ದೇಹದಲ್ಲಿನ ಅಧಿಕ ಉಷ್ಣಾಂಶ ಹೊರಹಾಕುವ ಪಂಜಾಬಿ ರೈಸ್

punjabi rice
Published on

ಅಕ್ಕಿಯನ್ನು ಉಪಯೋಗಿಸಿ ಅನೇಕ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಇಂಥ ಖಾದ್ಯಗಳ ಪೈಕಿ ಇಲ್ಲಿ ಕೆಲವುಗಳ ಪರಿಚಯ ನೀಡಲಾಗಿದೆ.

ಬೇಕಾಗುವ ಸಾಮಗ್ರಿ: 1 ಕೆ ಜಿ ಅಕ್ಕಿ, 100 ಗ್ರಾಂ ಹಸಿ ಮೆಣಸು, 100 ಗ್ರಾಂ ಜೀರಿಗೆ, 500 ಗ್ರಾಂ ಟೊಮ್ಯಾಟೋ, 1 ಕಟ್ಟು ಕೊತ್ತಂಬರಿ, 2 ಚಮಚ ಅಡುಗೆ ಎಣ್ಣಿ, ಉಪ್ಪು.

ಮಾಡುವ ವಿಧಾನ: ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿ ಜೀರಿಗೆ, ಉದ್ದಗೆ ಹೆಚ್ಚಿಕೊಂಡ ಹಸಿ ಮೆಣಸು ಹಾಕಿ ಚೆನ್ನಾಗಿ ಒಗ್ಗರಣೆ ಮಾಡಿ. ಒಣ ಅಕ್ಕಿಯನ್ನು ಅದರಲ್ಲಿ ಹಾಕಿ ಚೆನ್ನಾಗಿ ತಾಳಿಸಿ. ಅಕ್ಕಿಯ ಪ್ರಮಾಣಕ್ಕೆ ತಕ್ಕಂತೆ ನೀರು ಹಾಕಿ ಅನ್ನ ಮಾಡಿ. ನಂತರ ಕೊತ್ತಂಬರಿಯನ್ನು ಕತ್ತರಿಸಿಕೊಂಡು ಹರಡಿ. ಈಗ ಟೊಮ್ಯಾಟೋವನ್ನು ಚಿಪ್ಸ್ ಗಾತ್ರದಲ್ಲಿ ಕತ್ತರಿಕೊಂಡು ಆ ಅನ್ನದ ಮೇಲೆ ಪೂರ್ಣ ಮುಚ್ಚುವಂತೆ ಹರಡಬೇಕು. 10 ನಿಮಿಷ ಮುಚ್ಚಳದಿಂದ ಮುಚ್ಚಿಟ್ಟರೆ ಆಯಿತು.

ಲಾಭಗಳು: ದೇಹದಲ್ಲಿನ ಅಧಿಕ ಉಷ್ಣಾಂಶ ಹೊರಹಾಕುತ್ತದೆ. ಹುಳಿ ತೇಗು (ಆಮ್ಲತೆ) ನಿವಾರಣೆಯಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net