More

    ಅವಾಕ್ಸ್​ ಖರೀದಿಗೆ 147.81 ಶತಕೋಟಿ ಡಿಫೆನ್ಸ್ ಡೀಲ್?| 200 ಟ್ಯಾಕ್ಟಿಕಲ್​ ಡ್ರೋನ್​ಗಳು ಸೇರಲಿವೆ ಸೇನೆ

    ನವದೆಹಲಿ: ಜಮ್ಮು-ಕಾಶ್ಮೀರದ ಗಡಿಭಾಗದಲ್ಲಿ ಚೀನಾ, ಪಾಕ್​ಗಳ ಕಿರಿಕಿರಿ ಮುಂದುವರಿದಿರುವಂತೆಯೇ ಭಾರತ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಕೆಲಸವನ್ನೂ ಮುಂದುವರಿಸಿದೆ. ಅಕಸ್ಮಾತ್ ವಾಯು ಸಮರ ಏರ್ಪಟ್ಟರೆ ಭಾರತದ ಬಳಿ ಇರುವಂತಹ ಫಾಲ್ಕೋನ್ ಅವಾಕ್ಸ್​ ಸಂಖ್ಯೆ 3 ಮಾತ್ರ. ವಾಯು ಸಮರದಲ್ಲಿ ಇದು ಮಹತ್ವದ್ದಾಗಿದ್ದು, ಚೀನಾ ಮತ್ತು ಪಾಕಿಸ್ತಾನದ ಬಳಿ ಇವು ಹೆಚ್ಚಿವೆ. ಹೀಗಾಗಿ, ಇನ್ನೂ ಎರಡು ಫಾಲ್ಕೋನ್ ಅವಾಕ್ಸ್ ಖರೀದಿಗೆ ಭಾರತ ಚಿಂತನೆ ನಡೆಸಿದೆ.

    ಲಭ್ಯ ಮಾಹಿತಿ ಪ್ರಕಾರ, 147.81 ಶತ ಕೋಟಿ ರೂಪಾಯಿ ಮೌಲ್ಯದ ಫಾಲ್ಕೋನ್ ಅವಾಕ್ಸ್​ ( PHALCON airborne warning and control systems (AWACS) )ಖರೀದಿಗೆ ಇಸ್ರೇಲ್ ಜತೆಗೆ ಡೀಲ್ ಒಂದಕ್ಕೆ ಶೀಘ್ರವೇ ಭಾರತ ಸಹಿಹಾಕಲಿದೆ. ಇದರ ಪ್ರಸ್ತಾವನೆಗೆ ಕೇಂದ್ರ ಮುಂದಿನ ವಾರ ಅನುಮತಿ ನೀಡುವ ನಿರೀಕ್ಷೆ ಇದೆ. ಇದಕ್ಕೆ ಸಂಬಂಧಿಸಿದ ಒಟ್ಟು ಪ್ರಕ್ರಿಯೆ ಬಗ್ಗೆ ಭಾರತ ಸರ್ಕಾರ ಯಾವುದೇ ಸುಳಿವು ಬಹಿರಂಗಪಡಿಸಿಲ್ಲ. ಕಳೆದ ವಾರವೇ ರಕ್ಷಣಾ ಕ್ಯಾಬಿನೆಟ್ ಸಮಿತಿಗೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ, ಕೆಲವೊಂದು ಸ್ಪಷ್ಟೀಕರಣ ಬಯಸಿ ಸಮಿತಿಯು ಆ ಪ್ರಸ್ತಾವನೆಯನ್ನು ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್ ಅಜಿತ್ ದೋವಲ್ ಅವರಿಗೆ ಹಿಂದಿರುಗಿಸಿತ್ತು.

    ಇದನ್ನೂ ಓದಿ: ತಂದೆಯನ್ನು ಕೊಂದ ಮಗನ ಬಂಧನ, 2 ತಿಂಗಳ ಹಿಂದೆಯೇ ಸ್ಕೆಚ್ ಹಾಕಿದ್ದ ಆರೋಪಿ

    ಅವಾಕ್ಸ್ ಬಲಾಬಲ

    ಚೀನಾ – 28
    ಪಾಕಿಸ್ತಾನ – 7
    ಭಾರತ – 3

    ಯಾವಾಗ ಭಾರತಕ್ಕೆ?
    ಫಾಲ್ಕೋನ್ ರಾಡಾರ್​ ಮೌಲ್ಯ ಸರಿ ಸುಮಾರು 73.88 ಶತಕೋಟಿ ರೂಪಾಯಿ ಆಗಿದ್ದು, ಅದಕ್ಕೆ ಸಂಬಂಧಿಸಿದ ಪ್ಲಾಟ್​ಫಾರಂ ಖರೀದಿಸುವುದಾದರೆ ಅಂದರೆ ಈ ಪ್ರಕರಣದಲ್ಲಿ ರಷ್ಯನ್ ಎ-50 ವಿಮಾನಕ್ಕೆ ಮತ್ತೆ 73.88 ಶತಕೋಟಿ ರೂಪಾಯಿ ಬೇಕಾದೀತು. ರಾಡಾರ್ ಮತ್ತು ಪ್ಲಾಟ್​ಫಾರಂ ಅನ್ನು ಜೋಡಿಸುವ ಕೆಲಸ ಇಸ್ರೇಲ್​ನಲ್ಲಿ ನಡೆಯಲಿದೆ. ಸಂಪೂರ್ಣ ವ್ಯವಸ್ಥೆ ಭಾರತಕ್ಕೆ ಹಸ್ತಾಂತರವಾಗಲು ಇನ್ನೂ ಎರಡು-ಮೂರು ವರ್ಷ ಬೇಕಾದೀತು.

    ಇದನ್ನೂ ಓದಿ: ‘ಗ್ರೂಪ್ ಆಫ್​ 23’ ಮೇಲೆ ‘ಕೈ’ಕಮಾಂಡ್​ ಸರ್ಜಿಕಲ್ ಸ್ಟ್ರೈಕ್​ !: ಸಿಬಲ್​ ಕಳವಳ

    200 ಟ್ಯಾಕ್ಟಿಕಲ್ ಡ್ರೋನ್​ಗಳು
    ಭಾರತೀಯ ಸೇನೆ ತನ್ನ ಬೆಟಾಲಿಯನ್​ ಕಮಾಂಡರ್ಸ್​ಗೆ 200 ಟ್ಯಾಕ್ಟಿಕಲ್​ ಡ್ರೋನ್​ಗಳನ್ನು ಖರೀದಿಸಲಿದೆ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗೆ ಈಗಾಗಲೇ ಚಾಲನೆ ಸಿಕ್ಕಿದೆ. ಈ ಡ್ರೋನ್​ಗಳನ್ನು ಡಿಆರ್​ಡಿಒ ಸಹಕಾರದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಪ್ರಯೋಗಗಳು ನಡೆಯುತ್ತಿವೆ. (ಏಜೆನ್ಸೀಸ್)

    ಐಟಿ ಕೇಸ್​​ಗೆ ತಡೆ ನೀಡಲು ಸುಪ್ರೀಂ ನಕಾರ: ಡಿಕೆಶಿಗೆ ಹಿನ್ನಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts