ಅಗಸೆ ಬೀಜದಿಂದ ನಾನಾ ಉಪಯೋಗ; ಆರೋಗ್ಯ ಸೌಂದರ್ಯ

Soundarya
Published on

ಅಡುಗೆ ಮನೆಯಲ್ಲೇ ಇರುವ ವಸ್ತುಗಳಿಂದ ಅನೇಕ ಉಪಯೋಗಗಳಿದ್ದರೂ ಒಮ್ಮೊಮ್ಮೆ ನಮ್ಮ ಅರಿವಿಗೆ ಅದು ಬಂದಿರುವುದಿಲ್ಲ. ಹಾಗೆಯೇ ಅಗಸೆಬೀಜವೂ ಒಂದು. ಇದರ ಸೇವನೆಯಿಂದ ಅನೇಕ ಉಪಯೋಗ ಪಡೆಯಬಹುದು. ದಪ್ಪಗಿದ್ದೀಯಾ ಅನ್ನುವ ಮಾತನ್ನು ಪದೇಪದೆ ನೀವು ಕೇಳುತ್ತಿದ್ದರೆ ಚಿಂತೆ ಬೇಡ. ಪ್ರತಿದಿನ ಅಗಸೆಬೀಜ ಸೇವಿಸಿದರೆ ತೂಕ ಇಳಿಸಬಹುದು. ಹುರಿದ ಬೀಜವನ್ನು ಹಾಗೆಯೇ ಸೇವಿಸಬಹುದು. ಇಲ್ಲದಿದ್ದರೆ ಹಸಿ ಬೀಜ ಅಥವಾ ಅಗಸೆ ಬೀಜದ ಪುಡಿಯನ್ನು ನೀರಿನೊಂದಿಗೆ ಸೇವಿಸಿದರೆ ಉತ್ತಮ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ರಕ್ತದಲ್ಲಿನ ಕೊಬ್ಬಿನಾಂಶ ಕಡಿಮೆ ಮಾಡಬಹುದು. ಚರ್ಮವ್ಯಾದಿ ಇರುವುದಿಲ್ಲ. ಚರ್ಮದಲ್ಲಿರುವ ಸುಕ್ಕುಗಳನ್ನು ಕ್ರಮೇಣ ನಿವಾರಿಸುತ್ತದೆ. ಇದರಲ್ಲಿ ಅತಿ ಹೆಚ್ಚು ಫೈಬರ್ ಅಂಶ ಇರುವುದರಿಂದ ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಮಲಬದ್ಧತೆ ಹೋಗಲಾಡಿಸುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಮಲಗುವ ಮುನ್ನ ಸೇವಿಸುವುದು ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net