ವಾಸ್ತವ ಅರಿಯದೆ ಸುಳ್ಳುಗಳ ವಿಜೃಂಭಣೆ ಸರಿಯಲ್ಲ

Mind
Published on
ಹೊಂಬೆಳಕು
ಇತ್ತೀಚೆಗೆ ಒಂದು ಸುದ್ದಿವಾಹಿನಿಯಲ್ಲಿ ಆಶ್ಚರ್ಯಕರ ವಿಷಯ ಬಿತ್ತರಿಸಲ್ಪಟ್ಟಿತು. ಅದೇ ಆರ್ಯರು ಯೂಕ್ರೇನ್ ದೇಶದಿಂದ ಭಾರತಕ್ಕೆ ಬಂದಿದ್ದಾರೆ; ನಮ್ಮ ಮತ್ತು ಯೂಕ್ರೇನಿಯನ್ನರ ವಂಶವಾಹಿನಿಗಳಲ್ಲಿ ಸಾಕಷ್ಟು ಸಾಮ್ಯ ಇದೆ ಎಂದು. ಹಾಗೆಂದು ಇತ್ತೀಚೆಗೆ ಕೆಲವು ಸಂಶೋಧಕರು ಖಾತ್ರಿಗೊಳಿಸುತ್ತಿದ್ದಾರಂತೆ. ಇದಂತೂ ಕಳೆದ ಕೆಲವು ಶತಮಾನಗಳಿಂದ ಇಡೀ ವಿಶ್ವದಲ್ಲೇ ಬಹು ರ್ಚಚಿತ ವಿಷಯ. ಸ್ವಲ್ಪ ಹೆಚ್ಚು ಕಡಿಮೆ ಪ್ರತಿ ಇತಿಹಾಸದ ಪಠ್ಯಪುಸ್ತಕವೂ, ‘ಆರ್ಯರು ಯುರೋಪಿನಿಂದ ಬಂದವರು; ಭಾರತದ ಮೂಲನಿವಾಸಿಗಳಾದ ದ್ರಾವಿಡರೊಡನೆ ಸಿಂಧೂ ತೀರದಲ್ಲಿ ಸೆಣೆಸಿ, ಸೋಲಿಸಿ ಅವರನ್ನು ದಕ್ಷಿಣ ಭಾರತಕ್ಕೆ ಅಟ್ಟಿದರು ; ಸಿಂಧೂ ನಾಗರೀಕತೆಯ ಉತ್ಖನನಗಳಲ್ಲಿ ಲಿಂಗ ಮತ್ತು ನಾಗರ ಸಿಕ್ಕಿರುವುದರಿಂದ ಅವು ದ್ರಾವಿಡ ಸಂಸ್ಕೃತಿಯನ್ನು ಸೂಚಿಸುತ್ತದೆ. ಇಡೀ ಉತ್ತರ ಭಾರತೀಯ ಜನಾಂಗ ಮತ್ತು ದಕ್ಷಿಣ ಭಾರತದ ಬ್ರಾಹ್ಮಣರು ಹೆಚ್ಚೆಂದರೆ ಇಲ್ಲಿಯ ಮೇಲ್ವರ್ಗಗಳು ಮಾತ್ರ ಆರ್ಯರು ಕೆಳವರ್ಗದವರೆಲ್ಲ ಮೂಲ ನಿವಾಸಿಗಳು’ ಇತ್ಯಾದಿ ಎಗ್ಗಿಲ್ಲದ ಸುಳ್ಳಿನ ಸುರುಳಿಗಳನ್ನು ಬಿಚ್ಚುತ್ತಿವೆ. ಇದು ಸತ್ಯಕ್ಕೆ ಮಾಡಿರುವ ಮಹಾ ಅಪರಾಧ. ಮಾತೃಭಾಷೆಯ ಆಚೆಗೆ ಒಂದು ಪುಸ್ತಕವನ್ನೂ ಓದದ, ಪೂರ್ವಗ್ರಹದಿಂದ ಬಿಡುಗಡೆಯೇ ಇಲ್ಲದ ಕೆಲ ಠಟಞಛಿಶೋಧಕರು, ಜೊತೆಜೊತೆಗೆ ಅಬ್ಬರಿಸಿ ಬೊಬ್ಬಿರಿದಷ್ಟೂ ಇನ್ನಷ್ಟು ದೊಡ್ಡ ನಾಯಕರು ತಾವಾಗಬಹುದು ಎಂಬ ಭ್ರಮೆಯಲ್ಲಿರುವ ರಾಜಕಾರಣಿಗಳು ಆಗಾಗ್ಗೆ ಹೀಗೆಲ್ಲ ತಮ್ಮ ಅಮೂಲ್ಯ ಜ್ಞಾನಭಂಡಾರವನ್ನು ತೆರೆಯುತ್ತಿರುತ್ತಾರೆ.

