ಯುಪಿ ಮದರಸಾ ಶಿಕ್ಷಣ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಎತ್ತಿಹಿಡಿದ ಸುಪ್ರೀಂಕೋರ್ಟ್​​​; ನ್ಯಾಯಾಲಯ ಹೇಳಿದ್ದೇನು ಗೊತ್ತಾ? | UP Madarsa Education Act

blank

ನವದೆಹಲಿ: ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯಿದೆ 2004(UP Madarsa Education Act) ಅನ್ನು ಅಸಂವಿಧಾನಿಕ ಎಂದು ಘೋಷಿಸಿ ಅಲಹಾಬಾದ್​​ ಹೈಕೋರ್ಟ್​​ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್​​​ ಮಂಗಳವಾರ(ನವೆಂಬರ್​​ 5) ರದ್ದುಗೊಳಿಸಿದೆ.
ಸಿಜೆಐ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಮಂಗಳವಾರ ಈ ತೀರ್ಪು ನೀಡಿದೆ. ತೀರ್ಪು ನೀಡುವಾಗ, ಇದು ಜಾತ್ಯತೀತ ತತ್ವವನ್ನು ಉಲ್ಲಂಘಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಾಲಯದ ಈ ನಿರ್ಧಾರವು ಯುಪಿಯಲ್ಲಿ ಮದರಸಾಗಳು ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ ಎಂದರ್ಥ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವುದೇ ಅಪಾಯವಿಲ್ಲ. ಯುಪಿಯಲ್ಲಿ 13 ಸಾವಿರ ಮದರಸಾಗಳಲ್ಲಿ 17 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಇದನ್ನು ಓದಿ: Air Pollution | ವಿಶ್ವದಲ್ಲೇ ಅತ್ಯಂತ ಕಲುಷಿತ ನಗರ.. AQI 1900 ದಾಖಲು; ಈ ದೇಶದಲ್ಲಿ ಜನರ ಜೀವನ ನರಕ

ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್, ಯುಪಿ ಮದರಸಾ ಕಾಯ್ದೆ ಮೂಲಭೂತ ಹಕ್ಕುಗಳ ಉಲ್ಲಂಘನೆಯಲ್ಲ. ಮದರಸಾ ಕಾಯಿದೆಯು ಸಂವಿಧಾನದ ಮೂಲ ರಚನೆಯ ಉಲ್ಲಂಘನೆಯಲ್ಲ. ಶಿಕ್ಷಣ ಗುಣಮಟ್ಟದ ನಿಯಮಗಳು ಮದರಸಾಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಪಠ್ಯಕ್ರಮದ ಜತೆಗೆ ವಿದ್ಯಾರ್ಥಿಗಳ ಆರೋಗ್ಯವೂ ಮುಖ್ಯವಾಗಿದೆ.

ಅಲಹಾಬಾದ್​ ಹೈಕೋರ್ಟ್​​ ಆದೇಶ ಏನಿತ್ತು?

ಮಾರ್ಚ್ 22ರಂದು, ಅಲಹಾಬಾದ್ ಹೈಕೋರ್ಟ್ ಈ ಕಾನೂನನ್ನು ಅಸಂವಿಧಾನಿಕ ಮತ್ತು ಜಾತ್ಯತೀತತೆಯ ತತ್ವವನ್ನು ಉಲ್ಲಂಘಿಸುತ್ತದೆ ಎಂದು ಘೋಷಿಸಿತು. ಮದರಸಾಗಳ ವಿದ್ಯಾರ್ಥಿಗಳನ್ನು ಔಪಚಾರಿಕ ಶಾಲೆಗಳಿಗೆ ಕಳುಹಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಹೈಕೋರ್ಟ್‌ನ ಈ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಮದರಸಾಗಳ ವಿದ್ಯಾರ್ಥಿಗಳಿಗೆ ರಿಲೀಫ್ ನೀಡಿ, ಸುಪ್ರೀಂಕೋರ್ಟ್ ಏಪ್ರಿಲ್ 5 ರಂದು ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತ್ತು. ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ತೀರ್ಪನ್ನು ಅಕ್ಟೋಬರ್ 22ರಂದು ಸುಪ್ರೀಂಕೋರ್ಟ್ ಕಾಯ್ದಿರಿಸಿತ್ತು.

ಯೋಗಿ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದ್ದೇನು

ಯೋಗಿ ಸರ್ಕಾರವು ಕಾಯ್ದೆಗೆ ಸಂಪೂರ್ಣವಾಗಿ ವಿರುದ್ಧವಾಗಿಲ್ಲ. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲಹಾಬಾದ್ ಹೈಕೋರ್ಟ್ ಸಂಪೂರ್ಣ ಕಾನೂನನ್ನು ಅಸಾಂವಿಧಾನಿಕ ಎಂದು ಪರಿಗಣಿಸಬಾರದು ಎಂದು ಉತ್ತರ ಪ್ರದೇಶ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು. ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿರುವ ಕಾಯಿದೆಯ ನಿಬಂಧನೆಗಳನ್ನು ಮಾತ್ರ ಪರಿಶೀಲಿಸಬೇಕು. ಕಾಯ್ದೆಯನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಸೂಕ್ತವಲ್ಲ. ಮದರಸಾ ಕಾಯಿದೆಯಲ್ಲಿ ಖಂಡಿತವಾಗಿಯೂ ಬದಲಾವಣೆ ತರಬಹುದು ಆದರೆ ಅದನ್ನು ಸಂಪೂರ್ಣವಾಗಿ ರದ್ದುಗೊಳಿಸಿರುವುದು ಸರಿಯಲ್ಲ ಎಂದು ವಕೀಲರು ಹೇಳಿದರು.

