More

    ಕೋಚ್ ಅನಿಲ್ ಕುಂಬ್ಳೆಗೆ ಇಷ್ಟವಾದ ರಾಹುಲ್ ನಾಯಕತ್ವ ಗುಣ ಯಾವುದು..?

    ಬೆಂಗಳೂರು: ಕರ್ನಾಟಕದ ಕೆಎಲ್ ರಾಹುಲ್ ಮೂರು ಮಾದರಿಯ (ಟೆಸ್ಟ್, ಏಕದಿನ, ಟಿ20) ಕ್ರಿಕೆಟ್‌ಗೆ ಸೈ ಎನಿಸಿಕೊಂಡಿರುವ ಆಟಗಾರ. ಕಳೆದ ಎರಡು ವರ್ಷಗಳಿಂದ ಕಿಂಗ್ಸ್ ಇಲೆವೆನ್ ಪರ ತೋರಿದ ಭರ್ಜರಿ ನಿರ್ವಹಣೆಯಿಂದಾಗಿ ಈ ಬಾರಿ ಅವರಿಗೆ ನಾಯಕತ್ವ ಪಟ್ಟ ಒಲಿದಿದೆ. ಮೊದಲ ಬಾರಿಗೆ ಐಪಿಎಲ್‌ನಲ್ಲಿ ತಂಡವೊಂದಕ್ಕೆ ನಾಯಕತ್ವ ವಹಿಸಿಕೊಂಡಿದ್ದಾರೆ. ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಮೂಲಕ ಗಮನಸೆಳೆಯುತ್ತಿರುವ ರಾಹುಲ್, ನಾಯಕತ್ವದ ಗುಣದ ಬಗ್ಗೆ ಸಹಜವಾಗಿಯೇ ಕುತೂಹಲವಿದೆ. ತಂಡದ ಮುಖ್ಯಕೋಚ್ ಆಗಿರುವ ಅನಿಲ್ ಕುಂಬ್ಳೆ, ರಾಹುಲ್ ಅವರ ನಾಯಕತ್ವ ಗುಣವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

    ಇದನ್ನೂ ಓದಿ: PHOTO | ಐಪಿಎಲ್ ವೇಳಾಪಟ್ಟಿಗೆ ಕಾದು ಕಾದು ಸುಸ್ತಾದ ಕ್ರಿಕೆಟ್ ಪ್ರೇಮಿಗಳಿಂದ ಟ್ರೋಲ್!

    ಸಹ-ಆಟಗಾರರಿಂದ ಕೆಎಲ್ ಎಂದೇ ಕರೆಸಿಕೊಳ್ಳುವ ರಾಹುಲ್, ಕೋಚ್ ಅನಿಲ್ ಕುಂಬ್ಳೆ ಅವರ ಅಚ್ಚುಮೆಚ್ಚಿನ ಕ್ರಿಕೆಟಿಗ. ರಾಹುಲ್ ಓರ್ವ ಜವಾಬ್ದಾರಿಯುತ ಆಟಗಾರ. ನಾನು ಅವರನ್ನು ಹಲವು ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅನುಭವ ಹೊಂದಿದ್ದಾರೆ. ಕಳೆದೆರಡು ವರ್ಷಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿರುವ ರಾಹುಲ್, ನಾಯಕತ್ವದಲ್ಲೂ ಸೈ ಎನಿಸಿಕೊಳ್ಳಲಿದ್ದಾರೆ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ. ರಾಹುಲ್ ತಂಡ ಮುನ್ನಡೆಸುವುದನ್ನು ನೋಡಲು ನಾನು ಕೂಡ ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: VIDEO | ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ಗೆ ರೋಚಕ ಗೆಲುವು

    2018ರಲ್ಲಿ ರಾಹುಲ್ ಕಿಂಗಲ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಿದ 14 ಪಂದ್ಯಗಳಿಂದ 6 ಅರ್ಧಶತಕ ಸೇರಿದಂತೆ 54.91 ಸರಾಸರಿಯಂತೆ 659 ರನ್ ಪೇರಿಸಿದ್ದರು. ಕಳೆದ ವರ್ಷ ಒಂದು ಶತಕ, 6 ಅರ್ಧಶತಕ ಸೇರಿದಂತೆ 593 ರನ್ ಪೇರಿಸಿದ್ದರು. ಕಳೆದ ವರ್ಷದ ಅಕ್ಟೋಬರ್‌ನಲ್ಲೇ ಕುಂಬ್ಳೆ ಅವರನ್ನು ತಂಡದ ಮುಖ್ಯಕೋಚ್ ಆಗಿ ನೇಮಿಸಲಾಗಿದೆ.

    ಶಿಕ್ಷಕರ ದಿನದಂದು ಕೋಚ್‌ಗಳಿಗೆ ನಮಿಸಿದ ಕ್ರೀಡಾ ತಾರೆಯರು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts