ಕಂಗಳು ಕಂಗೊಳಿಸಲಿ…; ಐ ಮೇಕಪ್..

Eyes
Published on

ಐ ಮೇಕಪ್ ಬಗ್ಗೆ ವಿಶೇಷ ಕಾಳಜಿವಹಿಸುವುದು ಹೆಣ್ಣುಮಕ್ಕಳಿಗೆ ಪೂರ್ವಿಕರಿಂದ ಬಂದ ಬಳುವಳಿ. ಹಾಗೇ ಮುಂದುವರಿದು ಬಂದ ಪರಂಪರೆ ಐ ಮೇಕಪ್​ವರೆಗೆ ಬಂದು ನಿಂತಿದೆ. ಹೌದು ಇಂದು ಐ ಮೇಕಪ್ ಅರ್ಥಾತ್ ಕಣ್ಣಿನ ಅಲಂಕಾರ ಟ್ರೆಂಡಿಯಾಗಿದೆ. ರ‍್ಯಾಂಪ್ ಮೇಲೆ ಬಳ್ಳಿಯಂತೆ ಬಳಕುವ ಬೆಕ್ಕಿನ ನಡಿಗೆಯ ಹುಡುಗಿಯರಿಂದ ಹಿಡಿದು ಸಾಮಾನ್ಯ ಗೃಹಿಣಿಯರವರೆಗೂ ಐ ಮೇಕಪ್ ಮೇನಿಯಾ ಶುರುವಾಗಿದೆ.

ನಿಮಗೆಲ್ಲ ಗೊತ್ತಿರುವ ಹಾಗೆ ಮೊದಲೆಲ್ಲಾ ಮೇಕಪ್ ಎಂದರೆ ಮುಖಕ್ಕೆ ಕ್ರೀಮ್ ಕಣ್ಣಿಗೆ ಕಾಡಿಗೆ, ತುಟಿಗೆ ಲಿಪ್​ಸ್ಟಿಕ್, ಹೆಚ್ಚೆಂದರೆ ಕೆನ್ನೆಗೊಂದಿಷ್ಟು ರೋಸ್ ಪೌಡರ್ ಹಾಕಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ಅಂತೆಯೇ ಮೇಕಪ್​ನಲ್ಲಿಯೂ ಬದಲಾವಣೆಗಳಾಗಿವೆ. ಬ್ರೆಡಲ್ ಮೇಕಪ್, ಸೆಲೆಬ್ರಿಟಿ ಮೇಕಪ್, ಇಂಟರ್​ನ್ಯಾಷನಲ್ ಮೇಕಪ್ ಹೀಗೆ ಮೇಕಪ್​ಗಳ ಸಾಲೇ ಇದೆ. ಆದರೆ ಇದರಲ್ಲಿ ಐ ಆಂಡ್ ಲಿಪ್ ಮೇಕಪ್​ಗೆ ಮಾತ್ರ ವಿಶೇಷ ಆದ್ಯತೆ ಕೊಡಲಾಗಿದೆ.

ಹೀಗೆ ಮಾಡಿ...: ಬ್ಯೂಟಿ ಪಾರ್ಲರ್​ಗಳಲ್ಲಿ ಐ ಮೇಕಪ್ ಕ್ಲಾಸ್​ಗಳೂ ಆರಂಭವಾಗಿವೆ. ಒಮ್ಮೆ ಇಲ್ಲಿ ಕಲಿತರೆ, ನಂತರ ನೀವೇ ಸ್ವತಃ ಮಾಡಿಕೊಳ್ಳಲು ಅನುಕೂಲವಾಗುತ್ತದೆ.

  • ಹುಬ್ಬುಗಳಿಗೆ ಸರಿಯಾದ ಶೇಪ್ ಕೊಟ್ಟರೆ ಮಾತ್ರ ಐ ಮೇಕಪ್ ಚೆನ್ನಾಗಿ ಕಾಣುವುದು.
  • ಗ್ಲಿಟ್ಟರ್, ಸ್ಟೋನ್, ಜಿಗ್ ನಂತರ ಆರ್ಟಿಫಿಶಿಯಲ್ ರೆಪ್ಪೆಗಳು ಬಂದಿದ್ದು, ರೆಪ್ಪೆ ಡಿಫರೆಂಟ್ ಆಗಿ ಕಾಣಬೇಕೆನ್ನುವವರು ಇದನ್ನು ಬಳಸಬಹುದು. ್ಝ ಕಣ್ಣಿನ ಕೆಳಗೆ ಬಣ್ಣ ಹಾಕುವ ಸಾಹಸಕ್ಕೆ ಹೋಗಬೇಡಿ.
  • ಕಣ್ಣಿನ ಅಲಂಕಾರಕ್ಕೆಂದೇ ಡಿಫರೆಂಟ್ ಬ್ರಷ್​ಗಳು ಬಂದಿವೆ. ಆದರೆ ಬ್ರಷ್ ಉಪಯೋಗಿಸುವುದಕ್ಕಿಂತ ಆದಷ್ಟು ಸ್ಪಾಂಜ್ ಅಪ್ಲಿಕೇಟರ್​ಗಳನ್ನು ಬಳಸಿ.
  • ನೀವು ಯಾವ ಕಲರ್ ಅನ್ನು ಕಣ್ಣಿಗೆ ಹಾಕುತ್ತೀರೋ, ಅದೇ ಕಲರ್​ನ ಬ್ರಷ್​ಗಳನ್ನು ಉಪಯೋಗಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net