

| ರವಿಕಾಂತ ಕುಂದಾಪುರ
ಹೊರಗಡೆ ಎಲ್ಲಿಗೆ ಹೋದರೂ ಮಾಸ್ಕ್ ಹಾಕಿಕೊಂಡಿರಬೇಕು, ಯಾರನ್ನೇ ಭೇಟಿಯಾದರೂ ಅಂತರ ಕಾಪಾಡಿಕೊಳ್ಳಬೇಕು. ಹೋದಲ್ಲೆಲ್ಲ ಸ್ಯಾನಿಟೈಸರ್ ಹಾಕಿಕೊಳ್ಳಬೇಕು, ಥರ್ಮಲ್ ಚೆಕಪ್ಗೆ ಕೈಯೊಡ್ಡಬೇಕು. ಇಷ್ಟೆಲ್ಲ ಮುಂಜಾಗ್ರತೆ ವಹಿಸಿ ಹೊರಗೆ ಹೋಗಿ ಬಂದರೂ ಮನೆಗೆ ಬಂದ ತಕ್ಷಣ ಬಟ್ಟೆಯನ್ನು ಒಗೆಯಲು ಹಾಕಿ, ಸ್ನಾನ ಮಾಡಿದರಷ್ಟೇ ನಿರಾಳತೆ. ಇಲ್ಲದಿದ್ದರೆ ಮನಸಲ್ಲಿ ಒಂದು ಅಳುಕು. ಇದೇ ಕಾರಣಕ್ಕೆ ಎಷ್ಟೋ ಜನ ಹೊರಗೆ ಹೋಗುವುದನ್ನೇ ಬಿಟ್ಟಿದ್ದಾರೆ. ಹೀಗಿದ್ರೂ ಇಲ್ಲೊಂದು ‘ರೂಮ್ನಲ್ಲಿ ಮಾತ್ರ ನೂರಾರು ಮಂದಿ ಯಾವುದೇ ಅಳುಕಿಲ್ಲದೆ, ಮಾಸ್ಕ್- ಸ್ಯಾನಿಟೈಸರ್, ವೈಯಕ್ತಿಕ ಅಂತರದ ಗೋಜಿಲ್ಲದೆ ನಿರಾತಂಕವಾಗಿ ಸೇರಿ ಮಾತನಾಡುತ್ತಾರೆ!
ಹೌದು.. ಮನೆಯೊಳಗೇ ಒಬ್ಬರಿಂದ ಒಬ್ಬರು ದೂರ ಇರಬೇಕಾದ ಪರಿಸ್ಥಿತಿಯಲ್ಲಿ ಒಂದು ‘ರೂಮ್ನಲ್ಲಿ ನೂರಾರು ಮಂದಿ ನಿರಾಳವಾಗಿ ಸೇರಬಹುದಾದ ಸೌಲಭ್ಯವನ್ನು ‘ಕ್ಲಬ್ಹೌಸ್’ ಎಂಬ ಆಪ್ ಒದಗಿಸಿದೆ. ಇದೀಗ ಎಷ್ಟರಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದೆ ಎಂದರೆ, ತಡರಾತ್ರಿ ನಿದ್ದೆ ಬರುತ್ತಿಲ್ಲ ಅಥವಾ ತುಂಬಾ ಬೋರಾಗುತ್ತಿದೆ ಅನಿಸಿದಾಗ ಒಮ್ಮೆ ‘ಕ್ಲಬ್ಹೌಸ್’ ಓಪನ್ ಮಾಡಿ ನೋಡಿದರೆ ಅಲ್ಲಿ ಆಗಲೂ ಬಹಳಷ್ಟು ಮಂದಿ ಮಾತನಾಡುತ್ತಿರುತ್ತಾರೆ. ಆಸಕ್ತಿ ಇದ್ದರೆ ನಾವೂ ಕೈಯೆತ್ತಿ ಮಾತನಾಡಬಹುದು, ಇಲ್ಲವೇ ಅಲ್ಲಿನ ಮಾತುಗಳನ್ನು ಕೇಳುತ್ತ ಹಾಗೆಯೇ ನಿದ್ರೆಗೆ ಜಾರಬಹುದು.
