ಆಂಧ್ರದ ನೂರು ಎಕರೆಯಲ್ಲಿ ಸಿನಿಮಾ ಸ್ಟುಡಿಯೋ.. ಎಲ್ಲಿ ತಲೆ ಎತ್ತಲಿದೆ ಗೊತ್ತಾ?

studio
Published on

ಹೈದರಾಬಾದ್​: ರಾಮೋಜಿ ಫಿಲ್ಮ್ ಸಿಟಿ ಹೆಸರು ಕೇಳದವರು ಯಾರಿದ್ದಾರೆ? ಆಂಧ್ರಪ್ರದೇಶದಲ್ಲಿ ತಲೆ ಎತ್ತಿದ್ದ ಈ ಮಾಯಾನಗರಿ ಹೈದರಾಬಾದ್​ನೊಂದಿಗೆ ತೆಲಂಗಾಣ ಪಾಲಾಯಿತು. ಆದರೆ ಆಂಧ್ರಕ್ಕೆ ಈಗ ಸ್ಟುಡಿಯೋ ಕೊರತೆಯಿದ್ದು, ಸಿನಿಇಂಡಸ್ಟ್ರಿ ಮೇಲೆ ವಿಶೇಷ ಕಾಳಜಿ ಇರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಡಿಸಿಎಂ ಪವನ್​ ಕಲ್ಯಾಣ್​ ನೇತೃತ್ಯದ ಹೊಸ ಸರ್ಕಾರ ಈಗ

ಆಂಧ್ರದಲ್ಲಿ ಚಿತ್ರಗಳ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಬೃಹತ್ ಸ್ಟುಡಿಯೋ ನಿರ್ಮಾಣಕ್ಕೆ ಮುಂದಾಗಿದೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ.

ಉಭಯ ತೆಲುಗು ರಾಜ್ಯಗಳಲ್ಲಿ ಸಿನಿಕ್ರೇಜ್​ಹೆಚ್ಚಾಗಿಯೇ ಇದೆ. ತೆಲುಗು ಸಿನಿಮಾಗಳು ವಿಶ್ವಮನ್ನಣೆ ಪಡೆಯುತ್ತಿರುವುದು ತಿಳಿದ ಸಂತತಿಯೇ. ಹೀಗಾಗಿ ಇಂಡಸ್ಟ್ರಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಸರ್ಕಾರ ಕಾರ್ಯೋನ್ಮುಖವಾಗಿದೆ. ಈ ನಿಟ್ಟಿನಲ್ಲಿ ಸ್ಟಾರ್ ಹೀರೋರೊಬ್ಬರು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಜೊತೆ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಇಂತಹ ಚರ್ಚೆಗಳ ಹಿನ್ನೆಲೆಯಲ್ಲಿ ರಾಜಧಾನಿ ಅಮರಾವತಿ ಸುತ್ತಮುತ್ತ ಚಿತ್ರರಂಗದ ಅಭಿವೃದ್ಧಿಗೆ ಸ್ಟುಡಿಯೋ ನಿರ್ಮಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಕೃಷ್ಣಾ ಜಿಲ್ಲೆ ನಂದಿಗಾಮ ಕ್ಷೇತ್ರದ ಕಂಚಿಕಚಾರ್ಲದಲ್ಲಿ ಬೃಹತ್ ಸ್ಟುಡಿಯೋ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ.

ಸುಮಾರು 100 ಎಕರೆಯಲ್ಲಿ ಸ್ಟುಡಿಯೋ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಇಲ್ಲಿಂದ ಹೈದರಾಬಾದ್‌ಗೆ 4 ಗಂಟೆ ಪ್ರಯಾಣ ಮತ್ತು ರಾಜಧಾನಿ ಅಮರಾವತಿ ಹತ್ತಿರದ ಪ್ರದೇಶವಾಗಿರುವುದರಿಂದ ಈ ಜಾಗವನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಆಂಧ್ರ ಮತ್ತು ತೆಲಂಗಾಣದ ಗಡಿಯಲ್ಲಿ ತಲೆಎತ್ತಲಿದೆ. ಗನ್ನವರಂ ವಿಮಾನ ನಿಲ್ದಾಣ, ವಿಜಯವಾಡ ರೈಲ್ವೆ ಜಂಕ್ಷನ್‌ನಿಂದ 40 ಕಿ.ಮೀ ದೂರದಲ್ಲಿ ಈ ಸ್ಟುಡಿಯೋ ನಿರ್ಮಾಣವಾಗುತ್ತಿರುವುದು ಮತ್ತೊಂದು ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net