

| ಎಚ್.ಡಿ. ಜಯಕುಮಾರ್
ಅರಕಲಗೂಡು ತಾಲೂಕು ಮಾದಾಪುರ ಗ್ರಾಮದವರಾದ ಎಂ.ಬಿ.ಪ್ರೀತಿ, ಬಸಪ್ಪ ಮತ್ತು ಜಯಮ್ಮ ದಂಪತಿಯ ಕೊನೇ ಮಗಳು. ಪ್ರಾಥಮಿಕ ಶಿಕ್ಷಣದಿಂದಲೂ ಓದಿನೊಂದಿಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಬಿಎ ಪದವಿ ಮಾಡುವಾಗಲೇ ಮದುವೆ ಪ್ರಸ್ತಾಪ ಬಂದಾಗ ವಿದ್ಯಾಭ್ಯಾಸ ಪೂರ್ಣಗೊಳಿಸಿ ನೌಕರಿಗೆ ಸೇರುವ ಆಸೆಯನ್ನು ತೆರೆದಿಟ್ಟಿದ್ದರು. ಎರಡೂ ಮನೆಯವರು ಒಪ್ಪಿಕೊಂಡಾಗ 2014ರ ಮಾರ್ಚ್ 27ರಂದು ಷಣ್ಮುಖ ಅವರೊಂದಿಗೆ ಮದುವೆಯಾಯಿತು. ಮದುವೆ ನಂತರ ಬಿಎಡ್ ಶಿಕ್ಷಣ ಪಡೆಯುವಾಗ ಆರು ತಿಂಗಳಲ್ಲೇ ಸೈನಿಕ ಸೇವೆ ಮಾಡಲು ಅರ್ಜಿ ಸಲ್ಲಿಸಿ ಆಯ್ಕೆಯಾಗಿ ಕುಟುಂಬದವರ ಒಪ್ಪಿಗೆ ಪಡೆದು ಭಾರತೀಯ ಸೇನೆಯ ಅಸ್ಸಾಂ ರೈಫಲ್ ಬೆಟಾಲಿಯನ್-9ಕ್ಕೆ ಸೇರ್ಪಡೆಗೊಂಡರು. ಅಸ್ಸಾಂನಲ್ಲಿ ಕರ್ತವ್ಯ ನಿರ್ವಹಿಸಿ ನಂತರ ವಿಶ್ವಸಂಸ್ಥೆ ಶಾಂತಿ ಸೇನಾಪಡೆ ಪರೀಕ್ಷೆಗೆ ಹಾಜರಾಗಿ 2020ರಲ್ಲಿ ಆಯ್ಕೆಯಾಗಿ ದೆಹಲಿಗೆ ತರಬೇತಿಗೆ ತೆರಳಿದರು.
ಪತ್ನಿ ಸೇನೆಗೆ ಸೇರುತ್ತೇನೆ ಎಂದಾಗ ಸ್ವಲ್ಪ ಆತಂಕವಾಯಿತು. ಪುಟ್ಟ ಮಕ್ಕಳು ಅಮ್ಮನನ್ನು ಬಿಟ್ಟು ಹೇಗಿರುತ್ತವೆ ಎಂದು ಯೋಚಿಸಿದ್ದೆ. ಆಕೆಯ ದೇಶಪ್ರೇಮಕ್ಕೆ ಸೋತು ಕಳುಹಿಸುವ ನಿರ್ಧಾರ ಮಾಡಿದೆ. ನನ್ನ ಮಡದಿ ದೇಶಸೇವೆ ಮಾಡುತ್ತಿದ್ದಾಳೆ ಎಂಬ ಹೆಮ್ಮೆ ಇದೆ. | ಷಣ್ಮುಖ ಪ್ರೀತಿ ಅವರ ಪತಿ