19ನೇ ಶತಮಾನದ ಮಧ್ಯಭಾಗದಲ್ಲಿ ಯೂರೋಪಿಯನ್ ಪಂಡಿತರಿಂದ ಪ್ರಾರಂಭವಾಗಿ ಒಂದು ದಶಕದ ಹಿಂದಿನವರೆಗೂ ಮುಂದುವರಿದ ಈ ಅಜೀರ್ಣ ರೋಗ ಇಂದಿಗೂ ಮುಂದುವರಿದಿದೆ. ‘ಪಾಶ್ಚಾತ್ಯರಿಂದ ಬಂದದ್ದನ್ನು ಮೊದಲು ಪರೀಕ್ಷೆ ಮಾಡಿ ನಂತರ ಒಪ್ಪಿಕೊಳ್ಳಿ. ಭಾರತೀಯ ಮೂಲವಾದದ್ದನ್ನು ಮೊದಲು ಒಪ್ಪಿ ನಂತರ ಪರೀಕ್ಷಿಸಿ’ ಎಂದು ಇಂಥ ವಿಷಯಗಳಿಗೆಲ್ಲ ಅಧಿಕೃತವಾಣಿಯಾದ ಸ್ವಾಮಿ ವಿವೇಕಾನಂದರು 1892ರಷ್ಟು ಹಿಂದೆಯೇ ಹೇಳಿದ್ದಾರೆ. ಸ್ವಯಂ ವಿವೇಕಾನಂದರೇ ಆರ್ಯರ ಆಗಮನವನ್ನು ಕುರಿತು ಏನು ಹೇಳಿದ್ದಾರೆ ನೋಡೋಣ.

‘ಆರ್ಯರೆನ್ನುವರು ಹೊರಗಡೆಯಿಂದ ಭರತಖಂಡದ ಮೇಲೆ ದಾಳಿಯಿಟ್ಟು ಇಲ್ಲಿನ ಆದಿವಾಸಿ ಜನರ ಭೂಮಿಯನ್ನು ಕಬಳಿಸಿ, ಅವರನ್ನು ನಿರ್ನಾಮಗೊಳಿಸಿ ಇಲ್ಲಿ ನೆಲೆಸಿದರು ಎಂದು ಯೂರೋಪಿಯನ್ ಪಂಡಿತರು ಹೇಳುವುದು ಶುದ್ಧ ಅರ್ಥಹೀನ. ಆಶ್ಚರ್ಯವೆಂದರೆ ನಮ್ಮ ಪಂಡಿತರೂ ಅದಕ್ಕೆ ತಥಾಸ್ತು ಹೇಳುತ್ತಾರೆ. ಈ ಭಯಂಕರ ಸುಳ್ಳುಗಳನ್ನೆಲ್ಲ ನಮ್ಮ ಮಕ್ಕಳಿಗೆ ಬೋಧಿಸಲಾಗುತ್ತಿದೆ. ಇದು ಮಹಾ ಅನ್ಯಾಯ.

