

ವಿವೇಕಾನಂದರು ಹೇಗೆ ‘ಇನ್ನೊಂದೇ ಒಂದು ನಿಂದನೆಯ ಮಾತನ್ನೂ ನಾವು ಸಹಿಸುವುದಿಲ್ಲ’ ಎಂದರೋ ಹಾಗೆಯೇ ಅವರ ಅನುಯಾಯಿಗಳೂ ಭಾರತದ ಬಗ್ಗೆ, ಸನಾತನ ಧರ್ಮದ ಬಗ್ಗೆ ಒಂದು ಅಪಸ್ವರವನ್ನೂ ಸಹಿಸುವುದಿಲ್ಲ, ಅದಕ್ಕೆ ಸರಿಯಾಗಿ ಉತ್ತರಿಸಬೇಕು ಕೂಡ. ಏಕೆಂದರೆ ಭಾರತ ಸಕಲ ಸದ್ಗುಣಗಳ, ಸಕಲ ಸಾಮರ್ಥ್ಯಗಳ ಸದ್ವಿಚಾರಗಳ, ಸದಾಚಾರಗಳ ಗಂಗೋತ್ರಿ.
ಸೋದರಿ ನಿವೇದಿತೆ ತನ್ನ ಗುರುವಿನ ಬಗ್ಗೆ ಹೇಳುತ್ತ, ‘ಅವರು ಮೂರು ವಿಷಯಗಳ ಬಗ್ಗೆ ಬಹಳ ಸೂಕ್ಷ್ಮವಾಗಿದ್ದರು. ಅದೇ ಅವರ ಗುರು, ಅವರ ಧರ್ಮ, ಅವರ ದೇಶ. ವೈಯಕ್ತಿಕವಾಗಿ ತಮ್ಮ ಬಗ್ಗೆ ಭಾರತದಲ್ಲಿಯಾಗಲಿ, ಅಮೆರಿಕೆಯಲ್ಲಾಗಲಿ, ವೃತ್ತಪತ್ರಿಕೆಗಳಲ್ಲಾಗಲಿ, ನೇರವಾಗಿಯೇ ಆಗಲಿ ಯಾರಾದರೂ ನಿಂದಿಸಿದರೆ ಅದು ತಮಗೆ ಸಂಬಂಧವೇ ಇಲ್ಲವೇನೋ ಎನ್ನುವಷ್ಟು ನಿರ್ಲಿಪ್ತರಾಗಿರುತ್ತಿದ್ದರು. ಆದರೆ ಮೇಲಿನ ಮೂರು ವಿಷಯಗಳ ಬಗ್ಗೆ ಯಾರಾದರೂ ಹಗುರವಾಗಿ ಮಾತನಾಡಿದರೆ ಅವರಿಗೆ ಗ್ರಹಚಾರ ಕಾದಿರುತ್ತಿತ್ತು’. ನಿಜ! ಲಂಡನ್ನಿನಲ್ಲಿ ಭಾರತದ ಬಗ್ಗೆ (ಭಾರತದ ಮಹಾನ್ ಸಂಶೋಧನೆಯಾದ ರಾಜಯೋಗವನ್ನು ಕುರಿತ ಉಪನ್ಯಾಸದ ಸಂದರ್ಭದಲ್ಲಿ) ಸಭೆಯಲ್ಲಿದ್ದ ಮುದುಕನೊಬ್ಬ ವಿಚಿತ್ರವಾಗಿ ಪ್ರತಿಕ್ರಿಯಿಸಿದ. ಕೆರಳಿದ ರುದ್ರನಂತಾದ ವಿವೇಕಾನಂದರು ಇಂಗ್ಲೆಂಡ್ ಇತಿಹಾಸದುದ್ದಕ್ಕೂ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಎಸಗಿರುವ ಸಾಮೂಹಿಕ ಕ್ರೌರ್ಯ, ದೌರ್ಜನ್ಯಗಳ ಸರಮಾಲೆಯನ್ನೇ ತಾರೀಖು, ಸ್ಥಳಗಳ ಸಹಿತ ತಮ್ಮ ಅಗ್ನಿ ಉಕ್ತಿಗಳಿಂದ ವಿವರಿಸಿದಾಗ ಅವನು ಬಿಕ್ಕಿಬಿಕ್ಕಿ ಅತ್ತು ಕೊನೆಗೆ ಸಭೆಯಿಂದಲೇ ಎದ್ದು ಹೋದ.
