

ಆಧುನಿಕ ಕೃಷಿ ಅಳವಡಿಕೆಯಲ್ಲಿ ನಮ್ಮ ರಾಜ್ಯದ ರೈತರು ಸದಾ ಮುಂದು. ಯಾವುದೇ ಹೊಸ ಮಾದರಿಯ ಬೆಳೆಗಳನ್ನು ಬೆರಗಾಗುವಂತೆ ಬೆಳೆಯುವ ಉತ್ಸಾಹಿ ಕೃಷಿಕರು ನಮ್ಮ ಕರುನಾಡಿನಲ್ಲಿದ್ದಾರೆ. ಮರಳುಗಾಡಿನ ಮುತ್ತು ಎಂದೇ ಕರೆಸಿಕೊಂಡಿರುವ ಖರ್ಜೂರ, ಇದೀಗ ನಮ್ಮ ಕರ್ನಾಟಕಕ್ಕೂ ಪದಾರ್ಪಣೆ ಮಾಡಿದೆ. ಬರೀ ಕರ್ನಾಟಕದಲ್ಲಿ ಬೆಳೆದು ನಿಂತಿದ್ದಷ್ಟೇ ಅಲ್ಲ, ಖರ್ಜೂರ ಇಲ್ಲಿನ ರೈತಾಪಿ ವರ್ಗದ ಹೊಸ ಭರವಸೆಯ ಬೆಳೆಯಾಗಿ ಹೊರಹೊಮ್ಮಿದೆ. ಪ್ರತಿ ವರ್ಷ ಭಾರತ ಖರೀದಿಸುವ ಖರ್ಜೂರ ಸುಮಾರು 3 ಲಕ್ಷ ಮೆಟ್ರಿಕ್ ಟನ್ಗೂ ಹೆಚ್ಚು. ಅಷ್ಟು ಬೇಡಿಕೆ ಇರುವ ಖರ್ಜೂರ, ತಿನ್ನೋರಿಗೆ ಆರೋಗ್ಯದ ಲಾಭ ಕೊಡುವ ಜತೆಗೆ ಬೆಳೆಯೋರಿಗೆ ಆದಾಯದ ಲಾಭ ತಂದುಕೊಡುತ್ತಿದೆ. ಹೆಚ್ಚು ಕೂಲಿ ಕಾರ್ವಿುಕರ ಅವಲಂಬನೆಯಿಲ್ಲದೆ, ಪ್ರತಿದಿನದ ನಿರ್ವಹಣೆಯ ಅವಶ್ಯಕತೆಯಿಲ್ಲದೆ, ರೋಗಗಳ ಬಾಧೆ ಇಲ್ಲದೆ ರೈತನಿಗೆ ಲಾಭ ತಂದುಕೊಡಬಹುದಾದ ಕೃಷಿಗಳಲ್ಲಿ ಖರ್ಜೂರವೂ ಒಂದು. 100 ಖರ್ಜೂರ ಗಿಡಗಳಿದ್ದರೆ 3 ರಿಂದ 3.5 ಟನ್ ಹಣ್ಣು ಸಿಗುತ್ತದೆ. ಈ ಲೆಕ್ಕಾಚಾರದಂತೆ ರೈತರು ವರ್ಷಕ್ಕೆ ಕಡಿಮೆ ಅಂದ್ರೂ 10 ಲಕ್ಷ ರೂ. ಆದಾಯ ಗಳಿಸಬಹುದು.
ಕರ್ನಾಟಕದಲ್ಲಿ ಖರ್ಜೂರ: ಖರ್ಜೂರ ಅರಬ್ ದೇಶಗಳಲ್ಲಿ ಮತ್ತು ನಮ್ಮ ದೇಶದ ರಾಜಸ್ಥಾನದಂಥ ಮರುಭೂಮಿಯಲ್ಲಿ ಕಂಡು ಬರುತ್ತಿತ್ತು. ಕೃಷಿ ಕ್ಷೇತ್ರದಲ್ಲಿ ಇಂದು ಪ್ರಪಂಚದಲ್ಲೇ ಮೊದಲ ಸ್ಥಾನದಲ್ಲಿರುವ ಇಸ್ರೇಲ್ನಲ್ಲಿ ಕೃಷಿ ಕ್ರಾಂತಿಗೂ ಪೂರ್ವದಲ್ಲಿದ್ದ ಅಲ್ಲಿನ ಪ್ರಧಾನ ಬೆಳೆ ಇದೇ ಖರ್ಜೂರ. ಸಣ್ಣದೊಂದು ಓಯಾಸಿಸ್ನಲ್ಲಿದ್ದ ನೀರಿನ ಸೆಲೆಯ ಅವಲಂಬನೆ ಮೂಲಕವೇ ಇಡೀ ಜಗತ್ತಿಗೆ ಖರ್ಜೂರ ರವಾನೆ ಮಾಡುತ್ತಿದ್ದರು ಮರುಭೂಮಿ ಪ್ರಾಂತ್ಯದ ರೈತಾಪಿ ವರ್ಗದವರು. ಇಂಥ ಪ್ರದೇಶದ ಹೊರತಾಗಿ ಇನ್ಯಾವ ಪ್ರಾಂತ್ಯದಲ್ಲಿಯೂ ಈ ಬೆಳೆ ಸಾಧ್ಯವಿಲ್ಲ ಅನ್ನೋ ಕಲ್ಪನೆಯನ್ನು ಕಿತ್ತೆಸೆಯುವ ಪ್ರಯತ್ನದ ಫಲವಾಗಿ ಇಂದು ಕರ್ನಾಟಕದ ಹಳ್ಳಿಯೊಂದರಲ್ಲಿ ಖರ್ಜೂರದ ಸುಂದರ ತೋಟವೊಂದು ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಆ ಮೂಲಕ ನಮ್ಮ ಕೃಷಿ ಭೂಮಿಯಲ್ಲಿ ಖರ್ಜೂರ ಬೆಳೆ ತನ್ನ ಸ್ಥಾನವನ್ನು ಅಲಂಕರಿಸಿದೆ.
ಕರ್ನಾಟಕದಲ್ಲಿ ಖರ್ಜೂರ ಬೆಳೆಯಬಹುದಾ..?: ತೆಂಗು, ಈಚಲು ಗಿಡಗಳ ಜಾತಿಗೆ ಸೇರಿರುವ ಬೆಳೆ ಈ ಖರ್ಜೂರ. ಮಲೆನಾಡಿರಲಿ, ಬೆಂಗಾಡಿರಲಿ, ಬಯಲುಸೀಮೆ ಇರಲಿ, ಕರಾವಳಿ ಇರಲಿ ಈ ಪ್ರಾಂತ್ಯಗಳಲ್ಲಿ ಎಲ್ಲಿ ಕಣ್ಣು ಹಾಯಿಸಿದರೂ ತೆಂಗು ಗೋಚರವಾಗುತ್ತದೆ. ಅದೇ ರೀತಿ ಈಚಲು, ತಾಳೆಯಂಥ ಗಿಡಗಳು ಕೂಡ ಕಂಡುಬರುತ್ತವೆ. ಇವು ಬೆಳೆದ ಮೇಲೆ ಖರ್ಜೂರ ಯಾಕೆ ಬೆಳೆಯೋದಿಲ್ಲ ಅನ್ನೋ ಸಣ್ಣ ಕುತೂಹಲ ಕೂಡ ಯಾರಿಗೂ ಹುಟ್ಟಿರದ ಕಾರಣ ಖರ್ಜೂರ ಕರ್ನಾಟಕಕ್ಕೆ ಬರಲು ಇಷ್ಟು ವರ್ಷ ಕಾಯುವ ಪರಿಸ್ಥಿತಿ ನಿರ್ವಣವಾಗಿತ್ತು. ಬೆಳೆಯ ವಿಜ್ಞಾನವನ್ನು ಯಾರೂ ಬೆನ್ನು ಹತ್ತಿರಲಿಲ್ಲ. ವಿದ್ಯಾವಂತ ಕೃಷಿಕರೊಬ್ಬರ ಪ್ರಯತ್ನದ ಫಲವಾಗಿ ಖರ್ಜೂರಕ್ಕೆ ಯಾವ ವಾತಾವರಣ, ಮಣ್ಣು, ಉಷ್ಣಾಂಶ ಅಗತ್ಯ ಅನ್ನೋದು ಕಂಡುಹಿಡಿಯುವಂತಾಗಿದೆ. ಖರ್ಜೂರಕ್ಕೆ ಮರಳುಮಿಶ್ರಿತ ಭೂಮಿಯೇ ಬೇಕು ಅಂತೇನೂ ಇಲ್ಲ ಅನ್ನೋದು ಗೊತ್ತಾಗಿದೆ. ಅಷ್ಟೇ ಅಲ್ಲ, ಮರುಭೂಮಿಯಲ್ಲಿ ಎಲ್ಲೆಂದರಲ್ಲಿ ಬೆಳೆಯೋದಿಲ್ಲ ಅನ್ನೋ ಸತ್ಯ ಕೂಡ ಅರಿವಿಗೆ ಬಂದಿದೆ. ಎಲ್ಲಿ ನೀರಿನ ಸೆಲೆ ಇರುತ್ತದೆಯೋ ಅಲ್ಲಿ ಮಾತ್ರ ಈ ಬೆಳೆ ಬೆಳೆಯಲು ಸಾಧ್ಯ ಅನ್ನೋದನ್ನ ತಿಳಿದುಕೊಳ್ಳುವಂತಾಗಿದೆ. ಅದೇ ರೀತಿ ಗುಣಮಟ್ಟದ ಮಣ್ಣಿನಲ್ಲಿ ಈ ಬೆಳೆ ಬೆಳೆಯಬಹುದು ಅನ್ನೋದು ಗೊತ್ತಾಗಿದೆ. ಅದರ ಫಲವೇ ಇಂದು ಕರ್ನಾಟಕಕ್ಕೆ ಖರ್ಜೂರ ಬರುವಂತಾಗಿದೆ. ಆದರೆ ಎಲ್ಲಾ ಬಗೆಯ ಖರ್ಜೂರ ಇಲ್ಲಿ ಬೆಳೆಯುತ್ತೆ ಅಂತ ಹೇಳ ಲಾಗದು. ಖರ್ಜೂರದ ಬರ್ಹಿ ಅನ್ನೋ ತಳಿ ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿ ಸಲೀಸಾಗಿ ಬೆಳೆಯುತ್ತದೆ.
ಖರ್ಜೂರ ಬೆಳೆ ಬೆಳೆದು ಹತ್ತು ಲಕ್ಷ ಸಂಪಾದಿಸಿ!: ಸೂಕ್ತ ತಳಿ ಆಯ್ಕೆ ಮೂಲಕ ಗಿಡ ನೆಟ್ಟು ನಾಲ್ಕಾರು ವರ್ಷ ಪೋಷಣೆ ಮಾಡಿದರೆ ಚೊಚ್ಚಲ ಫಲವೇ ನಿಮಗೆ ಜೀವಮಾನದ ಭರವಸೆಯನ್ನು ತಂದುಕೊಡುತ್ತದೆ. ಸುದೀರ್ಘ ಐವತ್ತು ವರ್ಷಗಳವರೆಗೂ ಫಲ ಪಡೆಯಬಹುದಾದ ವಿಶೇಷ ಬೆಳೆ ಇದು. ಸೂಕ್ತ ನಿರ್ವಹಣೆ, ಗಿಡಗಳ ಆರೈಕೆ, ಪೋಷಣೆ ಮಾಡಿಕೊಂಡರೆ 100 ಗಿಡಗಳಿಂದ ವರ್ಷಕ್ಕೆ ಏನಿಲ್ಲ ಅಂದರೂ ಹತ್ತು ಲಕ್ಷ ರೂ. ಸಂಪಾದನೆಗೆ ದಾರಿ ಮಾಡಿಕೊಳ್ಳಬಹುದು. ಒಂದು ಕೆಜಿಗೆ 350ರಿಂದ 400 ರೂ. ಪಡೆಯಬಹುದು. ಆದರೆ ನಾಲ್ಕಾರು ವರ್ಷ ಕಾಯುವ ತಾಳ್ಮೆ ನಿಮಗಿರಲೇಬೇಕು. ನಿಮ್ಮ ಪ್ರಾಂತ್ಯದ ಮಣ್ಣು, ವಾತಾವರಣದ ಬಗ್ಗೆ ತಿಳಿವಳಿಕೆ ಮತ್ತು ಗಿಡದ ವೈಜ್ಞಾನಿಕ ಗುಣಗಳನ್ನು ನೀವು ಅರಿತಿರಲೇಬೇಕು. ಹೆಂಡದ ಗಿಡ ಬೆಳೆದಿದ್ದಾರೆ ಅನ್ನೋ ಅನುಮಾನ ಕೂಡ ನಿಮ್ಮ ಮೇಲೆ ಬಂದೆರಗಬಹುದು. ಹುಚ್ಚು ಪ್ರಯತ್ನ ಅನ್ನೋ ನಗೆಪಾಟಲಿಗೆ ಕೂಡ ನೀವು ಸಿಗಬಹುದು. ಆದರೆ ನಿಮ್ಮಲ್ಲಿ ಇರುವ ಭರವಸೆ, ನಂಬಿಕೆ, ಗೆಲ್ಲುವ ಛಲವೇ ಮುಂದೊಂದು ದಿನ ಎರಡು ತಲೆಮಾರಿಗೆ ಉತ್ತಮ ಬದುಕನ್ನು ಕಲ್ಪಿಸಿಕೊಡಬಹುದು. ಜಗತ್ತಿನ ಪ್ರತಿಯೊಂದು ಮಗುವಿನಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರಿಗೂ ಖರ್ಜೂರ ತಿನ್ನಲು ಬೇಕು ಅಂದ ಮೇಲೆ ಅದರ ಬೇಡಿಕೆ ಎಷ್ಟಿರಬೇಡ ಅನ್ನೋ ಸಣ್ಣ ಆಲೋಚ ನೆಯೇ ಸಾಕು ಈ ಕೃಷಿ ಆರಂಭಿಸಲು ಅಲ್ವಾ..?
ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಖರ್ಜೂರ ಕೃಷಿ ಕೋರ್ಸ್: ಖರ್ಜೂರ ಕೃಷಿ ಮಾಡುವವರನ್ನು ಪ್ರೋತ್ಸಾಹಿಸುವ ಸಲುವಾಗಿ ಮತ್ತು ಅವರಿಗೆ ಸೂಕ್ತ ಮಾರ್ಗದರ್ಶನ ಸಿಗುವಂತಾಗಲಿ ಎನ್ನುವ ಉದ್ದೇಶದಿಂದ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಖರ್ಜೂರ ಕೃಷಿ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಖರ್ಜೂರ ಕೃಷಿಯಲ್ಲಿ ಕ್ರಾಂತಿ ಮಾಡಿರುವ ಪ್ರಗತಿಪರ ಕೃಷಿಕರಾದ ದಿವಾಕರ ಚೆನ್ನಪ್ಪ ಅವರು ಖರ್ಜೂರ ಕೃಷಿಯ ಬಗ್ಗೆ ನಿಮಗೆ ಮಾರ್ಗದರ್ಶನ ಮಾಡುತ್ತಾರೆ. ಎಲ್ಲ ರೀತಿಯ ಅಗತ್ಯ ಮಾಹಿತಿ ಈ ಕೋರ್ಸ್ನಲ್ಲಿದೆ. ಹಾಗಾದ್ರೆ ಇನ್ನೇಕೆ ತಡ, ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ಲೋಡ್ ಮಾಡಿ, ಖರ್ಜೂರ ಕೃಷಿ ಕೋರ್ಸ್ ನೋಡಿ ನೀವೂ ಖರ್ಜೂರ ಕೃಷಿ ಆರಂಭಿಸಿ.