ನಾನು ಅಲ್ಪಜ್ಞ. ನನಗೇನೂ ವಿದ್ವತ್ತು ಅಷ್ಟು ಇಲ್ಲ. ಆದರೆ ನನಗೆ ಗೊತ್ತಿರುವ ಆಧಾರದ ಮೇಲೆ ಪ್ಯಾರಿಸ್ ಕಾಂಗ್ರೆಸಿನಲ್ಲಿ (1901ರಲ್ಲಿ ನಡೆದ ್ಚ್ಞ್ಟಠಠ ಟ್ಛ ಡಿಟ್ಟ್ಝ ್ಟ್ಝಜಜಿಟ್ಞಠ) ಈ ಸಿದ್ಧಾಂತವನ್ನು ತೀವ್ರವಾಗಿ ವಿರೋಧಿಸಿದ್ದೇನೆ. ಭಾರತೀಯ ಮತ್ತು ಐರೋಪ್ಯ ವಿದ್ವಾಂಸರೊಡನೆ ಈ ವಿಷಯವನ್ನು ನಾನು ರ್ಚಚಿಸುತ್ತಿರುವೆನು. ಸರಿಯಾದ ಸಮಯದಲ್ಲಿ ಇನ್ನೂ ಕೆಲವು ಆಕ್ಷೇಪಣೆಗಳನ್ನು ಎತ್ತುತ್ತೇನೆ. ನಾನು ಇಷ್ಟನ್ನು ನಮ್ಮ ಪಂಡಿತರಿಗೆ ಹೇಳುತ್ತೇನೆ: ನೀವು ವಿದ್ವಾಂಸರು, ನಿಮ್ಮ ಹಳೆಯ ಶಾಸ್ತ್ರ, ಪುರಾಣಗಳನ್ನು ಹುಡುಕಿ ನೀವೇ ನಿರ್ಣಯಕ್ಕೆ ಬನ್ನಿ.’

ಐರೋಪ್ಯರು ಎಲ್ಲೇ ಹೋಗಲಿ, ಒಂದು ಅವಕಾಶ ಸಿಕ್ಕಿದೊಡನೆ ಅಲ್ಲಿಯ ಆದಿವಾಸಿಗಳನ್ನು ನಾಶಮಾಡಿ ಆ ಸ್ಥಳದಲ್ಲಿ ಸುಖವಾಗಿ ವಾಸಿಸುವರು. ಆದಕಾರಣವೇ ಪಾಶ್ಚಾತ್ಯರು ಆರ್ಯರು ಕೂಡ ಹೀಗೆಯೇ ಮಾಡಿರಬೇಕೆಂದು ಊಹಿಸುವರು! ಪಾಶ್ಚಾತ್ಯರು ತಮ್ಮ ಮನೆಯಲ್ಲಿ ತಮ್ಮದೇ ಆದಾಯವನ್ನು ನೆಚ್ಚಿಕೊಂಡು ತಾವು ತೆಪ್ಪಗೆ ಇದ್ದರೆ ಇತರರು ಅವರನ್ನು ನಿಕೃಷ್ಟ ದೃಷ್ಟಿಯಿಂದ ನೋಡುವರು. ಅದಕ್ಕೆ ಯಾವ ದೇಶವನ್ನು ಲೂಟಿ ಮಾಡೋಣ, ದರೋಡೆ ಮಾಡೋಣ ಎಂದು ಅವರು ಮೆಲುಕು ಹಾಕುತ್ತಿರಬೇಕು. ಆದಕಾರಣವೇ ಆರ್ಯರು ಹಾಗೆಯೇ ಮಾಡಿರಬೇಕೆಂದು ಅವರು ನಿರ್ಧರಿಸುವರು. ಅದಕ್ಕೆ ಆಧಾರವಿಲ್ಲ. ಬರೀ ಊಹೆ.