ಸರ್ವಧರ್ಮ ಸಮ್ಮೇಳನದ ಅತಿಥಿಗಳ ವಿಶ್ರಾಂತಿ ಕೊಠಡಿಯಲ್ಲಿ ಕುಳಿತಿದ್ದ ವಿವೇಕಾನಂದರನ್ನು ಕಂಡ ಅನ್ನಿಬೆಸೆಂಟ್ ಉದ್ಗರಿಸಿದ್ದು, ‘ಅವರ ವ್ಯಕ್ತಿತ್ವದಲ್ಲಿ ರಾಷ್ಟ್ರಾಭಿಮಾನ, ಸೃಜನಾಭಿಮಾನಗಳು ಕಿಡಿಗಳಂತೆ ಸಿಡಿಯುತ್ತಿದ್ದವು. ಜಗತ್ತಿನ ಪ್ರಾಚೀನತಮ ಜೀವಂತ ಧರ್ಮ(ಹಿಂದೂಧರ್ಮ)ದ ಆ ಪ್ರತಿನಿಧಿಯು ಉಳಿದವರೆದುರಿಗೆ ಎಂದಿಗೂ ತಲೆಬಾಗಲು ಸಿದ್ಧನಿರಲಿಲ್ಲ. ತನ್ನ ಸನಾತನಧರ್ಮವು ಇಲ್ಲಿಯ ಶ್ರೇಷ್ಠತಮ ಧರ್ಮಕ್ಕಿಂತ ತೃಣಮಾತ್ರವಾದರೂ ಕನಿಷ್ಠವೆಂದು ಒಪ್ಪಿಕೊಳ್ಳಲು ಆತನು ಸಿದ್ಧನಿರಲಿಲ್ಲ. ಭಾರತಾಂಬೆಯ ಸುಪುತ್ರನೂ ದೂತನೂ ಆದ ಆತನ ಸಮ್ಮುಖದಲ್ಲಿ ಸೊಕ್ಕಿದ ಪಾಶ್ಚಾತ್ಯ ರಾಷ್ಟ್ರಗಳೆದುರು ಭಾರತವು ಅಪಮಾನಕ್ಕೀಡಾಗಲು ಸಾಧ್ಯವಿರಲಿಲ್ಲ’ ಎಂದು.
ತಮ್ಮ ಪಾಶ್ಚಾತ್ಯ ಶಿಷ್ಯೆಯರು ಭಾರತಕ್ಕೆ ಬಂದು ತಮ್ಮೊಡನೆ ಕೆಲದಿನಗಳು ಕಳೆಯಲಿಚ್ಛಿಸಿದಾಗ ವಿವೇಕಾನಂದರು ತಮ್ಮ ಸ್ವಭಾವಕ್ಕನುಗುಣವಾಗಿಯೇ, ‘ಬನ್ನಿ. ಖಂಡಿತವಾಗಿಯೂ ಬನ್ನಿ. ಇಲ್ಲಿಯ ಅನನುಕೂಲತೆಗಳನ್ನು ಸಹಿಸಿಯೂ ಇರಬಲ್ಲಿರಾದರೆ ಬನ್ನಿ. ಆದರೆ ನೆನಪಿಡಿ! ಇನ್ನೊಂದೇ ಒಂದು ನಿಂದೆಯ ಮಾತನ್ನೂ ಯಾರಿಂದಲೂ ನಾವು ಕೇಳಲು ಸಿದ್ಧರಿಲ್ಲ’ ಎಂದೇ ಒಕ್ಕಣಿಸಿದರು. ಎಷ್ಟೇ ಪ್ರೀತಿಯ ಶಿಷ್ಯರಾದರೂ, ಅವರು ತಮ್ಮ ರಾಷ್ಟ್ರಗಳಲ್ಲಿ ಎಷ್ಟೇ ನೆರವು ನೀಡಿದ್ದರೂ, ಅದ್ಯಾವುದೂ ಭಾರತವನ್ನು ಅಪಮಾನಿಸಲೋ, ನಿಂದಿಸಲೋ ಅವರು ಪರವಾನಗಿ ಪಡೆದಂತಲ್ಲ. ಸ್ಪಷ್ಟಮಾತುಗಳಲ್ಲಿ ಖಡಾಖಂಡಿತವಾಗಿ ವಿವೇಕಾನಂದರು ಅವರಿಗೆಲ್ಲ ತಿಳಿಸಿದ್ದಾರೆ ಇದನ್ನು. ಈ ಹಿನ್ನೆಲೆಯಲ್ಲಿ ವಿವೇಕಾನಂದರ ಅನುಯಾಯಿ, ಅಭಿಮಾನಿ ಭಾರತದ ಬಗ್ಗೆ, ಸನಾತನ ಧರ್ಮದ ಬಗ್ಗೆ ಎಂತಹ ನಿಲುವನ್ನು ಹೊಂದಿರಬೇಕೆಂದು ಜಗತ್ತು ಬಯಸುತ್ತದೆ? ಹಾಗೆಯೇ ನನ್ನ ನಿಲುವೇನು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೇ!
