ಹೊಸ ಚಿಂತನೆಗಳು ಅನುಷ್ಠಾನವಾಗಲಿ

Janamatha1
Published on

ಮುಂದಿನ ದಿನಗಳನ್ನು ಹೇಗೆ ಸುಂದರವಾಗಿಸಬಹುದು ಎನ್ನುವುದರ ಬಗ್ಗೆ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಸದಾ ಹೊಸ ಚಿಂತನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಶಾಸಕರು ತಮ್ಮ ವ್ಯಾಪ್ತಿಯ ಪ್ರತಿಯೊಂದು ಊರಿಗೂ ತೆರಳಿದಾಗ ಜನರ ಬಳಿ ಅವರ ಮುಖ್ಯ ಸಮಸ್ಯೆಗಳೇನು, ಬೇಡಿಕೆಗಳೇನು ಎಂದು ವಿಚಾರಿಸಿ ಕೂಡಲೇ ಅವುಗಳನ್ನು ಒಂದು ನೋಟುಪುಸ್ತಕದಲ್ಲೋ, ಲ್ಯಾಪ್​ಟಾಪಲ್ಲೋ ಬರೆದಿಟ್ಟುಕೊಳ್ಳಬೇಕು.

ಪ್ರಾಥಮಿಕ ಆರೋಗ್ಯ ಕೇಂದ್ರ, ರಸ್ತೆ, ನೀರು, ಸಾರಿಗೆ ವ್ಯವಸ್ಥೆಗಳು, ಕೆರೆಯ ಅಭಿವೃದ್ಧಿ, ಸಭಾಭವನ, ಶಾಲೆ, ಕಾಲೇಜು, ಉದ್ಯಾನ, ಬೆಳೆಗಳನ್ನು ಸೂಕ್ತ ಬೆಲೆಯಲ್ಲಿ ಮಾರಾಟ ಮಾಡುವ ವ್ಯವಸ್ಥೆ, ಹೀಗೆ ಎಲ್ಲ ಊರುಗಳಲ್ಲೂ ಬೇರೆ ಬೇರೆ ಅಗತ್ಯಗಳಿರಬಹುದು. ಆ ಬಳಿಕ ಆದ್ಯತೆ ಮೇರೆಗೆ ಒಂದೊಂದೇ ಕೆಲಸಗಳನ್ನು ಮಾಡುತ್ತ ಕ್ಷೇತ್ರದ ಜನರೊಡನೆ ನಿರಂತರ ಸಂಪರ್ಕದಲ್ಲಿ ಇರಬೇಕು. ಇಂತಹ ಶಾಸಕ ಮುಂದಿನ ಬಾರಿಯೂ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಇಚ್ಛಾಶಕ್ತಿ ಬೇಕು ಅಷ್ಟೆ. ಅಷ್ಟೇ ಅಲ್ಲ, ಹಲವು ಅಭಿವೃದ್ಧಿ ಕಾರ್ಯಗಳೆಂದು ಲಕ್ಷಾಂತರ ಮರಗಳ ಮಾರಣಹೋಮ ನಡೆಯುತ್ತಲೇ ಇರುತ್ತದೆ. ನಮ್ಮ ರಾಜ್ಯದಲ್ಲಿ ಒಂದು ಅಂದಾಜಿನ ಪ್ರಕಾರ ಒಟ್ಟಾರೆ 27,500 ಹಳ್ಳಿಗಳಿವೆ. ಪ್ರತಿಯೊಂದು ಹಳ್ಳಿಯಲ್ಲೂ ಕನಿಷ್ಠ ಹತ್ತು ಗಿಡಗಳನ್ನು ನೆಟ್ಟರೆ ಇಡೀ ರಾಜ್ಯದಲ್ಲಿ ಎರಡು ಲಕ್ಷದ ಎಪ್ಪತೆ ôದು ಸಾವಿರದ ಹಸಿರು ಹೊದಿಕೆ ತಯಾರು! ಪರಿಸರ ಸಂರಕ್ಷಣೆಯನ್ನು ಹೀಗೂ ಮಾಡಬಹುದು.

| ಬಿ.ಎನ್.ಭರತ್ ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net