ಯಾವ ವೇದದಲ್ಲಿ, ಯಾವ ಸೂಕ್ತದಲ್ಲಿ ಆರ್ಯರು ಪರದೇಶದಿಂದ ಬಂದರೆಂಬುದನ್ನು ನೋಡುವಿರಿ? ಆದಿ ಜನರನ್ನು ಕೊಂದರು ಎಂಬುದಕ್ಕೆ ಆಧಾರವೆಲ್ಲಿ? ಇಂತಹ ಪ್ರಲಾಪದಿಂದ ಪ್ರಯೋಜನವೇನು? ರಾಮಾಯಣವನ್ನು ಓದಿ ಸಾರ್ಥಕವಾಯಿತು. ಅದರ ಆಧಾರದ ಮೇಲೆ ಇಂತಹ ಸುಳ್ಳನ್ನು ಏತಕ್ಕೆ ತಯಾರುಮಾಡುವಿರಿ? (ಪಾಶ್ಚಾತ್ಯರ ಈ ಸುಳ್ಳಿನ ಆಧಾರದ ಮೇಲೆಯೇ ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಎಂಬ ರಾಜಕೀಯ ಪಕ್ಷ ಹುಟ್ಟಿಕೊಂಡಿತು)

ರಾಮಾಯಣವೆಂದರೇನು? ಆರ್ಯರು ದಂಡಕಾರಣ್ಯವನ್ನು ಜಯಿಸಿದ ಕಥೆಯೆ? ರಾಮಚಂದ್ರ ಸುಸಭ್ಯ ಜನಾಂಗದ ದೊರೆ. ಅವನು ಯಾರೊಂದಿಗೆ ಯುದ್ಧಮಾಡುವನು? ಲಂಕಾನಗರಿಯ ರಾಜನಾದ ರಾವಣನೊಡನೆ. ದಯವಿಟ್ಟು ರಾಮಾಯಣವನ್ನು ಇನ್ನೊಮ್ಮೆ ಓದಿ. ರಾವಣ ರಾಮನಿಗಿಂತ ಹೆಚ್ಚು ನಾಗರಿಕನಾಗಿದ್ದನು, ಕಡಿಮೆಯಲ್ಲ. ಲಂಕಾ ಸಂಸ್ಕೃತಿ ಅಯೋಧ್ಯೆಯ ಸಂಸ್ಕೃತಿಗಿಂತ ಕೀಳಲ್ಲ, ಮೇಲಾಗಿತ್ತು. ವಾನರರು ಮತ್ತು ಇತರ ದಕ್ಷಿಣ ಇಂಡಿಯಾದವರನ್ನು ಎಂದು ಗೆದ್ದದ್ದು? ಅವರೆಲ್ಲ ರಾಮಚಂದ್ರನ ಸ್ನೇಹಿತರು. ರಾಮಚಂದ್ರ ಯಾವ ವಾಲಿಯ, ಯಾವ ಗುಹಕನ ರಾಜ್ಯವನ್ನು ಆಕ್ರಮಿಸಿದನು?

ಕೆಲವು ಕಡೆ ಆರ್ಯರಿಗೂ ದಸ್ಯುಗಳಿಗೂ ಯುದ್ಧ ನಡೆದಿರಬಹುದು. ಕೆಲವು ಕಪಟ ಋಷಿಗಳು ಬಕಧ್ಯಾನ ಮಾಡಿ ಯಾವಾಗ ದಸ್ಯುಗಳು ಬಂದು ತಮಗೆ ವಿಘ್ನ ತಂದಾರು ಎಂದು ಕಾಯುತ್ತಿದ್ದರು, ಕೆಲವು ವೇಳೆ ಹಾಗೆ ತೊಂದರೆ ಕೊಟ್ಟಾಗ ತಕ್ಷಣ ಊರಿಗೆ ಹೋಗಿ ರಾಜನಿಗೆ ದೂರು ಹೇಳುವರು. ಅವರು ಶಸ್ತ್ರಾಸ್ತ್ರ ಸನ್ನದ್ಧರಾಗಿ ಬಂದು ದಸ್ಯುಗಳೊಡನೆ ಯುದ್ಧ ಮಾಡುತ್ತಿದ್ದರು. ಪಾಪ ದಸ್ಯುಗಳು ಕೋಲುಕಲ್ಲುಗಳೊಡನೆ ಎಷ್ಟುಕಾಲ ತಾನೆ ಯುದ್ಧ ಮಾಡಿಯಾರು? ಅವರು ಹತರಾದರು, ಇಲ್ಲವೆ ಓಡಿ ಹೋದರು. ಇದರಲ್ಲಿ ಕೆಲವು ಕಥೆಗಳು ನಿಜವಾಗಿರಬಹುದು. ಆದರೂ ಆರ್ಯರು ಅವರ ಊರನ್ನು ಸ್ವಾಧೀನ ಪಡಿಸಿಕೊಂಡರು ಎನ್ನುವುದಕ್ಕೆ ಆಧಾರವೆಲ್ಲಿರುವುದು? ರಾಮಾಯಣದಲ್ಲಿ ಎಲ್ಲಿ ನಿಮಗೆ ಆಧಾರ ಸಿಕ್ಕುವುದು?

