

ಅಮ್ಮನಿಂದ ಮೊದಲ ಮುತ್ತುಗಳು, ಅಪ್ಪನಿಂದ ತಪು್ಪಗಳನ್ನು ತಿದ್ದುವುದು, ಸ್ನೇಹಿತರಲ್ಲಿ ಇಷ್ಟವಾದ ಗುಣಗಳನ್ನು ಪ್ರೀತಿಸುವುದು, ಹತ್ತಿರವಾದವರ ಮೈನಸ್ ಪಾಯಿಂಟ್ಗಳನ್ನು ಮನಃಸ್ಪೂರ್ತಿಯಾಗಿ ಒಪ್ಪಿಕೊಳ್ಳುವುದು. ಈ ರೀತಿ ಮನುಷ್ಯ ತನ್ನ ಪ್ರೀತಿಯ ಪರಿಧಿಯನ್ನು ಬೆಳೆಸಿಕೊಳ್ಳುತ್ತಾನೆ (ಆದರೆ ಕೆಲ ಬಾರಿ ನಂಬಿದ ತತ್ತ್ವಗಳಿಗಾಗಿ ದೂರವಾಗುವುದಕ್ಕೆ ಹೇಸುವುದಿಲ್ಲ. ಆದರೆ ನೆನಪಿಡಿ ಅಭಿಪ್ರಾಯಭೇದಗಳೇ ಬೇರೆ, ವೈರತ್ವವೇ ಬೇರೆ). ‘ಭೇದಗಳಿಲ್ಲದ ಜಾಗದಲ್ಲಿ ಪ್ರೀತಿ ಬೆಳೆಯುತ್ತದೆ’. ಮಾನವ ಜೀವನದಲ್ಲಿ ಇಷ್ಟು ಆಳವಾಗಿ ಬೇರೂರಿರುವ ಈ ‘ಅನುಬಂಧ’ದ ಬಗ್ಗೆ, ಟೀನೇಜ್ ಪ್ರೀತಿಯಿಂದ ಬರುವ ಕಷ್ಟಗಳ ಕುರಿತು ಯಾವ ಕ್ಲಾಸ್ನಲ್ಲೂ ಮಕ್ಕಳಿಗೆ ಹೇಳದಿರುವುದು ದುರದೃಷ್ಟದ ವಿಷಯ. ಅಂತಹ ಪಾಠಗಳನ್ನು ಕಡೇಪಕ್ಷ ನಾನ್ ಡಿಟೇಲ್ಡ್ ಸಬ್ಜೆಕ್ಟ್ ಆಗಿ ಇಟ್ಟರೆ ಚೆನ್ನಾಗಿರುತ್ತದೆಂದು ಯಾರಾದರೂ ಪ್ರತಿಪಾದಿಸಿದರೆ ಟೀಕಾಕಾರರು ಉರಿದೇಳಬಹುದು. ಅಂತಹ ಭೇದಗಳಿಲ್ಲದ ಪೋಷಣೆಯೇ ಇಂದಿನ ಅಗತ್ಯ.
ಮಕ್ಕಳ ಪೋಷಣೆ ಒಂದು ಹೊರೆಯಲ್ಲ. ಅದು ಆಹ್ಲಾದಕರವಾದ, ಆನಂದದ ಅನುಭವ. ರಿಯಲ್ ಎಸ್ಟೇಟ್ ಬಿಸಿನೆಸ್ಗಿಂತಲೂ ಮಕ್ಕಳ ಪೋಷಣೆ ದೊಡ್ಡ ಬಿಸಿನೆಸ್. ಆದರೆ ಇದಕ್ಕೆ ಬೇಕಾದ ಬಂಡವಾಳ ದುಡ್ಡಲ್ಲ- ಮಮತೆ, ವಾತ್ಸಲ್ಯ! ಈ ಬಿಸಿನೆಸ್ನಿಂದ ಬರುವ ಲಾಭವೂ ದುಡ್ಡಲ್ಲ- ಅನಂದ, ಸಂತೋಷ, ತೃಪ್ತಿ ನೀಡುವ ಒಂದು ಅದ್ಭುತವಾದ ಫೀಲಿಂಗ್.
