

ಬೈಂದೂರು: ಕೊಲ್ಲೂರು ನವಶಕ್ತಿ ಮಹಿಳಾ ವೇದಿಕೆ ವತಿಯಿಂದ ಕೊಲ್ಲೂರು ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಅಂಗನವಾಡಿ ಮಕ್ಕಳಿಗೆ ಮುದ್ದು ರಾಧೆ-ಕೃಷ್ಣ ಸ್ಪರ್ಧೆ ನಡೆಯಿತು. ಮುಖ್ಯಶಿಕ್ಷಕಿ ಸುಮಿತ್ರಾ ಸ್ಪರ್ಧೆ ಉದ್ಘಾಟಿಸಿದರು. ನವಶಕ್ತಿ ಮಹಿಳಾ ವೇದಿಕೆ ಅಧ್ಯಕ್ಷೆ ಗ್ರೀಷ್ಮಾ ಗಿರಿಧರ್ ಭಿಡೆ ಅಧ್ಯಕ್ಷತೆ ವಹಿಸಿದ್ದರು.
ಸ್ಪರ್ಧೆಯಲ್ಲಿ 25ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಬಹುವಾನದ ಪ್ರಾಯೋಜಕರಾಗಿದ್ದ ಉದ್ಯಮಿ ಕರುಣಾಕರ ಶೆಟ್ಟಿ ವಿಜೇತ ಮಕ್ಕಳಿಗೆ ಬಹುವಾನ ಹಾಗೂ ಪ್ರವಾಣ ಪತ್ರ ವಿತರಿಸಿದರು. ಭಾಗವಹಿಸಿದ ಎಲ್ಲ ಮಕ್ಕಳಿಗೆ ಸವಾಧಾನಕರ ಬಹುವಾನ ನೀಡಲಾಯಿತು.
ತೀರ್ಪುಗಾರರಾಗಿ ಶಿಕ್ಷಕಿ ರಾಜೇಶ್ವರಿ, ಶಿಕ್ಷಕ ಚಂದ್ರ ಕೊಠಾರಿ ಇದ್ದರು. ಸಂ ಕಾರ್ಯದರ್ಶಿ ಜ್ಯೋತಿ ರಾವೇಂದ್ರ, ಅಂಗನವಾಡಿ ಕಾರ್ಯಕರ್ತೆ ಸುಪ್ರಿಯಾ, ಆಶಾ ಮತ್ತು ಪದಾಧಿಕಾರಿಗಳು ಹಾಗೂ ಮಕ್ಕಳ ಪಾಲಕರು ಉಪಸ್ಥಿತರಿದ್ದರು.