ಪುಂಡಿ ಸೊಪ್ಪಿನ ವೈವಿಧ್ಯಗಳು: ಪುಂಡಿ ಸೊಪ್ಪಿನ ಚಟ್ನಿ

CHATNY
Published on

ಕಾಬೋಹೈಡ್ರೇಟ್, ಫೈಬರ್, ಪ್ರೊಟೀನ್, ವಿಟಮಿನ್ ಭಂಡಾರವೇ ಇರುವ ಪುಂಡಿ ಸೊಪ್ಪನ್ನು ಬಳಸಿಕೊಂಡು ಮಾಡಬಹುದಾದ ವಿವಿಧ ರುಚಿಕರ ಖಾದ್ಯಗಳ ಪರಿಚಯ ಇಲ್ಲಿ ನೀಡಲಾಗಿದೆ.

ಬೇಕಾಗುವ ಸಾಮಗ್ರಿಗಳು: ಒಂದು ದೊಡ್ಡ ಕಟ್ಟು ಪುಂಡಿ ಸೊಪ್ಪು 2 ಹಸಿಮೆಣಸಿನಕಾಯಿ  ಒಂದು ಚಮಚ ಜೀರಿಗೆ 2 ಎಸಳು ಬೆಳ್ಳುಳ್ಳಿ ಸೊಪ್ಪು ಕೊತ್ತಂಬರಿ ಕರಿಬೇವು ನಾಲ್ಕು ಚಮಚ ಎಳ್ಳು ಎರಡು ಚಮಚ ಉದ್ದಿನಬೇಳೆ ಎರಡು ಚಮಚ ಎಣ್ಣೆ.

ಮಾಡುವುದು ಹೀಗೆ: ಪುಂಡಿಸೊಪ್ಪನ್ನು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿ. ಒಂದು ಬಾಣಲೆಗೆ ಎಳ್ಳು, ಉದ್ದಿನಬೇಳೆ, ಕರಿಬೇವು ಹಾಕಿ ಹುರಿದುಕೊಂಡು ಪುಡಿ ಮಾಡಿಟ್ಟುಕೊಳ್ಳಿ. ಬಾಣಲೆೆಗೆ ಎಣ್ಣೆ, ಸಾಸಿವೆ, ಜೀರಿಗೆ ಹಾಕಿ ಹಸಿಮೆಣಸಿನಕಾಯಿ ಹಾಕಿ ಬಾಡಿಸಿ. ಅದಕ್ಕೆ ಪುಂಡಿಸೊಪ್ಪನ್ನು ಹಾಕಿ ಬಾಡಿಸಿ. ತಣ್ಣಗಾದ ನಂತರ ಅದಕ್ಕೆ ಪುಡಿ ಮಾಡಿಟ್ಟುಕೊಂಡ ಸಾಮಗ್ರಿ, ಉಪ್ಪು,ಬೆಳ್ಳುಳ್ಳಿ,ಕೊತ್ತಂಬರಿ, ಬೆಲ್ಲ ಹಾಕಿ ನುಣ್ಣಗೆ ರುಬ್ಬಿ. ಖಾರವಾದ ಪುಂಡಿಸೊಪ್ಪಿನ ಚಟ್ನಿ ರೆಡಿ.

| ಲತಾ ಜೋಶಿ ಬ್ಯಾಡಿಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net