವೆ, ಪಕ್ಷ ಉಳಿಸಲು ನಾವು ಹೇಗೆ ನಡೆದುಕೊಳ್ಳಬೇಕು, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಹಾಗೂ ನನ್ನ ಮನದಲ್ಲಿ ತುಂಬಾ ಆತಂಕ ಇದೆ ಎಂಬುದಾಗಿಯೂ ಹೇಳಿದ್ದಾರೆ.

ದೇವೇಗೌಡರಿಗೆ 90 ವರ್ಷವಾಗಿದೆ ಅಂತ ಯಾರೋ ಹೇಳಿದ್ದರು. ನನಗೆ ಇನ್ನೂ 90 ಮುಟ್ಟೇ ಇಲ್ಲ. ನನ್ನ ಜೀವನದ ಕೊನೆಯ ಆಸೆ ಏನು ಗೊತ್ತಾ? ಒಂದು ಪ್ರಾದೇಶಿಕ ಪಕ್ಷವನ್ನು ಉಳಿಸಿ, ಅಧಿಕಾರಕ್ಕೆ ತರಬೇಕು. ಜೆಡಿಎಸ್​​ ಪಕ್ಷವನ್ನು ಅಧಿಕಾರಕ್ಕೆ ತಂದು ಕೊನೆಯ ಉಸಿರು ಬಿಡಬೇಕು ಎಂಬುದೇ ನನ್ನ ಹಠ ಎಂಬುದಾಗಿ ದೇವೇಗೌಡರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net