ವ್ಯಾಪಾರ, ರಾಜಕಾರಣ (ಅಥವಾ ನೌಕರಿಯಲ್ಲಿ ಲಂಚಕೋರ ಆಗಿದ್ದಲ್ಲಿ) ಹೊರತುಪಡಿಸಿ, ಬೇರೆ ಮಾರ್ಗದಲ್ಲಿ ಕೋಟ್ಯಧೀಶನಾಗುವುದು ಅಸಾಧ್ಯ ಎನ್ನುವುದು ನಮ್ಮ ಅಭಿಪ್ರಾಯ. ಆದರೆ ಯಾವ ತಂದೆ-ತಾಯಿಯೂ ಮಕ್ಕಳು ಲಂಚಕೋರರಾಗಿ, ಮಾಫಿಯಾ ಲೀಡರ್ಗಳಾಗಿ ಬೆಳೆಯಲಿ ಎಂದುಕೊಳ್ಳುವುದಿಲ್ಲ. ಚೆನ್ನಾಗಿ ಓದಿ ಒಳ್ಳೆಯ ನೌಕರಿ ಗಳಿಸಿ, ಬದುಕಿನಲ್ಲಿ ಸಂತೋಷವಾಗಿ ಸೆಟ್ಲ್ ಆಗಲಿ ಎಂದು ಬಯಸುತ್ತಾರೆ. ವಿದ್ಯೆಯ ಮೂಲಕವೂ ಧನವಂತರಾಗಬಹುದು. ‘ವಿದ್ಯೆ ನಿಗೂಢವಾದ ಗುಪ್ತಬಿತ್ತನೆ’ ಎಂದು ಅದಕ್ಕೇ ಹೇಳುತ್ತಾರೆ.
‘ಇಷ್ಟು ಹೇಳಿದಿರಲ್ಲ, ನಿಮ್ಮ ಮಕ್ಕಳನ್ನು ಹೀಗೇ ಬೆಳೆಸಿದಿರೇನು?’ ಎಂದು ನೀವು ಪ್ರಶ್ನೆ ಮಾಡಬಹುದು. ನಾನಲ್ಲ. ನನ್ನ ತಂದೆ ಹೀಗೆ ಬೆಳೆಸಿದರು.
ಗೋದಾವರಿ ದಡದ ವಿಗುತ್ತೆನದೀ ಎಂಬ ಹಳ್ಳಿಯಲ್ಲಿ ನಮ್ಮ ತಾತ ಸ್ಕೂಲ್ ಗುಮಾಸ್ತರಾಗಿದ್ದರಂತೆ. ನಮ್ಮ ತಂದೆಗೆ ಎಂಟು ವರ್ಷವಾಗಿದ್ದಾಗ ತಾತ ನಿಧನ ಹೊಂದಿದರು. ಆ ದಿನಗಳಲ್ಲಿ ರಾಜಮಂಡ್ರಿಯಲ್ಲಿ ಸೀತಾರಾಮಯ್ಯ ಎಂಬೊಬ್ಬ ದಯಾರ್ದ್ರ ಹೃದಯದವರು ಅನಾಥ ಮಕ್ಕಳಿಗೆ ಆಸರೆ ಇತ್ತು ವಿದ್ಯೆ ಕಲಿಸುತ್ತಿದ್ದರು. ತಂದೆ ಅಲ್ಲಿ ಸೇರಿಕೊಂಡರು. ನಮ್ಮ ವಂಶದಲ್ಲಿ ಅವರೇ ಮೊದಲನೆಯ ಪದವೀಧರರು. ಪೋಷಿಸಲು ಆಗದೆ ನನ್ನನ್ನು ನಮ್ಮಮ್ಮನ ತಂದೆಯ (ತಾತ) ಬಳಿ ಬಿಟ್ಟರು. ನಾನು ವಿಶೇಷ ಬುದ್ಧಿವಂತನೇನಲ್ಲ. ಜೊತೆಯಲ್ಲಿ ತಾತನ ಅಕ್ಕರೆ. ಅದರಿಂದ ಐದು, ಆರನೇ ಕ್ಲಾಸ್ನಲ್ಲಿ ಫೇಲಾಗಿದ್ದೆ. ಆರನೆ ತರಗತಿಯಲ್ಲಿದ್ದಾಗ ತಾತ ತೀರಿಕೊಂಡಿದ್ದರಿಂದ ಅಪ್ಪನ ಬಳಿಗೆ ಬಂದೆ. ಆಗ ಅವರ ಆರ್ಥಿಕ ಪರಿಸ್ಥಿತಿ ಹೇಳಿಕೊಳ್ಳುವಂತೇನೂ ಇರಲಿಲ್ಲ. ಟೇಬಲ್ ಫ್ಯಾನ್ ಕೊಂಡಾಗ ನಮ್ಮಮ್ಮ ತೆಂಗಿನಕಾಯಿ ಒಡೆದಿದ್ದು ಇನ್ನೂ ನೆನಪಿದೆ.