ರಾಜ್ಯದ ನಿಯಮಾವಳಿಗಳು, ವರ್ತಮಾನ ಹಾಗೂ ಭವಿಷ್ಯದ ಕಾರ್ಯಯೋಜನೆಗಳು, ಟೀಕೆಟಿಪ್ಪಣಿಗಳು, ಸಲಹೆ ಸೂಚನೆಗಳು, ಚರ್ಚೆಗಳು ಇತ್ಯಾದಿ ಗಂಭೀರ ವಿಷಯಗಳ ಅನಾವರಣ ನಡೆಯುವ ಕೇಂದ್ರಸ್ಥಾನದಲ್ಲಿ ಶತ್ರುರಾಷ್ಟ್ರಕ್ಕೆ ಜಯವಾಗಲಿ ಎಂಬ ಘೊಷಣೆ ಅದೂ ರಾಷ್ಟ್ರದ ರಾಜಧಾನಿಯಲ್ಲಿ ನಡೆಯುವ ಕಾರ್ಯಕಲಾಪಗಳಲ್ಲಿ ಭಾಗವಹಿಸಲು ವ್ಯಕ್ತಿಯೊಬ್ಬ ಚುನಾಯಿತನಾದಾಗ... ಸೂಕ್ಷ್ಮಮತಿಗಳನ್ನು ಚಿಂತೆಗೀಡುಮಾಡಿದೆ. ಆ ಚುನಾಯಿತ ವ್ಯಕ್ತಿ ಪಾಕಿಸ್ತಾನಕ್ಕೆ ನೆರವಾಗುವ ರೀತಿಯಲ್ಲಿ, ಪಾಕಿಸ್ತಾನಕ್ಕೆ ಜಯವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಲಿ ಎಂದು ಪರೋಕ್ಷವಾಗಿ ಸೂಚಿಸುತ್ತಿದ್ದಾನೋ, ಮತ್ತೊಮ್ಮೆ ನೆನಪಿಸುತ್ತಿದ್ದಾನೋ ಎಂಬಂತಿದೆ.
್ಗ್ಠ ಞಚಢ ಜಿಜ್ಞಟ್ಟಛಿ ಠಿಜಛಿ ಛಿಡಜ್ಝಿ ಚ್ಠಿಠಿ ್ಞಠಿ ಠಿಜಛಿ ್ಚ್ಞಛಿಟ್ಠಿಛ್ಞಿ್ಚಠ ಟ್ಛ ಠಿಜಛಿ ಠಚಞಛಿ ಅರ್ಥಾತ್ ‘ಕೆಡುಕನ್ನು ನೀವು ಉದಾಸೀನ ಮಾಡಬಹುದು. ಆದರೆ ಅವುಗಳ ಪರಿಣಾಮವನ್ನಲ್ಲ’ ಎಂಬ ಪಾಶ್ಚಾತ್ಯ ಮುತ್ಸದ್ದಿಯೊಬ್ಬನ ಮಾತು ನಮ್ಮನ್ನು ಇಲ್ಲಿ ಚಿಂತೆಗೀಡುಮಾಡುತ್ತದೆ. ಸದ್ದಿಲ್ಲದೆ ಆದರೆ ವ್ಯವಸ್ಥಿತವಾಗಿ, ಕ್ರಮಬದ್ಧವಾಗಿ ಕೆಲವು ಪಟ್ಟಭದ್ರ ಹಾಗೂ ವಿಭಾಜಕ ಶಕ್ತಿಗಳು ಭಾರತದಲ್ಲಿ ಕಾರ್ಯೋನ್ಮುಖವಾಗಿವೆ. ಈ ಬಿಸಿ ಆರದಂತೆ ಮೂರ್ನಾಲ್ಕು ತಿಂಗಳಿಗೊಮ್ಮೆ ಇಂತಹ ಪ್ರಚೋದನಕಾರಿ ಘಟನೆಗಳು ಸಂಭವಿಸುತ್ತಿರುವುದನ್ನು ಕಳೆದ 20 ವರ್ಷಗಳಿಂದ ಅಷ್ಟೇ ಮೌನವಾಗಿ ನಾನೂ ಗಮನಿಸುತ್ತ ಬಂದಿದ್ದೇನೆ.
