

ಮಹಾರಾಷ್ಟ್ರ : ಮೂರು ವರ್ಷದ ಬಾಲಕಿಗೆ ತನ್ನ ಚಿಕ್ಕಪ್ಪ ತಮಾಷೆಗಾಗಿ ಕಪಾಳಮೋಕ್ಷ (Uncle Slaps )ಮಾಡಿದ ಹಿನ್ನೆಲೆ ಕೆಳಗಡೆ ಕಲ್ಲಿಗೆ ಬಿದ್ದ ಮಗು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಥಾಣೆ ಜಿಲ್ಲೆಯ ಉಲ್ಲಾಸ ನಗರದಲ್ಲಿ ಇತ್ತೀಚಿಗೆ ನಡೆದಿದೆ.
ಅಲ್ಲದೇ, ಘಟನೆ ಯಾರು ಇಲ್ಲದ ವೇಳೆ ನಡೆದಿದ್ದರಿಂದ ಚಿಕ್ಕಪ್ಪ ಮೃತ ಮಗುವನ್ನು ಅಪಹರಿಸಿ ನಗರದ ಹೊರವಲಯದ ಪೊದೆವೊಂದರಲ್ಲಿ ಸುಟ್ಟು ಹಾಕಿ, ಪರಾರಿಯಾಗಿದ್ದನು. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇತನ್ನು ಮತ್ತು ಇಬ್ಬರು ಸಹಚರರನ್ನು ಗುರುವಾರ(ನ.21) ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಕೇಸ್ ದಾಖಲಿಸಿ ತನಿಖೆ ಆರಂಭಿಸಿದ ಪೊಲಿಸರು, ಬಾಲಕಿಯನ್ನು ಕೊಲೆ ಮಾಡಿರುವುದಾಗಿ ಈ ಮೂವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ ಹೀಗಿದೆ;
ಕಳೆದ ಸೋಮವಾರ(ನ.18) ಚಿಕ್ಕಪ್ಪನ ಜತೆ ಮಗು ಮನೆಯಲ್ಲಿ ಆಟವಾಡುತ್ತಿದ್ದಾಗ ತಮಾಷೆಗಾಗಿ ಕಪಾಳಕ್ಕೆ ಹೊಡೆದಿದ್ದಾನೆ. ಮಗು ಕಲ್ಲಿಗೆ ಬಿದ್ದು ಮೃತಪಟ್ಟಿದೆ. ಇದರಿಂದ ಭಯಭೀತಿಗೊಂಡ ಚಿಕ್ಕಪ್ಪ ತನ್ನ ಸ್ನೇಹಿತರಿಗೆ ಪೋನ್ ಮಾಡಿ, ಅವರ ಸಹಾಯದಿಂದ ಆಟೋ ತರಿಸಿಕೊಂಡು ಮಗುವಿನ ದೇಹವನ್ನು ಅಪಹರಿಸಿದ್ದಾನೆ. ಬಳಿಕ ತನ್ನ ಸ್ನೇಹಿತರಿಗೆ ಘಟನೆ ವಿವರಿಸಿ ಅವರ ಜತೆ ನಗರದ ಹೊರ ವಲಯದ ಪೊದೆಯೊಂದರಲ್ಲಿ ಸುಟ್ಟು ಹಾಕಿ ಪರಾರಿಯಾಗಿದ್ದಾನೆ. ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಮಗುವಿನ ತಾಯಿ ದೂರು ನೀಡಿದ ಹಿನ್ನಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಟೋ ಚಾಲನೆಯ ಬಗ್ಗೆ ಅನುಮಾನ ಮೂಡಿದ ಕಾರಣ ಸಿಸಿಟಿವಿಯ ದೃಶ್ಯಾವಳಿ ಪರಿಶೀಲನೆ ಮಾಡಿ, ಆಟೋ ಚಾಲಕನ್ನು ವಶಕ್ಕೆ ಪಡೆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ, (ಏಜೆನ್ಸೀಸ್).