ಅನಂತಪುರದಲ್ಲಿ, ಮನೆಯ ಅಂಗಳದಲ್ಲಿ ಕುಳ್ಳಿರಿಸಿ, ಬೀದಿಯ ಎಲ್ಲ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತಿದ್ದರು ನನ್ನ ತಂದೆ. ತಂದೆಯ ಪೋಷಣೆಯಿಂದ ನನ್ನ ದೆಶೆ ಬದಲಾಯ್ತು. ಏಳನೇ ತರಗತಿ ಪಾಸಾದವನು ನಂತರ ಹಿಂತಿರುಗಿ ನೋಡಲಿಲ್ಲ. ಕಾಕಿನಾಡಾದಲ್ಲಿ ಪಿ.ಆರ್.ಕಾಲೇಜಿಗೆ ಬಿ.ಕಾಂ.ನಲ್ಲಿ ಮೊದಲಿಗನಾಗಿ ಪಾಸಾದರೂ ವಿಶಾಖಪಟ್ಟಣಕ್ಕೆ ಹೋಗಿ ಎಂ.ಕಾಂ ಓದುವುದಕ್ಕೆ ದುಡ್ಡಿರದಿದ್ದರಿಂದ ಇದ್ದ ಊರಿನಲ್ಲೇ ಸಿ.ಎ. (ಆ ಕೋರ್ಸ್ ಫೀಸು ಆಗ 1,200 ರೂ.) ಓದಿದೆ. ನಾಲ್ಕು ವರ್ಷದ ಕೋರ್ಸ ಮೂರೇ ವರ್ಷದಲ್ಲಿ ಮುಗಿಯಿತು. ಒಬ್ಬ ಕಿರಿಯನ ಬದುಕಿನಲ್ಲಿ ಮನೆಯ ಹಿರಿಯರ ಸಾರಥ್ಯ ಹೇಗಿರುತ್ತದೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ?