2008ರಲ್ಲಿ ಅಮೆರಿಕದ ಆರ್ಲ್ಯಾಂಡೋ ವಿಶ್ವವಿದ್ಯಾಲಯದಲ್ಲಿ ವೇದಗಳನ್ನು ಕುರಿತ ಒಂದು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಯುವಗೋಷ್ಠಿಯೊಂದರ ಅಧ್ಯಕ್ಷನಾಗುವ ಅವಕಾಶ ನನ್ನದಾಗಿತ್ತು. ಅಮೆರಿಕದಲ್ಲಿ ನೆಲೆಸಿರುವ ಐಛಟ್ಝಟಜಢ ಸಂಶೋಧಕ ಹಾಗೂ ಐ್ಛ್ಞಠಿಢ ್ಛuಛಚಠಿಜಿಟ್ಞನ ಮುಖ್ಯಸ್ಥ ರಾಜೀವ್ ಮಲ್ಹೋತ್ರಾ ನನಗೆ ಪರಿಚಯವಾಗಿದ್ದು ಆಗಲೇ. ಅವರು ಆಗ ನನಗೊಂದು ಪುಸ್ತಕವನ್ನು ಕಾಣಿಕೆಯನ್ನಾಗಿ ನೀಡಿದ್ದರು. ಅದು ಅವರೇ ರಚಿಸಿದ್ದ ಈಜಿಡಜಿಛಜ್ಞಿಜ ಐಛಜಿಚ ಪುಸ್ತಕ. ‘ಭಾರತದ ವಿಭಜನೆ’ ಎಂಬ ಶೀರ್ಷಿಕೆಯಲ್ಲಿ ಇದು ಇಂದು ಕನ್ನಡದಲ್ಲೂ ಲಭ್ಯ. ಆ ಪುಸ್ತಕವನ್ನು ಓದಿದರೆ ಅಂತಾರಾಷ್ಟ್ರೀಯ ಜಾಲವೊಂದು ಈ ದೇಶದಲ್ಲೇ ನೆಲೆಸಿ, ಬೇರೂರಿ ಎಲ್ಲ ಸವಲತ್ತುಗಳನ್ನೂ ಪಡೆದುಕೊಂಡ ಆದರೆ ಮನುಷ್ಯತ್ವ, ಕೃತಜ್ಞತೆ, ರಾಷ್ಟ್ರಪ್ರೇಮದ ಗಂಧಗಾಳಿಯೂ ಇಲ್ಲದ ಕೆಲವು ಮಾಧ್ಯಮದವರು, ಸಿನಿಮಾದವರು, ಧಾರ್ವಿುಕ ನಾಯಕರು, ರಾಜಕೀಯ ಮುಖಂಡರು ಇವರುಗಳ ಪರೋಕ್ಷ ಬೆಂಬಲದೊಂದಿಗೆ ಭಾರತವನ್ನು ಅದರೊಳಗಿಂದಲೇ ದುರ್ಬಲಗೊಳಿಸಿ, ಸಿದ್ಧಾಂತಗಳ ವೈವಿಧ್ಯ ಹಾಗೂ ಇನ್ನೂ ಕೆಲವು ಅಂಶಗಳಡಿಯಲ್ಲಿ ಹೇಗೆ ವಿಭಾಜಕ ಶಕ್ತಿಗಳ ಹುಟ್ಟು ಹಾಗೂ ಬಲವರ್ಧನೆಗೆ ಪ್ರಯತ್ನಿಸಬಹುದು, ಸಫಲರಾಗಬಹುದು ಮತ್ತು ಮುಂದೊಂದು ದಿನ ಭಾರತವನ್ನು