ಸ್ಟೇಷನರಿ ಬಿಸಿನೆಸ್​ನಲ್ಲಿ ಸಕ್ಸಸ್ ಆಗೋದು ಹೇಗೆ?

Money Mathu F
Published on

ಡಿಜಿಟಲ್ ಯುಗದಲ್ಲಿ ಸ್ಟೇಷನರಿ ಶಾಪ್ ಬಿಸಿನೆಸ್ ಆರಂಭಿಸುವುದು ಪ್ರಯೋಜನಕ್ಕೆ ಬಾರದ ಐಡಿಯಾ ಅಂತ ನಿಮಗೆ ಅನಿಸಬಹುದು. ಆದರೆ ಕಾಲ ಎಷ್ಟೇ ಬದಲಾದರೂ ಭಾರತದಲ್ಲಿ ಕೆಲ ಬಿಸಿನೆಸ್ ಮಾಡೆಲ್​ಗಳು ಬದಲಾಗುವುದಿಲ್ಲ. ಅಂತಹ ಗಟ್ಟಿ ಬಿಸಿನೆಸ್ ಗಳಲ್ಲಿ ಒಂದು ಸ್ಟೇಷನರಿ ಶಾಪ್ ಬಿಸಿನೆಸ್. ಮೊಬೈಲ್, ಟ್ಯಾಬ್, ಲ್ಯಾಪ್​ಟಾಪ್ ಯುಗದಲ್ಲೂ ಪೆನ್, ಪೆನ್ಸಿಲ್, ಪುಸ್ತಕ ಮತ್ತು ಇತರ ಲೇಖನ ಸಾಮಗ್ರಿಗಳ ಬಳಕೆ ಹೆಚ್ಚುತ್ತಲೇ ಇದೆ. ಸ್ಟೇಷನರಿ ಶಾಪ್ ಅಂದ್ರೆ ಕೇವಲ ಪೆನ್, ಪೆನ್ಸಿಲ್, ರಬ್ಬರ್​ನಂತಹ ವಸ್ತುಗಳು ಸಿಗುವ ಜಾಗ ಮಾತ್ರವಲ್ಲ. ಶಾಲಾ ಮಕ್ಕಳಿಗೆ, ಕಚೇರಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹೀಗೆ ವಿದ್ಯಾಭ್ಯಾಸ ಮತ್ತು ಅದಕ್ಕೆ ಸಂಬಂಧಿಸಿದ ಅಗತ್ಯವಸ್ತುಗಳ ಭಂಡಾರವೇ ಸ್ಟೇಷನರಿ ಶಾಪ್ ಬಿಸಿನೆಸ್.

ಸ್ಟೇಷನರಿ ಬಿಸಿನೆಸ್ ಒಂದು ದೊಡ್ಡ ಅವಕಾಶ: ಸ್ಟೇಷನರಿ ಬಿಸಿನೆಸ್​ನ ನಾವು ಮಾಡೋದಕ್ಕೆ ಆಗುತ್ತಾ, ನಿಜಕ್ಕೂ ಅದರಲ್ಲಿ ಲಾಭ ಇದೆಯಾ ಅಂತ ಗೊಂದಲದಲ್ಲಿ ಬಿಸಿನೆಸ್ ಆರಂಭಿಸಬೇಡಿ. ಭಾರತದಲ್ಲಿ ಶಾಲೆಗೆ ಹೋಗುವ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ. ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಸುಮಾರು 25 ಸಾವಿರ ಕೋಟಿ ವಿದ್ಯಾರ್ಥಿಗಳಿದ್ದು ಸ್ಟೇಷನರಿ ಬಿಸಿನೆಸ್​ನ ಮಾರುಕಟ್ಟೆ ಮೌಲ್ಯ ಸುಮಾರು ರೂ. 25,000 ಕೋಟಿ. ಕಡಿಮೆ ಬಂಡವಾಳದಲ್ಲಿ ಒಂದು ಒಳ್ಳೆಯ ಬಿಸಿನೆಸ್ ಆರಂಭಿಸಿ ಸಂಪಾದನೆ ಮಾಡಬೇಕು ಅನ್ನೋರಿಗೆ ಸ್ಟೇಷನರಿ ಬಿಸಿನೆಸ್ ಶಾಪ್ ಒಳ್ಳೆಯ ಆಯ್ಕೆ.