ಐರೋಪ್ಯರೇ! ನೀವು ಯಾವ ದೇಶವನ್ನು ಮುಂದಕ್ಕೆ ತಂದಿರುವಿರಿ? ಎಲ್ಲಿ ಅಬಲ ಜನಾಂಗವಿತ್ತೋ ಅದನ್ನು ಆಮೂಲಾಗ್ರವಾಗಿ ನಾಶಮಾಡಿರುವಿರಿ. ನೀವು ಅವರ ಸ್ಥಳವನ್ನು ಆಕ್ರಮಿಸಿರುವಿರಿ, ಅವರು ನಿರ್ನಾಮರಾದರು. ನಿಮ್ಮ ಅಮೆರಿಕ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಶಾಂತಿಸಾಗರದ ದ್ವೀಪಗಳು, ದಕ್ಷಿಣ ಆಫ್ರಿಕಾ, ಇವುಗಳ ಚರಿತ್ರೆ ಏನು? ಅಲ್ಲಿಯ ಆದಿವಾಸಿಗಳು ಇಂದೆಲ್ಲಿ? ಅವರನ್ನೆಲ್ಲ ನಾಶ ಮಾಡಿದಿರಿ. ಕಾಡುಮೃಗಗಳಂತೆ ಅವರನ್ನು ಬೇಟೆಯಾಡಿದಿರಿ. ಎಲ್ಲಿ ನಿಮಗೆ ನಾಶ ಮಾಡುವುದಕ್ಕೆ ಸಾಧ್ಯವಾಗಲಿಲ್ಲವೊ ಅಲ್ಲಿ ಮಾತ್ರ ಜನ ಜೀವಿಸಿರುವರು.

ಭಾರತವರ್ಷ ಹೀಗೆ ಎಂದೂ ಆಚರಿಸಲಿಲ್ಲ. ಆರ್ಯರು ಬಹಳ ದಯಾಳುಗಳು, ಅವರಿಗೆ ಅಖಂಡ ಸಮುದ್ರದಂತೆ ವಿಶಾಲ ಹೃದಯವಿತ್ತು. ದೈವೀ ಪ್ರತಿಭಾಸಂಪನ್ನ ಬುದ್ಧಿಶಕ್ತಿ ಇತ್ತು. ಆರ್ಯರು ಕಾಡು ಜನಾಂಗವನ್ನು ನಾಶಮಾಡಿದರೆ ವರ್ಣಾಶ್ರಮವನ್ನು ಏಕೆ ಸೃಷ್ಟಿಸುತ್ತಿದ್ದರು?

‘ಐರೋಪ್ಯರ ಉದ್ದೇಶ ಎಲ್ಲರನ್ನೂ ನಾಶಮಾಡಿ ತಾವು ಮಾತ್ರ ಬದುಕಬೇಕೆಂಬುದು. ಆರ್ಯರ ಉದ್ದೇಶ ಎಲ್ಲರನ್ನು ತಮ್ಮ ಸಮನಾಗಿ ಮಾಡಬೇಕು, ತಮಗಿಂತ ಉತ್ತಮರನ್ನಾಗಿ ಮಾಡಬೇಕೆಂಬುದು. ಯೂರೋಪಿನಲ್ಲಿ ಸಭ್ಯತೆಗೆ ದಾರಿ ಖಡ್ಗದ ಮೂಲಕ. ಭರತಖಂಡದಲ್ಲಿ ವರ್ಣದ ವಿಭಾಗದ ಮೂಲಕ. ಒಬ್ಬನ ಶಿಕ್ಷಣ ಮತ್ತು ಸಭ್ಯತೆಗೆ ತಕ್ಕಂತೆ ಮೇಲೇರಿಹೋಗಲು ಇರುವ ಮೆಟ್ಟಲು ಸಾಲು ವರ್ಣವಿಭಾಗ, ಯೂರೋಪಿನಲ್ಲಿ ಬಲಶಾಲಿಗೇ ಜಯ, ಬಲಹೀನನಿಗೆ ಮೃತ್ಯು. ಭರತವರ್ಷದಲ್ಲಿ ಪ್ರತ್ಯೇಕ ಸಾಮಾಜಿಕ ನಿಯಮಗಳಿರುವುದು ದುರ್ಬಲರ ರಕ್ಷಣೆಗಾಗಿ’. ಇದೊಂದು ಅರ್ಥಪೂರ್ಣ ಮತ್ತು ವೈಜ್ಞಾನಿಕ ವಿಶ್ಲೇಷಣೆ.