ವಿಭಜಿಸಲೂಬಹುದು ಎಂಬುದರ ಆಳವಾದ ಅಧ್ಯಯನವೊಂದನ್ನು ನಡೆಸಿ ಕಾರ್ಯಪ್ರವೃತ್ತರಾಗಿರುವುದರ ಬಗ್ಗೆ ರಾಜೀವ್ ಮಲ್ಹೋತ್ರಾ ಭಾರತೀಯರನ್ನು ಎಚ್ಚರಿಸಲೆತ್ನಿಸಿದ್ದಾರೆ. ಅವರ (ಅಂತಾರಾಷ್ಟ್ರೀಯ ಜಾಲ) ಕಾರ್ಯಕ್ರಮದ ಪ್ರಧಾನ ಪಲ್ಲವಿಯೇ ಇಲ್ಲಿಯ ಧರ್ಮದ ಬಗ್ಗೆ ಮತ್ತು ದೇಶದ ಬಗ್ಗೆ ಜನರಲ್ಲಿ ಅಭಿಮಾನಶೂನ್ಯತೆಯನ್ನು ಕ್ರಮೇಣ ಜಿಗುಪ್ಸೆಯನ್ನೂ ತುಂಬುತ್ತ ಹೋಗುವುದು. ಒಂದು ಕಾಲದಲ್ಲಿದ್ದ ಸಾಮಾಜಿಕ ಅನಿಷ್ಟಗಳನ್ನು ಈಗಲೂ ಅದು ತಾನೇ ತಾನಾಗಿ ರಾರಾಜಿಸುತ್ತಿದೆಯೆನೋ ಎಂಬಂತೆ ಭಾಷಣ, ಲೇಖನಗಳ ಮೂಲಕ ಮತ್ತೆ ಮತ್ತೆ ಪ್ರತಿಬಿಂಬಿಸುತ್ತ ಹೋಗುವುದು, ಸಾರ್ವಜನಿಕ ಚರ್ಚೆಗಳನ್ನು ನಡೆಸುವುದು, ಅವರ ಮಿತ್ರರೇ ನಡೆಸುವ ಪತ್ರಿಕೆಗಳಲ್ಲಿ ಅವು ಮುಖಪುಟದಲ್ಲಿ ಬರುವಂತೆ ಮಾಡುವುದು. ಇದಕ್ಕೆ ಸಾಧ್ಯವಾದಷ್ಟೂ ಧಾರ್ವಿುಕನಾಯಕರು, ಮಠಾಧಿಪತಿಗಳನ್ನು ಬಳಸಿಕೊಳ್ಳುವುದು. ಉನ್ನತ ಅಧಿಕಾರಿಗಳ ಸಹಕಾರವನ್ನೂ ಬಳಸಿಕೊಳ್ಳುವುದು. ಭಾರತದಲ್ಲಿ ನಡೆಯುವ ಈ ಚರ್ಚೆಗಳನ್ನು ನಂತರ ಬಿಬಿಸಿ, ಅಮೆರಿಕದ ವಿಶ್ವವಿದ್ಯಾಲಯಗಳೂ, ಆಕ್ಸ್ಫರ್ಡ್ ಚರ್ಚೆಗಳು ಇವುಗಳಲ್ಲಿ ಪ್ರತಿಧ್ವನಿಸುವುದು. ಅನುಕೂಲಕರ ಸಮಯದಲ್ಲಿ ಮುಂದೊಂದು ದಿನ ವಿಶ್ವಸಂಸ್ಥೆಯಲ್ಲೂ ಪ್ರತಿಧ್ವನಿಗೊಳ್ಳುವಂತೆ ಮಾಡುವುದು. ಇದೇ ಈ ಪಟ್ಟಭದ್ರ ಭಾರತ ವಿಭಾಜಕ ಶಕ್ತಿಗಳ ಕಾರ್ಯಪ್ರಣಾಳಿಕೆ.
