

| ಅಶ್ವಿನಿ ಎಚ್.ಆರ್. ಬೆಂಗಳೂರು
ಅನೇಕರಿಗೆ ಫೇಸ್ ಮಿಸ್ಟ್ ಪದ ಹೊಸತಂತೆ ಅನಿಸಿದರೂ ಇದು ಬಹಳ ವರ್ಷಗಳಿಂದಲೂ ಬಳಕೆಯಲ್ಲಿದೆ. ಸಾಮಾನ್ಯ ವಾಗಿ ಫೇಸ್ ಮಿಸ್ಟ್ ಅನ್ನು ಕ್ಲೆನ್ಸಿಂಗ್ ಮತ್ತು ಮೊಯಿ ಶ್ಚರೈಸಿಂಗ್ ಹಂತಗಳ ನಡುವೆ ಬಳಸಲಾಗುತ್ತದೆ. ಸೋಪಿಗಿಂತ ಫೇಸ್ ಮಿಸ್ಟ್ ಬಳಸುವುದರಿಂದ ತ್ವಚೆ ಯಲ್ಲಿನ ಪಿಎಚ್ ಬ್ಯಾಲೆನ್ಸ್ ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಞರು.
ಫೇಸ್ ಮಿಸ್ಟ್ ತ್ವಚೆಯನ್ನು ರಿಫ್ರೆಶ್ ಮಾಡಿ, ಹಿತವಾಗಿ ತಂಪಾಗಿಸುವುದರ ಜತೆಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಕೆಲವು ಫೇಸ್ ಮಿಸ್ಟ್ ಗಳು ಅರೋಮಾಥೆರಪಿಯಾಗಿ ಕೆಲಸ ಮಾಡುತ್ತವೆ. ಏಕೆಂದರೆ ಇದು ಸಸ್ಯದ ಸಾರಗಳು ಮತ್ತು ಸಾರಭೂತ ತೈಲಗಳನ್ನು ಹೊಂದಿದೆ. ಪರಿಮಳಯುಕ್ತ ಫೇಸ್ ಮಿಸ್ಟ್ ಅನ್ನು ವಿಶೇಷವಾಗಿ ಪ್ರಯಾಣದ ಸಮಯದಲ್ಲಿ ಬಳಸುವುದರಿಂದ ಮನಸ್ಸು ಉಲ್ಲಾಸದಿಂದಿರುತ್ತದೆ. ಅಷ್ಟೇ ಅಲ್ಲ, ಫೇಸ್ ಮಿಸ್ಟ್ಗಳಲ್ಲಿ ವಿಟಮಿನ್ ಸಿ, ವಿಟಮಿನ್ ಇ, ಅಥವಾ ಫೆರುಲಿಕ್ ಆಮ್ಲದಂತಹ ಉತ್ಕರ್ಷಣ ನಿರೋಧಕಗಳಿವೆ.
ಫೇಸ್ವಿುಸ್ಟ್ ಅನ್ನು ಮುಖ ಮತ್ತು ಕುತ್ತಿಗೆಯ ಮೇಲೆ ನೇರವಾಗಿ ಅಪ್ಲೈ ಮಾಡಬಹುದು ಅಥವಾ ಕಾಟನ್ ಬಳಸಿ ಟೋನರ್ ಆಗಿ ಉಪಯೋಗಿಸಬಹುದು.
ಸೌತೆಕಾಯಿ ವಿಶೇಷವಾಗಿ ತ್ವಚೆಯ ಮೇಲೆ ಅತ್ಯಂತ ಹಿತವಾದ ಭಾವನೆ ನೀಡುತ್ತದೆ. ಹಾಗಾಗಿ ಮನೆಯಲ್ಲಿಯೇ ಫೇಸ್ ಮಿಸ್ಟ್ ತಯಾರಿಸುವವರು ಒಂದು ಸೌತೆಕಾಯಿಯನ್ನು ತುರಿಯಿರಿ. ತುರಿದ ನಂತರ ರಸವನ್ನು ಸೋಸಿಕೊಳ್ಳಿ. ಈ ರಸವನ್ನು ಸ್ಪ್ರೇ ಬಾಟಲಿಯಲ್ಲಿ ಒಂದು ಚಮಚ ರೋಸ್ವಾಟರ್, ಪುದೀನಾ ಎಲೆಗಳು ಮತ್ತು ಒಂದು ಚಮಚ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ. ನಂತರ ಮುಖದ ಮೇಲೆ ಸಿಂಪಡಿಸಿ.