ವಿವಾಹವಾದ ದಿನಗಳಲ್ಲಿ ಸಿಂಗಲ್ ಬೆಡ್ರೂಂ ಮನೆಯಲ್ಲಿ ಆರು ಮಂದಿ ಇದ್ದೆವು. ದುಡ್ಡು ಖಂಡಿತವಾಗಿಯೂ ಸಂತೋಷ ಕೊಡುತ್ತದೆ ಎಂಬ ಕಾನೂನು ಇಲ್ಲವಾದರೂ, ಸಂತೋಷ ಬೇಕೆಂದರೆ ದುಡ್ಡೂ ಬೇಕು. ಇದನ್ನೂ ಓದಿ: ಈ 5 ವರ್ಷದ ಬಾಲಕ ಅಮ್ಮನ ಜೀವ ಉಳಿಸಿದ್ದು ‘ಆಟಿಕೆ ಆ್ಯಂಬುಲೆನ್ಸ್’ನಿಂದ; ಸಮಯಪ್ರಜ್ಞೆಗೆ ಶ್ಲಾಘನೆ
ಆತ್ಮಪ್ರಶಂಸೆಗೆ ಹೇಳುತ್ತಿಲ್ಲ, ತಂದೆಯ ರೀತಿಯಲ್ಲೇ ನಾನು ನನ್ನ ಮಗನನ್ನು ಬೆಳೆಸಿದೆ. ಸ್ವತಃ ಸಿನಿಮಾಗಳಲ್ಲಿ ಬಿಜಿ ಆಗಿದ್ದರೂ ವಾರಕ್ಕೊಂದು ಬಾರಿ ಅವನ ಜೊತೆ ಕುಳಿತು ಅವನೇನು ಓದುತ್ತಿದ್ದಾನೆ ಎಂದು ರ್ಚಚಿಸುತ್ತಿದ್ದೆ. ಅವನು ಇಂಟರ್ಸ್ಟೇಟ್ ರ್ಯಾಂಕರ್. ಪಾಕೆಟ್ವುನಿ ಕಾನ್ಸೆಪ್ಟನ್ನು ತಂದೆ ನನಗೆ ಕಲಿಸಿದರು. ಖಮ್ಮಂನಲ್ಲಿ ಎಂಟನೆಯ ತರಗತಿಯಲ್ಲಿ ಓದುತ್ತ ಸಣ್ಣಮಕ್ಕಳಿಗೆ ಟ್ಯೂಷನ್ ಹೇಳಿ ದುಡ್ಡು ಸಂಪಾದಿಸುತ್ತಿದ್ದೆ. ಪಿಯುಸಿ ಆದ ಮೇಲೆ ನನ್ನ ಮಗ ನಾಗಾರ್ಜುನ ಪವರ್ ಪ್ರಾಜೆಕ್ಟ್ನಲ್ಲಿ ಇಂಡಸ್ಟ್ರಿಯಲ್ ಟ್ರೇನಿಯಾಗಿ -ಠಿ; 1500ಕ್ಕೆ ಕೆಲಸ ಮಾಡುತ್ತ, ಸಂಜೆ ಹೊತ್ತು ಮನೆ ಪಕ್ಕದಲ್ಲೇ ಇದ್ದ ಕಾಲೇಜ್ನಲ್ಲಿ ಬಿಕಾಂ ಓದಿದ. ಯೂನಿವರ್ಸಿಟಿ ಥರ್ಡ್ ರ್ಯಾಂಕರ್. ಇಪ್ಪತ್ತೆರಡನೇ ವಯಸ್ಸಿಗೇ ಸಿ.ಎ. ಪೂರ್ತಿ ಮಾಡಿ (ಈ ಮುಂಚೆ ನಾಲ್ಕು ವರ್ಷಗಳ ಅನುಭವ ಇದ್ದುದರಿಂದ) ಐಐಟಿ, ಪಿಎಚ್ಡಿಗಳ ಜೊತೆ ಸ್ಪರ್ಧಿಸಿ ವಿಶ್ವಬ್ಯಾಂಕ್ನಲ್ಲಿ ನೌಕರಿ ಗಳಿಸಿದ. ಕೆಲ ಕಾಲ ಕೆಲಸ ಮಾಡಿದ ನಂತರ ಎಂ.ಬಿ.ಎ ಓದಿ ಈಗ ಒಂದು ಕಂಪನಿಯ ಎಂ.ಡಿ. ಆಗಿ ವರ್ಷಕ್ಕೆ ಮೂರು ಕೋಟಿ ರೂ. ಸಂಪಾದನೆ ಮಾಡುತ್ತಿದ್ದಾನೆ. ಅವನ ಹೆಂಡತಿ ಚಾರ್ಟೆರ್ಡ್ ಅಕೌಂಟೆನ್ಸಿಯಲ್ಲಿ ಆಲ್ ಇಂಡಿಯಾ ಟಾಪ್ ರ್ಯಾಂಕರ್. ಮೊಮ್ಮಗ ಟೆನ್ನಿಸ್ನಲ್ಲಿ ತನ್ನ ದೇಶದ (ವಿಯೆಟ್ನಾಂ) ಪರವಾಗಿ ಸಿಂಗಾಪುರಕ್ಕೆ ಹೋದನು. ಪಿಯಾನೋದಲ್ಲಿ ಪ್ರಾವೀಣ್ಯ ಗಳಿಸಿದ್ದಾನೆ. ಇಂಟರ್ನ್ಯಾಷನಲ್ ಒಲಂಪಿಯಾಡ್ನಲ್ಲಿ ಗೋಲ್ಡ್ ಮೆಡಲಿಸ್ಟ್. ಏಷ್ಯಾ ಅಬಾಕಸ್ ಸಲುವಾಗಿ ರಷ್ಯಾಗೆ ಹೋದಾಗ, ಅವನ ವಯಸ್ಸು ಹನ್ನೆರಡು ವರ್ಷ. ಬರ್ತ್ಡೇ ಆಚರಿಸಿಕೊಳ್ಳದೆ ಆ ದುಡ್ಡನ್ನು ಚಾರಿಟೀಸ್ಗೆ ಕೊಡುತ್ತಾನೆ.
ವಾರಾನ್ನ ಮಾಡಿಕೊಂಡು ಓದಿದ ಒಬ್ಬ ತಂದೆಯ ವಂಶ ಮೂರು ತಲೆಮಾರಿನಲ್ಲಿ ಹೇಗೆ ಬದಲಾಯಿತು ಎಂಬುದನ್ನು ನೋಡಿದಿರಿ. ವಂಶದಲ್ಲಿ ಒಬ್ಬರು ಉದ್ಧಾರವಾದರೆ ಇಡೀ ವಂಶಕ್ಕೆ ಅದು ಟರ್ನಿಂಗ್ ಪಾಯಿಂಟ್. ಸಿಂಗಲ್ ಬೆಡ್ರೂಂ ಮನೆಯಿಂದ ಸ್ವಿಮಿಂಗ್ಪೂಲ್ ವಿಲ್ಲಾಗೆ ಬದಲಾಗುತ್ತದೆ ಎಂದು ಹೇಳುವುದಕ್ಕೆ ಈ ಸ್ವಂತ ವಿಷಯ ಹೇಳಿದೆ. ಹೌದೇ, ಅಲ್ಲವೇ? ಯೋಚಿಸಿ ನೋಡಿ.
ಮನುಷ್ಯ ಉದ್ಧಾರವಾಗದಿರುವುದಕ್ಕೆ ದುಡ್ಡಿಲ್ಲದಿರುವುದು ಕಾರಣವಲ್ಲ. ಶ್ರದ್ಧೆ ಇಲ್ಲದಿರುವುದು ಕಾರಣ. ಒಳ್ಳೆಯ ಪೋಷಣೆ ಬ್ರಹ್ಮವಿದ್ಯೆಯೇನೂ ಅಲ್ಲ. ಬೇರೆಲ್ಲ ಆಸಕ್ತಿಗಳಿಗಿಂತ (ಮುಖ್ಯವಾಗಿ ಟಿ.ವಿ ನೋಡುವುದಕ್ಕಿಂತ) ಅದು ನಿಜವಾಗಿ ಚೆನ್ನಾಗಿರುತ್ತದೆ. ಅದಕ್ಕೆ ಬಂಡವಾಳವೇನೂ ಬೇಕಾಗಿಲ್ಲ. ಮಕ್ಕಳನ್ನು ಬೆಳೆಸುವ ಬಗ್ಗೆ ಒಂದು ‘ಪ್ಯಾಷನ್’ ಇರಬೇಕಷ್ಟೇ. ಇದನ್ನೂ ಓದಿ: ಅವಾಕ್ಸ್ ಖರೀದಿಗೆ 147.81 ಶತಕೋಟಿ ಡಿಫೆನ್ಸ್ ಡೀಲ್?| 200 ಟ್ಯಾಕ್ಟಿಕಲ್ ಡ್ರೋನ್ಗಳು ಸೇರಲಿವೆ ಸೇನೆ