ಸುಮಾರು 20 ವರ್ಷಗಳ ಹಿಂದೆ ಅಂದು ಪ್ರಚಾರದಲ್ಲಿದ್ದ (ಇಂದು ಸ್ಥಗಿತಗೊಂಡಿದೆ) ್ಖ್ಜಢಚ ಠಿಜಿಞಛಿಠ ಪತ್ರಿಕೆಯಲ್ಲಿ ಸ್ಪಷ್ಟವಾಗಿ ಪ್ರಕಟಗೊಂಡ ಸುದ್ದಿ ನನಗೆ ನಿಚ್ಚಳವಾಗಿ ನೆನಪಿದೆ. ಬ್ರಿಟಿಷ್ ಸರ್ಕಾರ ‘ನಮ್ಮ ಅನುಕೂಲಕ್ಕಾಗಿ ನಾವೇ ಆರ್ಯರ ಆಕ್ರಮಣ ಸಿದ್ಧಾಂತವನ್ನು ಹುಟ್ಟುಹಾಕಿದ್ದು’ ಎಂಬ ಸ್ಪಷ್ಟ ಹೇಳಿಕೆಯನ್ನು ನೀಡಿತ್ತು. ಪುಣ್ಯಕ್ಕೆ ಪಾಶ್ಚಾತ್ಯರಲ್ಲಿ ಘಟನೆ ನಡೆದ ಎಷ್ಟೋ ವರ್ಷಗಳ ನಂತರವಾದರೂ ಸತ್ಯ ಹೇಳುವ ಸಭ್ಯತೆ ಸ್ವಲ್ಪವಾದರೂ ಇನ್ನೂ ಉಳಿದುಕೊಂಡಿದೆ. ಇತಿಹಾಸ ಎಂಬ ಶೀರ್ಷಿಕೆಯನ್ನೇ ಹೊತ್ತ ರಾಮಾಯಣ, ಮಹಾಭಾರತವಾಗಲಿ, ವೇದಗಳಲ್ಲಾಗಲಿ ತಾವು ಹೊರಗಿನವರು ಎಂದು ಆರ್ಯರು ಅಪ್ಪಿತಪ್ಪಿಯೂ, ಒಮ್ಮೆಯೂ ಹೇಳಿಕೊಂಡಿಲ್ಲ. ಎಷ್ಟೋ ಮಹತ್ತರ ವಿಷಯಗಳ ಪ್ರಸ್ತಾಪ ಅಲ್ಲಿದೆ. ಕೆಲವು ಉಪನಿಷತ್ತುಗಳಲ್ಲಿ ಆ ಉಪನಿಷತ್ತನ್ನು ಬೋಧಿಸಿದ ಹತ್ತಾರು ತಲೆಮಾರುಗಳ ಹೆಸರುಗಳ (ಕೆಲವೊಮ್ಮೆ ಸುಮಾರು ನೂರು) ಸ್ಪಷ್ಟ ಪ್ರಸ್ತಾಪವಿದೆ. ಆಳಿದ ಹಲವು ತಲೆಮಾರುಗಳ ಸುದೀರ್ಘ ಪ್ರಸ್ತಾಪ ವಿಷ್ಣು ಪುರಾಣದಲ್ಲಿದೆ. ಅಪರೂಪಕ್ಕೆ ಘಟಿಸುವ ಖಗೋಳ ವಿದ್ಯಮಾನಗಳ ವರ್ಣರಂಜಿತ ಪ್ರಸ್ತಾಪಗಳಿವೆ. ಮಹಾದಾನಿಗಳಾಗಿದ್ದವರು, ತಮ್ಮ ಶೌರ್ಯ, ಪರಾಕ್ರಮಗಳಿಂದ ಇತಿಹಾಸ ಸೃಷ್ಟಿಸಿದವರು, ಕ್ರೌರ್ಯವ್ಯಕ್ತಿತ್ವದಿಂದ ಋಷಿವ್ಯಕ್ತಿತ್ವಕ್ಕೆ ಪರಿವರ್ತನೆ ಹೊಂದಿದವರ ಜೀವನ ವೃತ್ತಾಂತಗಳಿವೆ. ನದಿಗಳ, ಪರ್ವತಗಳ ಬಗ್ಗೆ ಮನಮಿಡಿಯುವ ಕೃತಜ್ಞತಾಪೂರ್ಣ ಸೂಕ್ತಿಗಳಿವೆ. ತಾವೇನಾದರೂ ಹೊರಗಿನ ಪ್ರದೇಶದಿಂದ ಬಂದಿದ್ದವರಾಗಿದ್ದರೆ ‘ಯಾಕಾಗಿ ಬಂದೆವು? ಅಲ್ಲಿನ ನದಿಗಳು, ಬೆಟ್ಟಗಳು ಹೇಗಿದ್ದವು?’ ಎಂಬುದರ ಪರೋಕ್ಷ ಪ್ರಸ್ತಾಪವನ್ನೂ ಮಾಡದೆ ಮೌನವಾಗಿ ಕುಳ್ಳುವವರಲ್ಲ ಆರ್ಯ ಜನಾಂಗ. ‘ಕೃಣ್ವಂತೋ ವಿಶ್ವಮಾರ್ಯಂ’ ಅರ್ಥಾತ್ ‘ವಿಶ್ವದ ಎಲ್ಲರನ್ನೂ ಆರ್ಯರನ್ನಾಗಿಸೋಣ’ ಎಂಬ ಋಗ್ವೇದದ ಮಹತ್ವಪೂರ್ಣ ವಾಕ್ಯ ಇಲ್ಲಿ ಪ್ರಸ್ತುತ.

ಸರಸ್ವತಿ ನದಿತೀರ ಮತ್ತು ಕಾಶ್ಮೀರಗಳನ್ನೊಳಗೊಂಡ ಪ್ರದೇಶವನ್ನು ತಮ್ಮ ಕೇಂದ್ರವಾಗಿಸಿಕೊಂಡಿದ್ದ ಆರ್ಯರು ಈ ಧ್ಯೇಯವಾಕ್ಯಕ್ಕೆ ಅನುಸಾರವಾಗಿ ಕಾಶ್ಮೀರದ ಪೂರ್ವಕ್ಕಿರುವ ಟಿಬೆಟ್​ನ ಭಾಗಗಳು, ಆಧುನಿಕ ರಷ್ಯಾದ ಕೆಲ ಭಾಗಗಳು, ಪರ್ಶೀಯಾ (ಪೆಹೆಲಾವ್ ಜನಾಂಗ) ಮತ್ತು ಯವನರು (ಗ್ರೀಕರು) ಶಕರು, ಹೂಣರು, ಇತ್ಯಾದಿ ಜನಾಂಗಗಳಲ್ಲೆಲ್ಲ ಆರ್ಯ ಸಂಸ್ಕೃತಿಯನ್ನು ಧಾರಾಳವಾಗಿ ಹರಡಲು ಪ್ರಯತ್ನಿಸಿದವರೇ.

