'ಶೃಂಗಾರ ದೃಶ್ಯಗಳು ಖಂಡಿತಾ ಪರಿಣಾಮ ಬೀರುತ್ತವೆ': ನಟಿ ಹೀಗೆನ್ನಲು ಕಾರಣವಿದೆ ನೋಡಿ..

anjali
Published on

ಹೈದರಾಬಾದ್: ಶೃಂಗಾರ ದೃಶ್ಯಗಳಲ್ಲಿ ನಟಿಸುವಾಗ ವೃತ್ತಿಪರವಾಗಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಅದು ವೈಯಕ್ತಿಕವಾಗಿರುತ್ತದೆ ಎಂದು ನಟಿ ಅಂಜಲಿ ಹೇಳಿದರು.

ಅಂಜಲಿ, ಶ್ರೀತೇಜ, ರವೀಂದ್ರ ವಿಜಯ್ ಮತ್ತು ಅನನ್ಯ ನಾಗಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಮುಕೇಶ್ ಪ್ರಜಾಪತಿ ಅವರ ಸೀರಿಯಲ್​ 'ಬಹಿಷ್ಕರಣ'. ಇತ್ತೀಚೆಗೆ ಓಟಿಟಿ 'ಜೀ 5' ನಲ್ಲಿ ಬಿಡುಗಡೆಯಾದ ಈ ಸರಣಿಯು ಪ್ರೇಕ್ಷಕರ ಗಮನ ಸೆಳೆದಿದೆ. ಈ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಂಡ ಭಾಗವಹಿಸಿದ್ದು,

ಸೀರಿಯಲ್​ನಲ್ಲಿ ತಮ್ಮದು ವೇಶ್ಯೆ ಪಾತ್ರವಿದ್ದು, ಇದಕ್ಕೆ ಸಂಬಂಧಿಸಿದ ಸೀನ್‌ಗಳಲ್ಲಿ ನಟಿಸುವಾಗ ತೊಂದರೆಯಾಗಿದೆಯೇ? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅಂಜಲಿ ಪ್ರತಿಕ್ರಿಯಿಸಿದರು. ಪುಷ್ಪಾ (ಸರಣಿಯಲ್ಲಿ ನಟಿಸಿದ ಪಾತ್ರ) ಸಮಸ್ಯೆ ಇರುವುದಿಲ್ಲ. ಆದರೆ,ನಿಜ ಜೀವನದಲ್ಲಿ ಯಾವುದೇ ಎಕ್ಸ್​ಫೋಸ್​ ದೃಶ್ಯಕ್ಕೆ ನಟಿಸುವಾಗ ಸೆಟ್ ನಲ್ಲಿ ಕನಿಷ್ಠ 20 ಜನ ಇರುತ್ತಾರೆ. ಒಬ್ಬ ಪುರುಷ ನಟಿನಿಗೆ ಇಂತಹ ದೃಶ್ಯಗಳಲ್ಲಿ ನಟಿಸುವುದು ಅಷ್ಟು ಸುಲಭವಲ್ಲ’​​ಎಂದರು.

ಇದೇ ವಿಷಯದ ಕುರಿತು ರವೀಂದ್ರ ವಿಜಯ್ ಅವರು, ‘ಇಂತಹ ದೃಶ್ಯಗಳಲ್ಲಿ ನಟಿಸುವುದು ಯಾರಿಗಾದರೂ ಕಷ್ಟ. ಎಂಜಾಯ್ ಮಾಡುತ್ತಾ ನಟಿಸುವುದು ಅಲ್ಲ. ಯಾವಾಗ ಹೇಗೆ ರಿಯಾಕ್ಟ್ ಮಾಡಬೇಕು, ಆ್ಯಕ್ಟ್ ಮಾಡಬೇಕು ಎಂಬುದು ಮುಖ್ಯ. ಯಾವಾಗ ಹೇಗೆ ನಟಿಸಬೇಕು ಎಂಬುದನ್ನು ಮಾತನಾಡಿಕೊಂಡು ಮಾಡುತ್ತೇವೆ ಎಂದರು.

ಸೇಡು ತೀರಿಸಿಕೊಳ್ಳುವ ಈ ಸೀರಿಸ್ ನಲ್ಲಿ ಅಂಜಲಿ ವೇಶ್ಯೆಯಾಗಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net