More

    ಇಲ್ಲಿ ‘ಅಳುಮುಂಜಿ’ಯದ್ದೇ ಜೀವಮಾನದ ಸಾಧನೆ; ಕರೊನಾ ಸಂಕಷ್ಟದಲ್ಲೂ ಟ್ವಿಟರ್​ನಲ್ಲಿ ‘ಆನಂದಬಾಷ್ಪ’!

    ನವದೆಹಲಿ: 🤔 ಈಗ ಬಹುತೇಕ ಎಲ್ಲರ ಮುಖಮುದ್ರೆ ಇದೇ ಥರವೇ ಇರುವುದು ಸಹಜ. ಯಾಕೆಂದರೆ ಕರೊನಾ ಕಗ್ಗಂಟಿನ ಈ ಸಮಯಲ್ಲಿ ಮುಂದೇನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಕರೊನಾ ಒಂದನೇ ಅಲೆಯ ಹಿಂದೆಯೇ ಎರಡನೇ ಅಲೆಯ ಹಾವಳಿ ಇನ್ನೂ ಇರುವಾಗಲೇ ಮೂರನೇ ಅಲೆಯ ಆತಂಕವೂ ಕಾಡುತ್ತಿದೆ. ಪರಿಸ್ಥಿತಿ ಹೀಗಿರುವಾಗ ಮುಂದೇನು ಎಂದು ಹೇಳಲು ಯಾರಲ್ಲೂ ಮಾತಿಲ್ಲ ಎಂದರೂ ಅತಿಶಯೋಕ್ತಿ ಏನಲ್ಲ. ಇಂಥ ಸಮಯದಲ್ಲಿ ಪದಗಳಿಗಿಂತ ಇಮೋಜಿಗಳೇ ಹೆಚ್ಚು ಸೂಕ್ತ ಎನ್ನಬಹುದೇನೋ!?
    ಅದಾಗ್ಯೂ ಟ್ವಿಟರ್​ನಲ್ಲಿ ‘ಆನಂದಬಾಷ್ಪ’ವೇ ಹರಿದಿದೆ. ಅರ್ಥಾತ್​, ಟ್ವಿಟರ್​ನಲ್ಲಿ ಈ ವರ್ಷ ಅತ್ಯಧಿಕವಾಗಿ ಬಳಕೆಯಾದ ಇಮೋಜಿಗಳ ಪೈಕಿಯಲ್ಲಿ ಆನಂದಬಾಷ್ಪದ ಇಮೋಜಿಯೇ ಮೊದಲ ಸ್ಥಾನದಲ್ಲಿದೆ. ಅಂದಹಾಗೆ ಇಂದು ವಿಶ್ವ ಇಮೋಜಿ ದಿನ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಬಳಕೆಯಾದ ಇಮೋಜಿಗಳ ಕುರಿತಾದ ಮಾಹಿತಿ ಪ್ರಕಟಗೊಂಡಿದೆ.

    ಟ್ವಿಟರ್​ ಈ ವರ್ಷದ ಜನವರಿ 1ರಿಂದ ಜೂನ್ 30ರ ವರೆಗೆ ಅತಿಹೆಚ್ಚು ಬಳಕೆಯಾದ ಇಮೋಜಿಗಳನ್ನ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ ಆನಂದಬಾಷ್ಪದ ಇಮೋಜಿ ಮೊದಲ ಸ್ಥಾನದಲ್ಲಿದೆ. ಪ್ರಾರ್ಥನೆ ಹಾಗೂ ಅಳುವಿನ ಇಮೋಜಿ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. ಇನ್ನು ಫೇಸ್​ಬುಕ್​ ಕೂಡ ಅತ್ಯಧಿಕ ಬಳಕೆಯಾದ ಇಮೋಜಿಗಳ ಪಟ್ಟಿಯನ್ನು ವಯೋಮಾನದ ಲೆಕ್ಕದಲ್ಲಿ ಬಿಡುಗಡೆ ಮಾಡಿದೆ. 18ರಿಂದ 24ರ ವಯೋಮಾನದವರು ಫೇಸ್​ಬುಕ್​ನಲ್ಲಿ ಹೃದಯದ ಇಮೋಜಿಯನ್ನು ಅತಿ ಹೆಚ್ಚಾಗಿ ಬಳಸಿದ್ದರೆ, ಲಾಫಿಂಗ್​, ಥ್ಯಾಂಕ್ಸ್​ ಮತ್ತು ಪ್ರೇಯರ್ ಇಮೋಜಿಗಳು ನಂತರದ ಸ್ಥಾನದಲ್ಲಿವೆ. 25 ವರ್ಷಕ್ಕೂ ಮೇಲ್ಪಟ್ಟವರು ಥ್ಯಾಂಕ್ಸ್​ ಅಥವಾ ಪ್ರೇಯರ್ ಇಮೋಜಿ ಹೆಚ್ಚಾಗಿ ಬಳಸಿದ್ದಾರೆ.

    ಇಲ್ಲಿ 'ಅಳುಮುಂಜಿ'ಯದ್ದೇ ಜೀವಮಾನದ ಸಾಧನೆ; ಕರೊನಾ ಸಂಕಷ್ಟದಲ್ಲೂ ಟ್ವಿಟರ್​ನಲ್ಲಿ 'ಆನಂದಬಾಷ್ಪ'!

    ಇನ್ನು ಇಮೋಜಿಪೀಡಿಯಾದವರು ಇಮೋಜಿಗಳಿಗೆ ಲೈಫ್​ಟೈಮ್​ ಅಚೀವ್​ಮೆಂಟ್​ ಅವಾರ್ಡ್​ ಎಂದೂ ಕೊಟ್ಟಿದ್ದಾರೆ. ಹೊಸದಿರಲಿ, ಹಳೆಯದಿರಲಿ, ಒಟ್ಟಾರೆ ಇಮೋಜಿಗಳಲ್ಲಿ ಯಾವುದು ಅತ್ಯಧಿಕವಾಗಿ ಬಳಕೆಯಾಗಿದೆ ಎಂಬುದರ ಮೇಲೆ ಅವರು ಈ ಅವಾರ್ಡ್​ ಘೋಷಿಸಿದ್ದಾರೆ. ಅದರಲ್ಲಿ ಅಳುಮುಂಜಿಗೆ ಲೈಫ್​ಟೈಮ್​ ಅಚೀವ್​ಮೆಂಟ್​ನಲ್ಲಿ ಟಾಪ್​-1 ಸ್ಥಾನ ಸಿಕ್ಕಿದೆ. ನಂತರದ ಸ್ಥಾನದಲ್ಲಿ ಆನಂದಬಾಷ್ಪ, ಪ್ರಾರ್ಥನೆ ಮುಂತಾದವು ಇವೆ. (ಏಜೆನ್ಸೀಸ್​)

    ಇನ್ನು ಸ್ಮಾರ್ಟ್​ಫೋನ್​ ಇಲ್ಲದೆ ವಾಟ್ಸ್​ಆ್ಯಪ್​ ಬಳಸಬಹುದು; ಬೀಟಾ ಯೂಸರ್ಸ್​ಗೆ ಹೊಸ ಆಪ್ಷನ್​!

    ಕರೊನಾ ಸಂಕಷ್ಟದ ಪರಿಸ್ಥಿತಿಯಲ್ಲೂ ಇಲ್ಲಿದೆ ವ್ಯಾಪಾರ-ವಹಿವಾಟು ಅವಕಾಶ!

    ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts