

ಕಾಬೋಹೈಡ್ರೇಟ್, ಫೈಬರ್, ಪ್ರೊಟೀನ್, ವಿಟಮಿನ್ ಭಂಡಾರವೇ ಇರುವ ಪುಂಡಿ ಸೊಪ್ಪನ್ನು ಬಳಸಿಕೊಂಡು ಮಾಡಬಹುದಾದ ವಿವಿಧ ರುಚಿಕರ ಖಾದ್ಯಗಳ ಪರಿಚಯ ಇಲ್ಲಿ ನೀಡಲಾಗಿದೆ.
ಬೇಕಾಗುವ ಸಾಮಗ್ರಿಗಳು: ಒಂದು ಚಿಕ್ಕ ಕಟ್ಟು ಪುಂಡಿಸೊಪ್ಪು ಒಂದು ಕಪ್ ತೊಗರಿಬೇಳೆ ಒಂದು ಚಮಚ ಜೀರಿಗೆ ಚಿಟಿಕೆ ಇಂಗು ಎರಡು ಹಸಿಮೆಣಸಿನಕಾಯಿ ಕೊತ್ತಂಬರಿ ಸೊಪ್ಪು ಕರಿಬೇವು ಎರಡು ಒಣ ಮೆಣಸಿನಕಾಯಿ ಸಾಸಿವೆ.
ಮಾಡುವುದು ಹೀಗೆ: ಪುಂಡಿಸೊಪ್ಪು, ಹಸಿಮೆಣಸಿನಕಾಯಿ ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ. ಒಂದು ಕುಕ್ಕರಿನಲ್ಲಿ ಕತ್ತರಿಸಿಟ್ಟುಕೊಂಡ ಪದಾರ್ಥಗಳು, ತೊಗರಿಬೇಳೆ, ಅರಿಶಿಣ, ಒಂದು ಚಮಚ ಎಣ್ಣೆ, ಎರಡು ಕಪ್ ನೀರು ಹಾಕಿ 4 ವಿಷಲ್ ಕೂಗಿಸಿ. ಬೇರೊಂದು ಬಾಣಲೆಯಲ್ಲಿ ಎಣ್ಣೆಗೆ ಸಾಸಿವೆ, ಜೀರಿಗೆ, ಅರಿಶಿಣ,ಕರಿಬೇವು, ಇಂಗು ಮತ್ತು ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿಕೊಂಡು ಬೆಂದ ಸೊಪ್ಪಿಗೆ ಹಾಕಿ. ಉಪ್ಪು, ಕೊತ್ತಂಬರಿ, ಕರಿಬೇವು ಹಾಕಿ ಕೈಯಾಡಿಸಿ.
| ಲತಾ ಜೋಶಿ ಬ್ಯಾಡಿಗಿ