ಮತ್ತದೇ ಮುದ: ಕಳೆದುಕೊಂಡಿದ್ದ ಆ ಮಾತುಕತೆ, ಮೆಚ್ಚುಗೆಯ ಮಾತು, ಅಭಿಮಾನದ ನುಡಿ ಎಲ್ಲವನ್ನೂ ಈ ಕ್ಲಬ್ಹೌಸ್ ಈಗ ಸ್ವಲ್ಪಮಟ್ಟಿಗೆ ಮರಳಿ ಸಿಗುವಂತೆ ಮಾಡಿದೆ. ಸಾಹಿತಿ, ನಟ, ಕಲಾವಿದ ಅಥವಾ ಉದ್ಯಮಿ ಯಾರೇ ಆಗಿರಲಿ, ಅವರಿಗೆ ತಮ್ಮನ್ನು ಅಭಿಮಾನದಿಂದ ನೋಡುವವರಿಂದ ಒಂದು ಮೆಚ್ಚುಗೆಯ ಮಾತು ನೇರವಾಗಿ ಕೇಳಿಸಿಕೊಳ್ಳುವ ಖುಷಿ ವಿಶೇಷವಾಗಿರುತ್ತದೆ. ಹಾಗೆಯೇ ಒಬ್ಬ ಅಭಿಮಾನಿಗೆ ತನ್ನ ನೆಚ್ಚಿನ ನಟ, ಸಾಹಿತಿ, ಕವಿ, ಗಾಯಕ ಅಥವಾ ತನ್ನ ಪ್ರೀತಿಯ ಇನ್ಯಾರೊಂದಿಗಾದರೂ ನೇರವಾಗಿ ಮಾತನಾಡಲು ಸಿಕ್ಕ ಅವಕಾಶದ ಆನಂದ ಅವರ್ಣನೀಯ. ಕ್ಲಬ್ಹೌಸ್ ರೂಮ್ಲ್ಲಿ ಸಿಗುವ ಈ ಖುಷಿಯನ್ನು ‘ರೂಮಾಂಚನ’ ಎಂದರೂ ತಪ್ಪಿಲ್ಲ. ಮಾತಿನ ಖುಷಿಯಲ್ಲೇ ಏರಿಳಿವ ಹೃದಯದಬಡಿತ ‘ಕ್ಲಬ್ಡಬ್’ ಎಂದೆನಿಸಿದರೂ ಆಶ್ಚರ್ಯವೇನಿಲ್ಲ. ಒಟ್ಟಿನಲ್ಲಿ, ಕರೊನಾ- ಲಾಕ್ಡೌನ್ನಿಂದಾಗಿ ದೂರವಾಗಿದ್ದ ಪರಸ್ಪರ ಮಾತುಕತೆಯಲ್ಲಿನ ಆ ಮುದ ಈಗ ಕ್ಲಬ್ಹೌಸ್ನಿಂದ ಮತ್ತೆ ಸಿಗುವಂತಾಗಿದ್ದೇನೋ ನಿಜ.
| ಎಚ್. ಡುಂಡಿರಾಜ್ ಹನಿಗವಿ
| ಬಿ. ಸುರೇಶ ನಿರ್ದೇಶಕ-ನಿರ್ಮಾಪಕ
| ರಿಷಬ್ ಶೆಟ್ಟಿ ನಟ-ನಿರ್ದೇಶಕ
| ಎಂ. ಎಸ್. ನರಸಿಂಹಮೂರ್ತಿ ಖ್ಯಾತ ಹಾಸ್ಯ ಲೇಖಕರು
| ಡಿ.ಸಿ.ರಾಜಪ್ಪ ನಿವೃತ್ತ ಡಿಸಿಪಿ
| ಎಸ್. ಷಡಕ್ಷರಿ ಉದ್ಯಮಿ
| ನಾಗೇಂದ್ರ ಪ್ರಸಾದ್ ಗೀತರಚನೆಕಾರ
| ಜಯತೀರ್ಥ ಜಯಣ್ಣ ನಿರ್ದೇಶಕ
| ಡಾ. ಭುಜಂಗ ಶೆಟ್ಟಿ ನಿರ್ದೇಶಕರು, ನಾರಾಯಣ ನೇತ್ರಾಲಯ