ಡಿಸಿಎಂ ಪವನ್​ ಕಲ್ಯಾಣ್​ ಟೀಕೆಯನ್ನು ಪಾಸಿಟಿವ್​​​​​​​​ ಆಗಿ ತೆಗೆದುಕೊಳ್ಳುತ್ತೇನೆ; ಗೃಹ ಸಚಿವೆ Anitha Vangalapudi ರಿಯಾಕ್ಷನ್​​

Untitled design - 2024-11-05T162038.406
Published on

ಅಮರಾವತಿ: ತಿರುಪತಿಯಲ್ಲಿ ಮಗುವಿನ ಅತ್ಯಾಚಾರ-ಕೊಲೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಟೀಕೆಯನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತೇನೆ ಎಂದು ಗೃಹ ಸಚಿವೆ ಅನಿತಾ ವಂಗಲಪುಡಿ(Anitha Vangalapudi) ಮಂಗಳವಾರ(ನವೆಂಬರ್​​​ 5) ಹೇಳಿದ್ದಾರೆ.

ನಾನು ಅವರ ಕಾಮೆಂಟ್‌ಗಳನ್ನು ತುಂಬಾ ಪಾಸಿಟಿವ್​ ಆಗಿ ತೆಗೆದುಕೊಂಡಿದ್ದೇನೆ. ನನಗೆ ಜವಾಬ್ದಾರಿ ಇದೆ. ನಾನು ನಿರ್ಣಾಯಕ ಪೋರ್ಟ್​​ಫೋಲಿಯೊವನ್ನು ಹೊಂದಿದ್ದೇನೆ. ನೀವು ಹೆಚ್ಚು ಆಕ್ರಮಣಕಾರಿಯಾಗಿ ಮುಂದುವರಿಯಬಹುದು ಎಂದು ಅವರು ನನಗೆ ಬೆಂಬಲ ನೀಡುತ್ತಿರುವಂತಿದೆ ಎಂದು ಸಚಿವೆ ಅನಿತಾ ವಂಗಲಪುಡಿ ತಿಳಿಸಿದ್ದಾಗಿ ಎನ್​ಡಿಟಿವಿ ವರದಿ ಮಾಡಿದೆ.

ಅನಂತಪುರ ಮತ್ತು ಶ್ರೀ ಸತ್ಯಸಾಯಿ ಜಿಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವರು ಪರಿಶೀಲನೆ ನಡೆಸಿ, ಬಳಿಕ ಮಾತನಾಡಿದ ಅವರು, ನಾವು ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಗಾಂಜಾ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಅಪರಾಧ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪರಿಶೀಲನೆ ನಡೆಸಿದ್ದೇವೆ. ಪವನ್ ಕಲ್ಯಾಣ್ ಔಟ್.. ನಾವಲ್ಲ. ಕಾನೂನು ಸುವ್ಯವಸ್ಥೆಯನ್ನು ಅಸ್ತ್ರವನ್ನಾಗಿ ಜಾರಿಗೆ ತರಲು ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧಗಳಿಂದ ಎಲ್ಲರೂ ನರಳುತ್ತಿದ್ದಾರೆ, ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ದುಃಖಕರವಾಗಿದೆ. ಈ ಹಿಂದೆ ಅಪರಾಧಗಳಿಗೆ ರಾಜಕೀಯ ಪ್ರೋತ್ಸಾಹದಿಂದ ಈ ಪರಿಸ್ಥಿತಿ ಸಂಭವಿಸಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಆದರೆ ಶಿಕ್ಷೆಯನ್ನು ತಕ್ಷಣವೇ ಜಾರಿಗೊಳಿಸಲು ವಿಶೇಷ ನ್ಯಾಯಾಲಯಗಳ ಅಗತ್ಯವಿದ್ದು, ಅಂತಹ ಸಮಸ್ಯೆಗಳನ್ನು ಸಿಎಂ ಚಂದ್ರಬಾಬು ಅವರ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.

ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿದ್ದೇನು?

ನಾನು ಗೃಹ ಸಚಿವೆ ಅನಿತಾ ಅವರಿಗೆ ಹೇಳುತ್ತಿದ್ದೇನೆ, ನೀವು ಗೃಹ ಸಚಿವರು. ದಯವಿಟ್ಟು ಗೃಹ ಸಚಿವಾಲಯದ ಜವಾಬ್ದಾರಿಗಳನ್ನು ತೆಗೆದುಕೊಳ್ಳಿ. ನಾನು ಪೋರ್ಟ್‌ಫೋಲಿಯೊವನ್ನು ತೆಗೆದುಕೊಂಡರೆ ವಿಷಯಗಳು ವಿಭಿನ್ನವಾಗಿರುತ್ತದೆ. ಅದನ್ನು ನೆನಪಿಡಿ ಎಂದು ಡಿಸಿಎಂ ಪವನ್​ ಕಲ್ಯಾಣ್​​ ಹೇಳಿದ್ದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net