ಪೂರ್ವ ತಯಾರಿ ಬಹಳ ಮುಖ್ಯ: ಯಾವುದೇ ಬಿಸಿನೆಸ್ ಮಾಡಬೇಕು ಅಂದ್ರೂ ಅದಕ್ಕೊಂದು ಪೂರ್ವ ತಯಾರಿ ಅಗತ್ಯ. ಸ್ಟೇಷನರಿ ಬಿಸಿನೆಸ್ ಆರಂಭಿಸೋಕೆ ಮೊದಲು ಒಳ್ಳೆಯ ಜಾಗ ಹುಡುಕಬೇಕು. ಜನಸಂದಣಿ ಹೆಚ್ಚಿರುವ ಕಡೆ, ಸಣ್ಣ ಪಟ್ಟಣಗಳಲ್ಲಿ, ಹೆಚ್ಚು ಬುಕ್ ಸ್ಟೋರ್​ಗಳು ಇರುವ ಕಡೆ ಹೀಗೆ ಯಾವ ಜಾಗದಲ್ಲಿ ಅಂಗಡಿ ಆರಂಭಿಸಬೇಕು ಎನ್ನುವ ಬಗ್ಗೆ ನಿಮಗೆ ಸ್ಪಷ್ಟತೆ ಇರಬೇಕು. ಅಗತ್ಯ ಬಂಡವಾಳ ಹೊಂದಿಸೋದು, ಸಾಮಗ್ರಿಗಳ ಪೂರೈಕೆದಾರರನ್ನು ಹುಡುಕೋದು, ಲೈಸೆನ್ಸ್ ಮಾಡಿಸಿಕೊಳ್ಳೋದು, ನಿಮ್ಮ ಅಂಗಡಿಗೆ ಜನರು ಬರುವಂತೆ ಮಾಡೋದು, ಲಾಭ ನಷ್ಟ ಲೆಕ್ಕ ಹಾಕೋದು, ಸಿಬ್ಬಂದಿ ನೇಮಕಾತಿ ಮಾಡೋದು ಹೀಗೆ ಸಾಕಷ್ಟು ವಿಚಾರಗಳನ್ನು ನೀವು ಸ್ಟೇಷನರಿ ಬಿಸಿನೆಸ್ ಮಾಡುವಾಗ ಪರಿಗಣಿಸಬೇಕಾಗುತ್ತದೆ.

ಸ್ಟೇಷನರಿ ಶಾಪ್ ಬಿಸಿನೆಸ್ ಆರಂಭಿಸಲು ಪಂಚ ಸೂತ್ರ: 1. ನಿಮ್ಮ ಅಂಗಡಿಯಲ್ಲಿ ಯಾವ ಸ್ಟೇಷನರಿಗಳು ಮಾರಾಟವಾಗುತ್ತವೆ ಎನ್ನುವುದನ್ನು ತೀರ್ವನಿಸಿ ಮುಂದುವರಿಯಿರಿ. 2. ನಿಮ್ಮ ಪ್ರತಿಸ್ಪರ್ಧಿಗಳು ಯಾರು ಅವರು ಏನು ಮಾರಾಟ ಮಾಡುತ್ತಿದ್ದಾರೆ ಎನ್ನುವುದರ ಅಧ್ಯಯನ ಮಾಡಿ. 3. ಸ್ಟೇಷನರಿ ಬಿಸಿನೆಸ್​ನಲ್ಲಿ ಆಗುತ್ತಿರುವ ಹೊಸ ಅನ್ವೇಷಣೆಗಳ ಬಗ್ಗೆ ಸದಾ ಗಮನಿಸುತ್ತಿರಿ. 4. ಸಪ್ಲೈಯರ್​ಗಳು ಮತ್ತು ಉತ್ಪಾದಕರ ಜತೆ ಒಳ್ಳೆಯ ರೀತಿಯಲ್ಲಿ ವ್ಯವಹರಿಸಿ. 5. ಆನ್​ಲೈನ್ ಮೂಲಕ ಮಾರಾಟ ಮಾಡುವ ವ್ಯವಸ್ಥೆಗೂ ನಿಧಾನಕ್ಕೆ ತೆರೆದುಕೊಳ್ಳಿ.

ಸ್ಟೇಷನರಿ ಬಿಸಿನೆಸ್​ನಲ್ಲಿ ಲಾಭ ಎಷ್ಟು?: ಸುಮಾರು ಶೇ 15ರಿಂದ ಶೇ 20ರಷ್ಟು ಪ್ರಾಫಿಟ್ ಮಾರ್ಜಿನ್ ಸಿಗುತ್ತದೆ. ಕೆಲ ವಸ್ತುಗಳ ಮೇಲೆ ಶೇ 25ರಿಂದ ಶೇ 30ರಷ್ಟು ಲಾಭವೂ ಲಭ್ಯ. ವ್ಯಾಪಾರ ಚೆನ್ನಾಗಿ ಆಗುತ್ತಿದ್ದರೆ ಕ್ರಮೇಣ ಲಾಭವೂ ಹೆಚ್ಚಿಗೆ ಆಗುತ್ತದೆ. ಸ್ಟೇಷನರಿ ವಸ್ತುಗಳನ್ನು ಮತ್ತೆ ಮತ್ತೆ ಖರೀದಿಸುವ ಅಗತ್ಯ ಇರುವುದರಿಂದ ಈ ಬಿಸಿನೆಸ್​ನಲ್ಲಿ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವುದು ಬಹಳ ಮುಖ್ಯ. ಗ್ರಾಹಕನಿಗೆ ಅಗತ್ಯ ಎನಿಸುವ ಎಲ್ಲ ವಸ್ತುಗಳು ನಿಮ್ಮ ಅಂಗಡಿಯಲ್ಲಿ ಸಿಕ್ಕರೆ ಜತೆಗೆ ನೀವು ಒಳ್ಳೆಯ ಸರ್ವೀಸ್ ಕೊಟ್ಟರೆ ಬಿಸಿನೆಸ್ ಚೆನ್ನಾಗಿ ಬೆಳೆಯೋದರಲ್ಲಿ ಅನುಮಾನವಿಲ್ಲ. ಆರಂಭಿಕ ಹಂತದಲ್ಲಿ ರೂ. 50 ಸಾವಿರದಿಂದ ರೂ. 1 ಲಕ್ಷ ಬಂಡವಾಳ ಹಾಕಿ ಕ್ರಮೇಣ ಬಿಸಿನೆಸ್ ಬೆಳೆಸಿ ಈಗ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಿರುವ ಸಾಕಷ್ಟು ಸ್ಟೇಷನರಿ ಅಂಗಡಿ ಮಾಲೀಕರು ನಮ್ಮ ಮುಂದೆ ಇದ್ದಾರೆ.

ಫೈನಾನ್ಸಿಯಲ್ ಫ್ರೀಡಂ ಆ್ಯಪ್​ನಲ್ಲಿ ಸ್ಟೇಷನರಿ ಬಿಸಿನೆಸ್ ಕೋರ್ಸ್

ಸ್ಟೇಷನರಿ ಬಿಸಿನೆಸ್ ಮಾಡೊದಕ್ಕೆ ಐಡ್ಯಾ ಬೇಕು, ಬಿಸಿನೆಸ್ ಬಗ್ಗೆ ಕಂಪ್ಲೀಟ್ ಮಾಹಿತಿ ಬೇಕು ಎನ್ನುವವರಿಗಾಗಿಯೇ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಸ್ಟೇಷನರಿ ಬಿಸಿನೆಸ್ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಸ್ಟೇಷನರಿ ಬಿಸಿನೆಸ್​ನಲ್ಲಿ ಸಕ್ಸಸ್ ಆಗಿರುವ ನವೀನ್ ಅವರು ಈ ಕೋರ್ಸ್​ನ ಮಾರ್ಗದರ್ಶಕರಾಗಿದ್ದಾರೆ. ಸ್ಟೇಷನರಿ ಬಿಸಿನೆಸ್ ಬಗ್ಗೆ ಪಕ್ಕಾ ಮಾಹಿತಿಯನ್ನು ಅವರು ಈ ಕೋರ್ಸ್​ನಲ್ಲಿ ನೀಡಿದ್ದಾರೆ. ಸರಿಯಾದ ರೀತಿ ಬಿಸಿನೆಸ್ ಮಾಡಿದರೆ ತಿಂಗಳಿಗೆ ಒಂದು ಲಕ್ಷದವರೆಗೆ ಹೇಗೆ ಸಂಪಾದನೆ ಮಾಡಬಹುದು ಎನ್ನುವುದನ್ನು ಅವರು ವಿವರವಾಗಿ ತಿಳಿಸಿಕೊಟ್ಟಿದ್ದಾರೆ. ಹಾಗಾದ್ರೆ ಇನ್ನೇಕೆ ತಡ, ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ ಲೋಡ್ ಮಾಡಿ ಸ್ಟೇಷನರಿ ಬಿಸಿನೆಸ್ ಆರಂಭಿಸೋಕೆ ಸಜ್ಜಾಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net