ಯುಪಿ ಮದರಸಾ ಕಾಯಿದೆ ಎಂದರೇನು?

2004ರಲ್ಲಿ ಉತ್ತರಪ್ರದೇಶದಲ್ಲಿ ಮದರಸಾಗಳಿಗೆ ಸಂಬಂಧಿಸಿದಂತೆ ಕಾನೂನನ್ನು ರಚಿಸಲಾಯಿತು. ಕಾನೂನಿನ ಅಡಿಯಲ್ಲಿ ಮದರಸಾ ಮಂಡಳಿಯನ್ನು ರಚಿಸಲಾಯಿತು. ಮದರಸಾದಲ್ಲಿ ಶಿಕ್ಷಣವನ್ನು ಆಯೋಜಿಸುವುದು ಇದರ ಉದ್ದೇಶವಾಗಿತ್ತು. ಮದರಸಾಗಳು ಮಾನ್ಯತೆಗಾಗಿ ಕನಿಷ್ಠ ಮಾನದಂಡಗಳನ್ನು ಪೂರೈಸಬೇಕಾಗಿತ್ತು. ಯುಪಿಯಲ್ಲಿ 13 ಸಾವಿರ ಮದರಸಾಗಳು ಮಂಡಳಿಯಿಂದ ಮಾನ್ಯತೆ ಪಡೆದಿವೆ. ಆದರೆ ಸುಮಾರು 8500 ಮದರಸಾಗಳು ಮಂಡಳಿಯಿಂದ ಗುರುತಿಸಲ್ಪಟ್ಟಿಲ್ಲ.(ಏಜೆನ್ಸೀಸ್​​)

ಈ ಹೋಲಿಕೆ ಆಧಾರರಹಿತ; ಅಸಾದುದ್ದೀನ್ ಓವೈಸಿ ಹೇಳಿಕೆಗೆ TTD ಅಧ್ಯಕ್ಷ ಬಿ.ಆರ್​ ನಾಯ್ಡು ರಿಯಾಕ್ಷನ್​​​

Share This Article

ಭಾರತದ ನೋಟಿನಲ್ಲಿರುವ ಮಹಾತ್ಮ ಗಾಂಧಿಜಿ ಅವರ ಫೋಟೋ ಕ್ಲಿಕ್ಕಿಸಿದ್ದು ಯಾವಾಗ & ಎಲ್ಲಿ?; ಇಲ್ಲಿದೆ ಸಂಪೂರ್ಣ ಮಾಹಿತಿ | Information

ಭಾರತದ ನೋಟಿನಲ್ಲಿ ಮಹಾತ್ಮ ಗಾಂಧಿ ಅವರ ಫೋಟೋವನ್ನು ನೀವು ನೋಡಿರಬಹುದು. ಆದರೆ ನೋಟಿನ ಮೇಲೆ ನಗುತ್ತಿರುವ…

ಇಬ್ಬನಿಯಿಂದ ಚಳಿಗಾಲದಲ್ಲಿ ತುಳಸಿ ಗಿಡ ಹಾಳಾಗುತ್ತಿದೆಯೇ?; ಆರೈಕೆಗಾಗಿ ಇಲ್ಲಿದೆ ಸಿಂಪಲ್​ ಟ್ರಿಕ್​​ | Health Tips

ತುಳಸಿಯು ಔಷಧೀಯ ಸಸ್ಯವಾಗಿರುವುದರ ಜತೆಗೆ ಧಾರ್ಮಿಕ ನಂಬಿಕೆಗಳನ್ನೂ ಹೊಂದಿದೆ. ಈ ಸಸ್ಯವನ್ನು ಹಿಂದೂ ಧರ್ಮದಲ್ಲಿ ಅತ್ಯಂತ…

ಬಿಪಿ ಹೆಚ್ಚಾಗಲು ಈ ಆಹಾರ ಪದಾರ್ಥಗಳು ಕಾರಣವೇ; ತಜ್ಞರು ಹೇಳಿದ್ದೇನು? | Health Tips

ನೂಡಲ್ಸ್, ಪಾಪಡ್, ಉಪ್ಪಿನಕಾಯಿ, ಸಾಸ್ ಮತ್ತು ನಮ್ಕೀನ್ ಬಹುತೇಕ ಈ ಎಲ್ಲಾ ಆಹಾರ ಪದಾರ್ಥಗಳು ಪ್ರತಿಯೊಬ್ಬರ…