ಕೊನೆಯಲ್ಲಿ ಒಂದು ಮಾತು. ಮಕ್ಕಳ ಹೊರಗಿನ ನಡವಳಿಕೆ ಕಂಡು ಒಂದು ನಿರ್ಣಯಕ್ಕೆ ಬರಬೇಡಿ. ಅವರ ಒಳಮನಸ್ಸೆಲ್ಲ ಪ್ರೀತಿಭರಿತ, ಸ್ನೇಹಭಾವದಿಂದ ತಹತಹಿಸುತ್ತ ಇರುತ್ತದೆ. ನಿಮ್ಮ ಬಗ್ಗೆ ಅವರಿಗೆ ಗೌರವ ಇರುತ್ತದೆ. ಅವಾಜ್ಯವಾದ ಪ್ರೀತಿ ಇರುತ್ತದೆ. ಆದರೆ ನೀವು ಮಾಡುವ ತಪ್ಪನ್ನು ಅವರು ಗಮನಿಸುತ್ತಾರೆ. ತಾವು ಹೋಗದಿದ್ದರೂ, ನೀವು ಕ್ಲಬ್ಗಳಿಗೆ, ಇಸ್ಪೀಟ್ಗೆ, ಟಿ.ವಿ.ಗೆ ಕೊಡುವ ಪ್ರಾಮುಖ್ಯವನ್ನು ಕೂಡ ಗಮನಿಸುತ್ತಾರೆ. ಆದರೂ ನಿಮ್ಮನ್ನು ಕ್ಷಮಿಸುತ್ತಾರೆ.
ಇಸ್ಪೀಟು, ಸ್ನೇಹವೃಂದ, ಕುಡಿತ... ಇಷ್ಟು ದೊಡ್ಡ ವಯಸ್ಸಿನಲ್ಲೂ ಜವಾಬ್ದಾರಿ ಮರೆತು ನಡೆಯುತ್ತಿದ್ದರೂ, ಅವರು ಆ ಸಣ್ಣವಯಸ್ಸಿನಲ್ಲಿ ಮಾಡುವ ತಪ್ಪುಗಳಿಗೆ ಚೇಷ್ಟೆ, ಹಟಮಾರಿತನ ಎಂದು ಹೆಸರಿಟ್ಟು, ಕೇವಲ ದೈಹಿಕ ಬಲ, ಆರ್ಥಿಕ ಬಲ ಇದೆ ಎಂಬ ಕಾರಣಕ್ಕೆ ಮಕ್ಕಳನ್ನು ಶಿಕ್ಷಿಸುವುದು ಸಮಂಜಸವೇ? ‘ಶಿಸ್ತಿನ ಅಗತ್ಯವಿಲ್ಲ’ ಎಂದು ಹೇಳುವುದು ಇಲ್ಲಿನ ಉದ್ದೇಶವಲ್ಲ. ಇಪ್ಪತೆôದರ ಮಗನ ಹೆಗಲ ಮೇಲೆ ಕೈ ಹಾಕಿ ಅಪ್ಪ ಮಾತನಾಡುವುದು ಒಂದು ಅದ್ಭುತ ಪ್ರೀತಿಯ ಪ್ರಕಟಣೆ.
ಆಕಾಶದ ಮೇಲೆ ಬೆಳದಿಂಗಳ ದುಪ್ಪಟಿ ಹಾಕಿದರೆ
ಚಂದಮಾಮ ತಲೆದಿಂಬು... ಜೀವನ.
ಅಮ್ಮನ ಒಡಲ ಪಕ್ಕದಲ್ಲಿ ಪ್ರೀತಿಯ ದುಪ್ಪಟಿ ಹಾಸಿದರೆ
ಅಪ್ಪನ ಕೈ ತಲೆದಿಂಬು... ಬಾಲ್ಯ.