

| ಅಶ್ವಿನಿ ಎಚ್.ಆರ್ . ಬೆಂಗಳೂರು
ಹಳ್ಳಿಗಾಡಿನಲ್ಲಿ ಎಲುಬಿಲ್ಲದ ಮಾಂಸ ಎಂದೇ ಕರೆಸಿಕೊಳ್ಳುವ ನುಗ್ಗೆಕಾಯಿ ಸುಮಾರು ಎರಡು ಸಾವಿರ ವರ್ಷದಷ್ಟು ಪುರಾತನಕಾಲದಲ್ಲಿಯೇ ಬಳಕೆಯಲ್ಲಿತ್ತು. ಋಗ್ವೇದದಲ್ಲಿ ನುಗ್ಗೆಯನ್ನು ಹಿತ್ತಲಗಿಡವಾಗಿ ಬೆಳೆಸುತ್ತಿದ್ದರೆಂದು ಉಲ್ಲೇಖವಿದೆ. ನುಗ್ಗೆಯ ಎಲೆ, ಹೂ, ಕಾಯಿ, ಬೇರು, ತೊಗಟೆ, ಬೀಜ ಆಹಾರ ಮತ್ತು ಔಷಧಿಯಲ್ಲಿ ಬಳಕೆಯಲ್ಲಿತ್ತಾದ್ದರಿಂದ ಪೂರ್ವಿಕರು ನುಗ್ಗೆಯನ್ನು ಔಷಧಿಯ ಖನಿಜ ಎಂದು ಕರೆದಿದ್ದಾರೆ. ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ರಂಜಕ ಮತ್ತು ಸುಣ್ಣದ ಅಂಶಗಳನ್ನೂ ಹೊಂದಿರುವ ನುಗ್ಗೆಕಾಯಿ ಏನೆಲ್ಲಾ ಔಷಧೀಯ ಗುಣಗಳನ್ನು ಹೊಂದಿದೆ ಎಂಬುದನ್ನು ನೀವೇ ಓದಿ…