ಭಾರತದಿಂದ ತಮ್ಮ ಕುಕೃತ್ಯಗಳಿಂದಾಗಿ ಹೊರದೂಡಲ್ಪಟ್ಟ ಕೆಲವು ರಾಜರು ಅಲ್ಲಲ್ಲಿ ತಮ್ಮ ರಾಜ್ಯಗಳನ್ನು ನಿರ್ವಿುಸಿ, ಇದೇ ಸಂಸ್ಕೃತಿಯನ್ನು ಪಾಲಿಸಿಕೊಂಡು ಬಂದರು. ಇವೆಲ್ಲ ಮೂಲ ಸಂಸ್ಕೃತಿಯಷ್ಟು ಶುದ್ಧ ರೂಪದಲ್ಲಿ ಉಳಿಯಲಿಲ್ಲ ಮತ್ತು ಈ ಮಟ್ಟದ ನಾಗರಿಕತೆಯನ್ನೂ ಸಾಧಿಸಲಿಲ್ಲ ಎನ್ನುವುದು ಬೇರೆ ವಿಚಾರ. ಹಿಮಾಲಯದ ತಪ್ಪಲಿನಲ್ಲಿದ್ದ ಅರೆ ನಾಗರಿಕ ಖಷ್ ಜನಾಂಗ ಮತ್ತು ಪರ್ಷಿಯಾದ ಆಚೆಗಿದ ಯವನ(ಗ್ರೀಕ್) ಸಮ್ಮಿಶ್ರಣವೇ ಆಧುನಿಕ ಯುರೋಪ್. ಕಾಶ್ಮೀರಿಗಳಿಗೂ ಗ್ರೀಕರಿಗೂ ಯುರೋಪಿಯನ್ನರಿಗೂ ಮುಖಚರ್ಯು, ಮೈಬಣ್ಣಗಳಲ್ಲಿ ಸಾಮ್ಯ ಇರುವುದಕ್ಕೆ ಇದೇ ಕಾರಣ. ಸ್ಥಿತ್ಯಂತರಗಳ ಪರಿಣಾಮದಿಂದಾಗಿ, ಹಲವಾರು ಜನಾಂಗಗಳ ಮಿಶ್ರಣದ ಪ್ರತಿರೂಪವಾಗಿ ಇಂದು ಭಾರತ ಸದ್ಯದ ಜನಾಂಗೀಯ ಲಕ್ಷಣಗಳನ್ನು ಹೊಂದಿದೆ. ಐಛಜಿಚ ಜಿಠ ಚ ಞಛ್ಝಿಠಿಜ್ಞಿಜ ಟಟಠಿ ಟ್ಛ ್ಟ್ಚಠ ಅರ್ಥಾತ್ ‘ಭಾರತ ಜನಾಂಗೀಯ ಮಿಶ್ರಣಗಳ ಬಾಣಲೆ’ ಎನ್ನುವ ಜವಾಹರಲಾಲ್ ನೆಹರು ಅವರ ಮಾತು ಪ್ರಸ್ತುತ. ಆದ್ದರಿಂದ ಯುರೋಪಿಯನ್ನರಿಗೂ, ಏಷ್ಯಾದ ಅನ್ಯ ಜನಾಂಗೀಯರಿಗೂ, ನಮಗೂ ಭಾಷೆ, ಇತ್ಯಾದಿಗಳಲ್ಲಿ ಸಾಮ್ಯ ಇದ್ದರೆ ಅದು ಅಢಚ್ಞ ಜ್ಞಿಡಚಠಜಿಟ್ಞ ನಿಂದಾಗಿ ಅಲ್ಲ, ಅಢಚ್ಞ ಞಜಿಜ್ಟಚಠಿಜಿಟ್ಞ ನಿಂದಾಗಿ ಅರ್ಥಾತ್ ಆರ್ಯರು ಹೊರಗಿಂದ ಬಂದಿದ್ದಕ್ಕಲ್ಲ. ಇಲ್ಲಿಂದ ಅವರೋ ಅವರ ಸಂಸ್ಕೃತಿಯೋ ಹೊರಗೆ ಹೋಗಿದ್ದರಿಂದ ಎಂದು ನಾವು ಮರೆಯಬಾರದು. ಮಾರ್ಕ್​ಟ್ವೈನ್, ವಾಲ್ಟೇರ್, ವಿಲ್​ಡ್ಯೂರಂಟ್ ಮುಂತಾದ ಪಾಶ್ಚಾತ್ಯ ಚಿಂತಕರು ಇದನ್ನು ಸಂಶಯಕ್ಕೆಡೆಯಿಲ್ಲದಂತೆ ಪ್ರಸ್ತುತಪಡಿಸಿದ್ದಾರೆ.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net