ಪತ್ನಿಯನ್ನು ಕೊಂದು 12 ವರ್ಷಗಳಿಂದ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿದ್ದ ಕೊಲೆಗಾರ ಅಂದರ್​! | Murderer

Murderer (1)
Published on

ಛತ್ತೀಸ್​​ಗಢ: ತನ್ನ ಪತ್ನಿಯನ್ನು ಕೊಂದು(Murderer) ಪರಾರಿಯಾಗಿದ್ದವನನ್ನು ಛತ್ತೀಸ್​​ಗಢದ ಪೊಲೀಸರು 12 ವರ್ಷಗಳ ಬಳಿಕ ಇದೀಗ ಸೆರೆ ಹಿಡಿದಿದ್ದಾರೆ.

ಆರೋಪಿಯು ಛತ್ತೀಸ್​​ಗಢದ ವಿವಿಧ ಜಿಲ್ಲೆಗಳಲ್ಲಿ ತಲೆ ಮರೆಸಿಕೊಂಡು ಮತ್ತು ತನ್ನ ವಿಳಾಸವನ್ನು ಬದಲಾಯಿಸುತ್ತಾ, ಪೊಲೀಸರ ಕಣ್ಣು ತಪ್ಪಿಸುವ ಮೂಲಕ ಇತರೆ ವೇಶಗಳಲ್ಲಿ ಓಡಾಡುತ್ತಿದ್ದನು. ಹಳೆ ಪ್ರಕರಣಗಳ ನಿತ್ಯಾ ಪರಿಶೀಲನೆ ವೇಳೆ ಮಾಹಿತಿದಾರರು ನೀಡಿದ ಸುಳಿವು ಹಿನ್ನೆಲೆ ರಾಜನಂದಾಗಾವ್​ ಎಂಬಲ್ಲಿ ಇತನನ್ನು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಬಂಧಿತ ಆರೋಪಿ ಮತ್ತು ಇತನ ಪತ್ನಿ ಮದ್ಯವ್ಯಸನಿಗಳಾಗಿದ್ದು, ದಿನಾ ಕುಡಿಯುತ್ತಿದ್ದರು. ಕೌಟುಂಬಿಕ ಜಗಳದ ಹಿನ್ನೆಲೆ ಮದ್ಯದ ಆಮಲಿನಲ್ಲಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಆರೋಪಿ ಪರಾರಿಯಾಗಿದ್ದಾನೆ. ಬಳಿಕ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದ್ದಾರೆ. ಆದರೆ, ಅಂಬ್ಯುಲೆನ್ಸ್​ನಲ್ಲಿ ಕರೆದೊಯ್ಯುವ ವೇಳೆ ದಾರಿಯ ಮಧ್ಯೆ ಮೃತಪಟ್ಟಿದ್ದಾಳೆ. ಹೀಗಾಗಿ, ಇತನ ವಿರುದ್ಧ ದೂರು ದಾಖಲಿಸಿ, 12 ವರ್ಷಗಳಿಂದ ಪೊಲೀಸರು ಬಲೆ ಬೀಸಿದ್ದರು.

''ಆರೋಪಿ ತುಂಬಾ ಚಾಣಕ್ಷ್ಯನಾಗಿದ್ದು, ಪೊಲೀಸರು ಕಣ್ಣು ತಪ್ಪಿಸಿ ಓಡಾಡುತ್ತಿದ್ದ. ಅಗಾಗ ತಮ್ಮ ಮಗಳ ಮನೆಯಲ್ಲಿ ಇರುವ ಇತ, ಅಧಿಕಾರಿಗಳ ಸುಳಿವು ತಿಳಿದು, ಅಲ್ಲಿಂದ ತಲೆಮಾರಿಸಿರಕೊಳ್ಳುತ್ತಿದ್ದ. ರಾಜ್ಯದಲ್ಲಿ ಬೇರೆ ಬೇರೆ ಜಿಲ್ಲೆಯಗಳಲ್ಲಿ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ. ಕಳೆದ ಒಂದು ವರ್ಷದಿಂದ ಇತನ ಚಲನವಲಗಳ ಮೇಲೆ ತೀವ್ರಾ ನಿಗಾ ಇರಿಸಿದ್ದ ಅಧಿಕಾರಿಗಳು ಇತನನ್ನು ಬಂಧಿಸುವಲ್ಲಿ ಕೊನೆಗೆ ಯಶ ಕಂಡಿದ್ದಾರೆ'' ಎಂದು ಎಎಸ್ಪಿ ಭಿಲಾಯ್​ ಸುಖ್​ ನಂದನ್​ ರಾಥೋಡ್​ ತಿಳಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net