ನಾಲ್ಕನೇ ವಿಶ್ವಧರ್ಮಸಮ್ಮೇಳನ ಸ್ಪೇನಿನ ಬಾರ್ಸಿಲೋನಾ ನಗರದಲ್ಲಿ ನಡೆದಾಗ ಅಲ್ಲಿನ ಗುಂಪು ಚರ್ಚೆಯಲ್ಲಿ ಖಲಿಸ್ಥಾನದ ಪ್ರತಿನಿಧಿ ಮಾತನಾಡಿದ್ದು ಅದನ್ನು ವಿರೋಧಿಸಿದವರ ಗುಂಪಿನಲ್ಲಿ ನಾನು, ಸ್ವಾಮಿ ವೀರೇಶಾನಂದರು, ಸ್ವಾಮಿ ಯೋಗೇಶ್ವರಾನಂದರು ಇದ್ದದ್ದು ಇಲ್ಲಿ ಪ್ರಸ್ತುತ. ಇಂತಹ ಭಾರತ ವಿರೋಧಿ ಚಟುವಟಿಕೆಗಳು ಅಮೆರಿಕದಲ್ಲೂ ಕೆಲವೆಡೆ ತಲೆ ಎತ್ತುತ್ತಿದ್ದು ಅದಕ್ಕೆಲ್ಲ ಅಲ್ಲಿನ ಭಾರತೀಯರು ಮುಟ್ಟಿನೋಡಿಕೊಳ್ಳುವಂತೆ ಉತ್ತರ ನೀಡುತ್ತಿರುವುದು ಬೇರೆ ಮಾತು. ಡ್ಯಾಲಸ್ ಮತ್ತು ಫೀನಿಕ್ಸ್ ವಿಶ್ವವಿದ್ಯಾಲಯಗಳಲ್ಲಿ, ‘ವಿಜ್ಞಾನ ಮತ್ತು ಆಧುನಿಕ ಚಿಂತನೆಗೆ ಭಾರತದ ಕೊಡುಗೆ’ ಎಂತಲೇ ನಾನು ಮಾತನಾಡಬೇಕಿದ್ದ ವಿಷಯ ಇದ್ದುದು. ಕೆಲದಿನಗಳ ಹಿಂದೆ ಜರ್ಮನಿಯ ಹ್ಯಾಂಬರ್ಗ್ನಲ್ಲಿಯೂ ಇದೇ ವಿಷಯದ ಬಗ್ಗೆ ಮಾತನಾಡಬೇಕೆಂದೇ ನನಗೆ ಬೇಡಿಕೆ ಬಂದಿದ್ದುದು.
ಇದನ್ನೆಲ್ಲ ಗಮನಿಸಿದಾಗ ವ್ಯವಸ್ಥಿತ ರಾಷ್ಟ್ರವಿಭಜನಾ ಜಾಲವೊಂದು ಮೌನವಾಗಿ ಆದರೆ ಕ್ರೀಯಾಶೀಲವಾಗಿ, ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಯಾರಿಗೆ ಅನ್ನಿಸುವುದಿಲ್ಲ? ವಿವೇಕಾನಂದರು ಹೇಗೆ ‘ಇನ್ನೊಂದೇ ಒಂದು ನಿಂದನೆಯ ಮಾತನ್ನೂ ನಾವು ಸಹಿಸುವುದಿಲ್ಲ’ ಎಂದರೋ ಹಾಗೆಯೇ ಅವರ ಅನುಯಾಯಿಗಳೂ ಭಾರತದ ಬಗ್ಗೆ, ಸನಾತನ ಧರ್ಮದ ಬಗ್ಗೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಬರುವ ಒಂದೇ ಒಂದು ಅಪಸ್ವರವನ್ನೂ ಸಹಿಸುವುದಿಲ್ಲ, ಅಷ್ಟೇ ಅಲ್ಲ ಅದಕ್ಕೆ ಸರಿಯಾಗಿ ಉತ್ತರಿಸಬೇಕು ಕೂಡ. ಏಕೆಂದರೆ ಭಾರತ ಸಕಲ ಸದ್ಗುಣಗಳ, ಸಕಲ ಸಾಮರ್ಥ್ಯಗಳ ಸದ್ವಿಚಾರಗಳ, ಸದಾಚಾರಗಳ ಗಂಗೋತ್ರಿ. ‘ಆರ್ಯನ ರಕ್ತ ಹೋಗದೆ ಯಾವ ಜನಾಂಗ ನಾಗರಿಕವಾಗಿದೆ’ ಎಂಬ ವಿವೇಕಾನಂದರ ಮಾತನ್ನು ಪ್ರತಿ ಭಾರತೀಯನು ನೂರು ಸಲ ನೆನಪಿಸಿಕೊಳ್ಳಬೇಕು. ಅಷ್ಟೇ ಅಲ್ಲ ಅಜ್ಞಾನಿಗಳ ತಲೆಗೂ ಇದನ್ನು ತುಂಬಬೇಕು. ಈ ರಾಷ್ಟ್ರ ಮತ್ತು ಈ ಧರ್ಮ ಸಾಕಷ್ಟು ಕಣ್ಣೀರು ಹಾಕಿ ಆಗಿದೆ. ಗಛಿ ಜಚಡಛಿ ಡಿಛಿಟಠಿ ಛ್ಞಿಟ್ಠಜಜ. ಘಟ ಞಟ್ಟಛಿ ಡಿಛಿಛಿಟಜ್ಞಿಜ. ಎನ್ನುವ ಈ ಮಾತು ಕೂಡ ವಿವೇಕಾನಂದರದ್ದೇ. ಇಂತಹ ಸಮಸ್ಯೆಗಳನ್ನು ಮೊಳಕೆಯಾಗಿರುವಾಗಲೇ ಚಿವುಟಿಹಾಕಬೇಕಾಗಿದೆ. ಹಿಂದೊಮ್ಮೆ ಖಲಿಸ್ಥಾನದ ಸಮಸ್ಯೆ ಹೀಗೆಯೇ ಪ್ರಾರಂಭವಾಗಿದ್ದು. ಈವತ್ತಿನ ಒಂದು ಘೊಷಣೆ, ಒಂದು ಹೇಳಿಕೆ, ಒಂದು ಪ್ರಶ್ನೆ, ಒಂದು ಭಾಷಣ ನಾವು ಎಚ್ಚರಗೊಳ್ಳದಿದ್ದಲ್ಲಿ ಹಿಂದಿರುಗಲಾಗದ ಪರಿಸ್ಥಿತಿಗೆ ಕೊಂಡೊಯ್ದೀತು! ಇದನ್ನರಿತೇ ಮತ್ತೊಮ್ಮೆ ತಲೆ ಎತ್ತುತ್ತಿರುವ ಖಲಿಸ್ಥಾನದ ಬೆಂಬಲಿಗರನ್ನು ಸದ್ದಿಲ್ಲದೆ ಮೇಲೆ ಕಳಿಸುತ್ತಿದೆ ಭಾರತೀಯ ರಕ್ಷಣಾ ವ್ಯವಸ್ಥೆ. ಇಲ್ಲಿ ಎಲ್ಲರೂ ಎಚ್ಚರಗೊಳ್ಳಬೇಕಾದ ಅವಶ್ಯಕತೆಯಿದೆ. ಅದು ಸಂನ್ಯಾಸಿ ಇರಲಿ, ಗೃಹಸ್ಥ ಇರಲಿ, ಅಧಿಕಾರಿ ಇರಲಿ, ರೈತ ಇರಲಿ.
ತಪ್ಪು ಮಾಡುವುದು ತಪ್ಪಲ್ಲ, ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡುವುದು ತಪ್ಪು, ಮಹಾತಪ್ಪು. ಇಷ್ಟೆಲ್ಲ ಜ್ಞಾನದ ಖನಿಯೇ ಆದ ಭಾರತ ಸಾವಿರ ವರ್ಷ ಏಕೆ ಗುಲಾಮಗಿರಿಯಲ್ಲಿ ಕೊಳೆಯಿತು ಎಂಬುದನ್ನು ಪ್ರಸ್ತಾಪಿಸುತ್ತ ವಿಶ್ವವಿಖ್ಯಾತ ಇತಿಹಾಸಕಾರ ವಿಲ್ ಡ್ಯೂರೆಂಟ್ ಬರೆಯುತ್ತಾರೆ ‘ಉಠಿಛ್ಟಿ್ಞ್ಝ ಡಜಿಜಜ್ಝಿಚ್ಞ್ಚ ಜಿಠ ಠಿಜಛಿ ಟ್ಟಜ್ಚಿಛಿ ್ಛ್ಟ fಛಿಛಿಛಟಞ’ -‘ಘನತೆಯಿಂದ (ಸ್ವತಂತ್ರನಾಗಿ) ಬದುಕಬೇಕಾದರೆ ನಿರಂತರ ಎಚ್ಚರದಲ್ಲಿರಬೇಕು’ ಎಂದು.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)