ಕೆಲಸ ಮಾಡದೆ 3 ಕೋಟಿ ಸಂಬಳ ಕೊಟ್ಟ ಅಮೆಜಾನ್.. ಉದ್ಯೋಗಿ ಪೋಸ್ಟ್ ವೈರಲ್!

amazon
Published on

ನವದೆಹಲಿ: ಪ್ರತಿಷ್ಠಿತ ಕಂಪನಿಗಳಲ್ಲಿ ಸ್ಮಾರ್ಟ್ ಮತ್ತು ಹಾರ್ಡ್​ ವರ್ಕ್ ಗೆ ಮನ್ನಣೆ ಕೊಡಲಾಗುತ್ತದೆ. ಆದರೆ ವಿಶ್ವದ ಇ-ಕಾಮರ್ಸ್ ದೈತ್ಯ ಅಮೆಜಾನ್ ಉದ್ಯೋಗಿಯೊಬ್ಬನಿಗೆ ಸಮರ್ಪಕವಾಗಿ ಕೆಲಸ ಮಾಡದಿದ್ದರೂ 3 ಕೋಟಿ ರೂಪಾಯಿ(3.7ಲಕ್ಷ ಡಾಲರ್​) ನೀಡಿದೆ ಎನ್ನಲಾಗಿದೆ. ಈ ವಿಷಯವನ್ನು ಉದ್ಯೋಗಿಯೊಬ್ಬರು ಬಹಿರಂಗಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಪೋಸ್ಟ್ ಇದೀಗ ವೈರಲ್ ಆಗಿದೆ.

ಗೂಗಲ್ ಸಂಸ್ಥೆ ತನ್ನನ್ನು ವಜಾಗೊಳಿಸಿದ ನಂತರ 17 ತಿಂಗಳ ಹಿಂದೆ ಅಮೆಜಾನ್‌ಗೆ ಸೇರಿಕೊಂಡಿದ್ದೇನೆ. ಹಿರಿಯ ತಾಂತ್ರಿಕ ಕಾರ್ಯಕ್ರಮ ನಿರ್ವಾಹಕನಾಗಿ ಒಂದೂವರೆ ವರ್ಷದಲ್ಲಿ 3.70 ಲಕ್ಷ ಡಾಲರ್ ಗಳಿಸಿದ್ದೇನೆ. ಈ ಹಣ ಸರಿಯಾಗಿ ಕೆಲಸ ಮಾಡದೆ ಬಂದಿದೆ ಎಂದು ತಿಳಿಸಿದ್ದಾರೆ.

ಅಮೆಜಾನ್‌ನಲ್ಲಿ ಕೇವಲ ಏಳು ರೀಸಾಲ್ಡ್​ಟಿಕೆಟ್‌ಗಳನ್ನು ಮಾತ್ರ ಪರಿಹರಿಸಿ, ಒಂದು ಸ್ವಯಂಚಾಲಿತ ಡ್ಯಾಶ್ ಬೋರ್ಡ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಡ್ಯಾಶ್ ಬೋರ್ಡ್‌ಗಾಗಿ ಚಾಟ್ ಜಿಪಿಟಿ ಚಾಟ್ ಬೋಟ್ ಸಹಾಯದಿಂದ ಮೂರು ದಿನಗಳಲ್ಲಿ ಕೆಲಸವನ್ನು ಪೂರ್ಣಗೊಳಿಸಿದೆ. ಆದರೆ ಇದಕ್ಕಾಗಿ ಮೂರು ತಿಂಗಳು ಕೆಲಸ ಮಾಡಿದ್ದೇನೆ ಎಂದು ಕಂಪನಿಗೆ ತಿಳಿಸಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ.

ಇನ್ನು ತಮ್ಮ 8 ಗಂಟೆಗಳ ಕೆಲಸದ ಸಮಯದಲ್ಲಿ ಹೆಚ್ಚಿನ ಸಮಯವನ್ನು ಕಳೆದಿದ್ದರೆ ಅದು ಸಭೆಗಳಲ್ಲಿ ಮಾತ್ರ ಎಂದು ಅವರು ಹೇಳಿದ್ದಾರೆ. ಈ ಪೋಸ್ಟ್ ಬೇರೊಬ್ಬ ವ್ಯಕ್ತಿಯ ಎಕ್ಸ್ ಖಾತೆಯಲ್ಲಿ ಶೇರ್ ಆಗಿರುವುದರಿಂದ ನೆಟಿಜನ್ಸ್​ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಯಾವುದೇ ಸಂಸ್ಥೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಮನ್ನಣೆ ಇಲ್ಲ. ಜಾಣತನದ ಹೆಸರಿನಲ್ಲಿ ಮೋಸ ಮಾಡುವವರನ್ನು ಮಾತ್ರ ನಂಬುತ್ತಾರೆ ಎಂದು ನೆಟಿಜನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.

ಈ ರೀತಿಯ ಜನರು ಕಷ್ಟಪಟ್ಟು ದುಡಿದು ಸಂಪಾದಿಸಲು ಬಯಸುವವರನ್ನು ನಾಶಪಡಿಸುತ್ತಿದ್ದಾರೆ ಎಂದು ಇನ್ನೊಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ. ಈ ನೌಕರನಿಗೆ ಕರ್ತವ್ಯದ ಬೆಲೆ ಗೊತ್ತಿಲ್ಲ, ಮೋಸ ಮಾಡಿದ್ದಾನೆ ಎಂದು ಇನ್ನೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net